Ad Widget .

ಚಂದಗಾಣಲೆಂದು ಹಲ್ಲಿನ ಶಸ್ತ್ರಚಿಕಿತ್ಸೆಗೆ ಹೋಗಿ ಪ್ರಾಣ ಕಳೆದುಕೊಂಡ ಮದುಮಗ

ಸಮಗ್ರ ನ್ಯೂಸ್: ಮದುವೆಯ ದಿನ ಚೆನ್ನಾಗಿ ಕಾಣಿಸಬೇಕು ಎಂದು ಸ್ಮೈಲ್ ಡಿಸೈನಿಂಗ್ (Smile Designing) ಶಸ್ತ್ರಚಿಕಿತ್ಸೆಗೆ ಹೋಗಿ ಪ್ರಾಣವನ್ನೇ ಕಳೆದುಕೊಂಡ ವಿಚಿತ್ರ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.

Ad Widget . Ad Widget .

ಲಕ್ಷ್ಮಿ ನಾರಾಯಣ ವಿಂಜಮ್ (28) ಎಂಬಾತ ಮದುವೆಯ ದಿನ ತಾನು ಚೆನ್ನಾಗಿ ಕಾಣಿಸಲು ಹೈದರಾಬಾದ್ ನ ಜುಬಿಲಿ ಹಿಲ್ನಲ್ಲಿರುವ ಎಫ್ಎಂಎಸ್ ಇಂಟರ್ನ್ಯಾ ಷನಲ್ ಡೆಂಟಲ್ ಕ್ಲಿನಿಕ್ ನಲ್ಲಿ ಸ್ಮೈಲ್ ಡಿಸೈನಿಂಗ್ ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಪ್ರಜ್ಞೆ ತಪ್ಪಿಸುವ ಔಷಧ (ಅನಸ್ತೇಶಿಯಾ) ಹೆಚ್ಚು ಕೊಟ್ಟ ಕಾರಣ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

Ad Widget . Ad Widget .

ಶಸ್ತ್ರಚಿಕಿತ್ಸೆ ವೇಳೆ ತನ್ನ ಮಗ ಪ್ರಜ್ಞಾ ಹೀನನಾಗಿದ್ದ. ಸರ್ಜರಿ ಬಳಿಕ ಅವನ ತಲೆಯಲ್ಲಿ ಯಾವುದೇ ಚಲನೆಯಿಲ್ಲದಿದ್ದಾಗ ಕ್ಲಿನಿಕ್ ಸಿಬ್ಬಂದಿ ನನ್ನನ್ನು ಕರೆದರು. ನಾನು ಹೋಗಿ ನೋಡಿದಾಗ ಗಾಬರಿಯಾಗಿ ಕೂಡಲೇ ನಾವು ಆತನನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಈ ವೇಳೆ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದರು. ಮಗನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆದರೆ ಈ ಸಾವಿಗೆ ವೈದ್ಯರೇ ನೇರ ಕಾರಣ ಎಂದು ಲಕ್ಷ್ಮಿ ನಾರಾಯಣ ತಂದೆ ರಾಮುಲು ವಿಂಜಮ್ ಕಣ್ಣೀರು ಹಾಕಿದ್ದಾರೆ.

ಏನಿದು ಸ್ಮೈಲ್ ಡಿಸೈನಿಂಗ್?:
ಜನರು ತಮ್ಮ ಹಲ್ಲುಗಳನ್ನು ಸರಿಪಡಿಸಲು, ಶುಚಿಗೊಳಿಸುವಿಕೆಗೆ ಆಸ್ಪತ್ರೆಗೆ ಹೋಗುತ್ತಾರೆ. ಇದರಿಂದ ಅವುಗಳು ಹೆಚ್ಚು ಹೊಳೆಯುವಂತೆ ಕಾಣುತ್ತವೆ. ಮಾನವನ ಹಲ್ಲುಗಳು ಕಾಲಾನಂತರದಲ್ಲಿ ಸಡಿಲಗೊಳ್ಳುತ್ತವೆ ಮತ್ತು ಅವುಗಳ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ಮೈ ಲ್ ಡಿಸೈನ್ ಸರ್ಜರಿ ಮೂಲಕ ಅವುಗಳನ್ನು ಹೊಳೆಯುವಂತೆ ಮಾಡಲಾಗುತ್ತದೆ.

ಸದ್ಯ ಈ ಘಟನೆ ಸಂಬಂಧ ಕ್ಲಿನಿಕ್ ವೈದ್ಯರ ನಿರ್ಲಕ್ಷ್ಯದಿಂದ ಸಾವು ಎಂದು ಪ್ರ ಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಕ್ಲಿನಿಕ್ ನ ದಾಖಲೆಗಳು ಹಾಗೂ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *