ದರ್ಶನ್, ಉಮಾಪತಿ ನಡುವೆ ಕಾಟೇರ ಟೈಟಲ್ ವಾರ್

ಸಮಗ್ರ ನ್ಯೂಸ್: ಚಾಲೆಂಜಿಗ್ ಸ್ಟಾರ್ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಗೌಡ ನಡುವೆ ಟಗ್ ಅಫ್ ವಾರ್ ಜೋರಾಗಿದೆ. ‘ಕಾಟೇರ’ ಸಿನಿಮಾದ ಮೂಲಕ ನಟ ದರ್ಶನ್ ದೊಡ್ಡ ಯಶಸ್ಸು ಕಂಡಿದ್ದಾರೆ. ಈ ಚಿತ್ರದ 50ನೇ ದಿನದ ಸೆಲೆಬ್ರೇಷನ್​ ಅನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾಡಲಾಗಿದೆ. ಈ ವೇಳೆ ದರ್ಶನ್​ ಅವರು ವೇದಿಕೆ ಮೇಲೆ ಉಮಾಪತಿಗೆ ತಿರುಗೇಟು ನೀಡಿದ್ದಾರೆ. ‘ಕಾಟೇರ’ ಸಿನಿಮಾದ ಟೈಟಲ್​ ನೀಡಿದ್ದೇ ತಾವು ಎಂದು ಈ ಮೊದಲು ಉಮಾಪತಿ ಶ್ರೀನಿವಾಸ್​ ಗೌಡ ಅವರು ಹೇಳಿದ್ದರು. ಅದಕ್ಕೆ ದರ್ಶನ್​ ತಿರುಗೇಟು ನೀಡಿದ್ದಾರೆ.

Ad Widget ... ..

ಕಥೆ ನಾನು ಮಾಡಿಸಿದೆ, ಟೈಟಲ್​ ನಾನು ಕೊಟ್ಟೆ ಅಂತ ಕೆಲವರು ಹೇಳಿದ್ರು. ಅಯ್ಯೋ ತಗಡೇ.. ನಿನಗೆ ರಾಬರ್ಟ್​ ಚಿತ್ರದ ಕಥೆ ಕೊಟ್ಟಿದ್ದೇ ನಾವು. ಕೊಟ್ಟಿದ್ದನ್ನೆಲ್ಲ ಹೇಳಬಾರದು. ಯಾಕೆಂದರೆ, ಒಂದು ಕಡೆ ಇದೇ ರೀತಿ ಸಿಕ್ಕಿಹಾಕಿಕೊಂಡ ಮೇಲೂ ಬುದ್ಧಿ ಕಲಿತಿಲ್ಲ ಅಂದರೆ ಏನು ಹೇಳೋಣ? ಕಾಟೇರ ಕಥೆ ನೀನೇ ಮಾಡಿಸಿದ್ದು ಎಂಬುದಾದರೆ ಇಂಥ ಒಳ್ಳೆಯ ಕಥೆಯನ್ನು ನೀನು ಯಾಕೆ ಬಿಟ್ಟೆ? ನಿನ್ನ ಜಡ್ಜ್​ಮೆಂಟ್​ ಅಷ್ಟು ಚೆನ್ನಾಗಿದೆ. ನೀನೇ ಸಿನಿಮಾ ಮಾಡಬಹುದಿತ್ತಲ್ಲ’ ಎಂದು ದರ್ಶನ್​ ಅವರು ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ತಿರುಗೇಟು ನೀಡಿದ್ದಾರೆ.

Ad Widget

ದರ್ಶನ್ ಹೇಳಿಕೆಗೆ ರಿಯಾಕ್ಟ್ ಮಾಡಿದ ನಿರ್ಮಾಪಕ ಉಮಾಪತಿ ಏನೋ ದೊಡ್ಡವರು ತಮ್ಮನ್ನು ತಗಡು ಅನ್ನುತ್ತಿದ್ದಾರೆ. ಅವರು ದೊಡ್ಡ ಮಟ್ಟಕ್ಕೆ ಬೆಳೆದವರು, ನಾವು ಅವರ ಮಟ್ಟಕ್ಕೆ ಬೆಳೆದ ನಂತರ ಉತ್ತರಿಸುತ್ತೇವೆ. ತಗಡುಗಳು ದರ್ಶನ್ ಗೆ ಉತ್ತರಿಸಲು ಆಗುತ್ತಾ? ನಾವು ಅಲ್ಲೊ ಇಲ್ಲೊ ಕೂಲಿ ಮಾಡಿಕೊಂಡು ಇದ್ದೇವೆ ಎಂದು ಕೌಂಟರ್ ಕೊಟ್ಟಿದ್ದಾರೆ.

Leave a Comment

Your email address will not be published. Required fields are marked *