Ad Widget .

ವಾಹನ ಸವಾರರೇ ಎಚ್ಚರ/ ಭಾರತದಲ್ಲಿ ಈ 32 ಫಾಸ್ಟಾಗ್‍ಗಳಿಗೆ ಮಾತ್ರ ಅಧಿಕೃತ ಮಾನ್ಯತೆ

ಸಮಗ್ರ ನ್ಯೂಸ್: ನೋಂದಾಯಿತ ಬ್ಯಾಂಕ್‍ಗಳ ಅಧಿಕೃತ ಫಾಸ್ಟ್ರಾಗ್ ಪಟ್ಟಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಡುಡೆ ಮಾಡಿದ್ದು, ಭಾರತದಲ್ಲಿ ಒಟ್ಟು 32 ಬ್ಯಾಂಕ್‍ಗಳ ಫಾಸ್ಟ್ರಾಗ್‍ಗೆ ಮಾತ್ರ ಸರ್ಕಾರದ ಅಧಿಕೃತ ಮಾನ್ಯತೆ ಇದೆ. ಈ ಪಟ್ಟಿಯಲ್ಲಿ ಇಲ್ಲದೆ ಇರುವ ಬ್ಯಾಂಕ್‍ಗಳ ಫಾಸ್ಟ್ರಾಗ್ ಬಳಸುತ್ತಿದ್ದರೆ, ಮಾರ್ಚ್ 15ರ ಬಳಿಕ ಕಾರ್ಯನಿರ್ವಹಿಸುವುದಿಲ್ಲ.

Ad Widget . Ad Widget .

ಟೋಲ್‍ಗಳ ಶುಲ್ಕ ನಿರ್ವಹಣೆಯ ಹೊಣೆ ಹೊತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಂಗಸಂಸ್ಥೆಯಾದ ಇಂಡಿಯನ್ ಹೈವೇಸ್ ಮ್ಯಾನೇಜ್‍ಮೆಂಟ್ ಕಂಪನಿ ಲಿ. (ಐಎಚ್‍ಎಂಸಿಎಲ್) ಇತ್ತೀಚೆಗೆ ಈ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಫಾಸ್ಟ್ರಾಗ್‍ನ್ನು ತೆಗೆದುಹಾಕಿದೆ. ಕೆವೈಸಿ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಫೆ.29ರಿಂದ ವಿವಿಧ ಸೇವೆಗಳನ್ನು ರದ್ದುಪಡಿಸುವಂತೆ ಪೇಟಿಎಂ ಪೇಮೆಂಟ್ ಬ್ಯಾಂಕ್‍ಗೆ ಆರ್‍ಬಿಐ ಇತ್ತೀಚೆಗೆ ಸೂಚಿಸಿತ್ತು. ಜೊತೆಗೆ ನಿಯಮಬಾಹಿರವಾಗಿ ಆರಂಭಿಸಲಾದ ಕೆಲ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ ನಡೆದಿರಬಹುದೆಂಬ ಶಂಕೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡಾ ಬ್ಯಾಂಕ್ ವಿರುದ್ಧ ತನಿಖೆ ಆರಂಭಿಸಿದೆ.

Ad Widget . Ad Widget .

ಏರ್ಟೆಲ್ ಪಾವತಿ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಸಣ್ಣ ಹಣಕಾಸು ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್, ಕಾಸ್ಮಾಸ್ ಬ್ಯಾಂಕ್, ಈಕ್ವಿಟಾಸ್ ಸಣ್ಣ ಹಣಕಾಸು ಬ್ಯಾಂಕ್, ಫೆಡರಲ್ ಬ್ಯಾಂಕ್, ಬ್ಯಾಂಕ್, ಫಸ್ಟ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜೆ & ಕೆ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ನಾಗುರ್ ನಾಗರಿಕ್ ಸಹಕಾರಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತ್ರಿಶೂರ್ ಜಿಲ್ಲಾ ಸಹಕಾರಿ ಬ್ಯಾಂಕ್, HDFC, IDBI, IDFC, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯೆಸ್ ಬ್ಯಾಂಕ್ ನೀಡುವ ಫಾಸ್ಟ್ರಾಗ್ ಅಧಿಕೃತ ಎಂದು ಪ್ರಾಧಿಕಾರ ಹೇಳಿದೆ.

Leave a Comment

Your email address will not be published. Required fields are marked *