Ad Widget .

ಗಡಿಭಾಗದಲ್ಲಿನ ಆನೆದಾಳಿಗೆ ಕೇರಳದಿಂದ ಪರಿಹಾರ ತರಿಸಲು ಸಾಧ್ಯವೇ? – ಡಿ.ವಿ ಸದಾನಂದ ಗೌಡ ಪ್ರಶ್ನೆ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕೇರಳ ಗಡಿ ಭಾಗದಲ್ಲಿ ಹಲವು ವರ್ಷಗಳಿಂದ ಆನೆಗಳು ನಿರಂತರ ದಾಳಿ ಮಾಡುತ್ತಿದ್ದು, ಇದಕ್ಕೆ ಕೇರಳ ಸರಕಾರದಿಂದ ಪರಿಹಾರ ತರಿಸಬಹುದೇ ಎಂದು ಕಾಂಗ್ರೆಸ್‌ ಅನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Ad Widget . Ad Widget .

ಕೇರಳ ಗಡಿ ಭಾಗದಲ್ಲಿ ಹಲವು ವರ್ಷಗಳಿಂದ ಆನೆಗಳು ನಿರಂತರ ದಾಳಿ ಮಾಡಿ ಸಾವಿರಾರು ಎಕರೆ ಕೃಷಿ ನಾಶ ಮಾಡುತ್ತಿವೆ. ಈ ಆನೆಗಳು ಕೇರಳ ಭಾಗದಿಂದ ಬರುತ್ತಿರುವುದರಿಂದ ಪರಿಹಾರವನ್ನು ಕೇರಳ ಸರಕಾರದಿಂದ ತರಿಸಿ ಕೊಡಲು ರಾಹುಲ್‌ ಗಾಂಧಿ ಮತ್ತು ಕೆಸಿ ವೇಣುಗೋಪಾಲ್‌ ಅವರಿಗೆ ಪತ್ರ ಬರೆಯಬಹುದೇ? ಎಂದು ಕರ್ನಾಟಕ ಕಾಂಗ್ರೆಸ್‌ಗೆ ಡಿವಿ ಸದಾನಂದ ಗೌಡ ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

Ad Widget . Ad Widget .

ಕೇರಳದ ವಯನಾಡ್‌ನ‌ಲ್ಲಿ ಆನೆ ತುಳಿತಕ್ಕೆ ಒಳಗಾಗಿ ಸತ್ತಿರುವ ವ್ಯಕ್ತಿಗೆ ಕರ್ನಾಟಕದ ತೆರಿಗೆ ಹಣದಿಂದ ಪರಿಹಾರ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದೂ ಅವರನ್ನು ಪೋಸ್ಟ್ ನಲ್ಲಿ ಮೂಲಕ ಪ್ರಶ್ನಿಸಿದ್ದಾರೆ.

Leave a Comment

Your email address will not be published. Required fields are marked *