ಸಮಗ್ರ ನ್ಯೂಸ್: ಇತ್ತೀಚೆಗೆ ನಿರುದ್ಯೋಗಿಗಳು ಹೆಚ್ಚು. ಕೆಲಸಕ್ಕಾಗಿ ಹುಡುಕಾಟ ನಡೆಸುವ ಯುವಕರನ್ನೇ ಟಾರ್ಗೆಟ್ ಮಾಡಿ ಉದ್ಯೋಗ ಕೊಡಿಸೋದಾಗಿ ಹೇಳಿ ವಂಚನೆ ಮಾಡುವ ಘಟನೆ ನಡೆಯುತ್ತಿರುತ್ತದೆ. ಇದೇ ವಿಚಾರವಾಗಿ ದಂಪತಿಯನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ಹಾಗೂ ಮಧು ಜೋಡಿ, ಕೆಲಸಕ್ಕಾಗಿ ಅಲೆಯುವ ಯುವಕರನ್ನು ಹುಡುಕಿ ಸರ್ಕಾರಿ ನೌಕರಿ ಕೊಡಿಸೋದಾಗಿ ಕಾಗೆ ಹಾರಿಸುತ್ತಿದ್ದರು. ನಮಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯ ಇದೆ. ಅಲ್ಲದೆ ವಿವಿಧ ಇಲಾಖೆಯ ಮುಖ್ಯಸ್ಥರು ಪರಿಚಯ ಇದ್ದಾರೆ. ಖಾಲಿ ಇರುವ ಸರ್ಕಾರಿ ಕೆಲಸ ಕೊಡಿಸೋದಾಗಿ ಹೇಳಿ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು. 6 ಲಕ್ಷ ಹಣ ಪಡೆದು ಕೆಲಸ ಕೊಡಿಸದೇ ಕಳ್ಳಾಟ ಆಡ್ತಿದ್ದರು. ಈ ಪ್ರಕರಣ ವಿದ್ಯಾರಣ್ಯಪುರ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಈ ಮೊದಲೆ 3 ಪ್ರಕರಣ ದಾಖಲಾಗಿದೆ. ಹಾಗೇ ನಗರದ ಹಲವು ಠಾಣೆಗಳಲ್ಲೂ ದಂಪತಿ ವಿರುದ್ಧ ಕೇಸ್ ಗಳಿವೆ.
ಬಂಧಿತರಿಂದ 2 ಲಕ್ಷ ನಗದು ಹಣ, 4 ಫೋನ್, ಒಂದು ದ್ವಿಚಕ್ರ ವಾಹನ, 6 ಬ್ಯಾಂಕ್ ಅಕೌಂಟ್ ಗೆ ಸೇರಿದಂತೆ 16 ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. 11 ವಿವಿಧ ಕಂಪನಿಯ ವಾಚ್ ಗಳು, ಚಿನ್ನದಂತೆ ಕಾಣುವ 2 ನಕಲಿ ಬ್ರೇಸ್ ಲೈಟ್, 1 ಚೈನ್, 2 ಉಂಗುರ, 2 ಪೆಂಡೆಂಟ್ಗಳನ್ನು ವಶಕ್ಕೆ ಪಡೆಯಲಾಗಿದೆ