ಸಮಗ್ರ ಉದ್ಯೋಗ: Staff Selection Commission ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 121 ಅಸಿಸ್ಟೆಂಟ್, ಕ್ಲರ್ಕ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
ಹುದ್ದೆಯ ಮಾಹಿತಿ:
ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 52
ಸೀನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 69
ವಿದ್ಯಾರ್ಹತೆ:
ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 45 ವರ್ಷ
ಸೀನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- 50 ವರ್ಷ
ವಯೋಮಿತಿ ಸಡಿಲಿಕೆ:
PWD ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PWD (SC/ST) ಅಭ್ಯರ್ಥಿಗಳು: 08 ವರ್ಷಗಳು
ವೇತನ:
ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 19,900-63,200
ಸೀನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 25,500-81,100
ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ
ಲಿಖಿತ ಪರೀಕ್ಷೆ
ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್ಲೈನ್ & ಆಫ್ಲೈನ್ ಮೂಲಕ ಅಪ್ಲೈ ಮಾಡಬಹುದು ಎಂದು ನೋಟಿಫಿಕೇಶನ್ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್ನ್ನು ಈ ಕೆಳಗೆ ನೀಡಲಾಗಿದೆ.
https://ssc.nic.in/ online apply
ಅಥವಾ ಆಫ್ಲೈನ್/ಪೋಸ್ಟ್ ಮೂಲಕ ಅಪ್ಲೈ ಮಾಡುವವರು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಪ್ರಾದೇಶಿಕ ನಿರ್ದೇಶಕರು
ಸಿಬ್ಬಂದಿ ಆಯ್ಕೆ ಆಯೋಗ (ಉತ್ತರ ಪ್ರದೇಶ)
ಬ್ಲಾಕ್ ನಂ.12
ಸಿ.ಜಿ.ಓ. ಕಾಂಪ್ಲೆಕ್ಸ್
ಲೋಧಿ ರಸ್ತೆ
ನವದೆಹಲಿ-110003
ಕೇಂದ್ರ ಸರ್ಕಾರದ ಉದ್ಯೋಗ ಮಾಡ ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಆಸಕ್ತರು ಫೆಬ್ರವರಿ 23, 2024 ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.