ಸುಳ್ಯ: ಹೀಗೊಂದು ಗ್ಯಾಸ್ ಸಿಲಿಂಡರ್ ಕಳ್ಳತನ

ಸಮಗ್ರ ನ್ಯೂಸ್: ಮನೆಯ ಹಿಂಬದಿ ಗ್ಯಾಸ್‌ ಒಲೆಗೆ ಇರಿಸಲಾಗಿದ್ದ ಗ್ಯಾಸ್‌ ಸಿಲಿಂಡರನ್ನು ಕಳವುಗೈದು ತಾನು ತಂದ ಖಾಲಿ ಜಾಡಿಯನ್ನು ಅಲ್ಲಿರಿಸಿ ಹೋಗಿರುವ ಘಟನೆ ಸುಳ್ಯದ ಜಯನಗರದಲ್ಲಿ ಫೆ. 18ರ ರಾತ್ರಿ ಬೆಳಕಿಗೆ ಬಂದಿದೆ.

Ad Widget ... ..

ಜಯನಗರ ನಿವಾಸಿ ದಿ| ನೌಶಾದ್‌ ಅವರ ಮನೆಯ ಹಿಂಬದಿಯಲ್ಲಿ ಗ್ಯಾಸ್‌ ಒಲೆಗೆ ಅಳವಡಿಸಲಾಗಿದ್ದ ಗ್ಯಾಸ್‌ ತುಂಬಿದ್ದ ಸಿಲಿಂಡರ್‌ ಕಳ್ಳತನವಾಗಿದೆ.

Ad Widget

ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು ಮಾತ್ರ ಇದ್ದು ಅವರು ಮನೆಯ ಒಳಗೆ ಇದ್ದಾಗಲೇ ಕಳ್ಳ ಇಂಡೇನ್‌ ಕಂಪೆನಿಯ ಸಿಲಿಂಡರನ್ನು ಇರಿಸಿ ನೂತನ ಎಚ್‌ಪಿ ಕಂಪೆನಿಯ ಸಿಲಿಂಡರನ್ನು ಹೊತ್ತು ಪರಾರಿಯಾಗಿದ್ದಾನೆ. ರಾತ್ರಿ ಮನೆಯವರು ಗ್ಯಾಸ್‌ ಸ್ಟವ್‌ ಉರಿಸುವ ಸಂದರ್ಭ ಒಲೆ ಉರಿಯದ ಕಾರಣ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

Leave a Comment

Your email address will not be published. Required fields are marked *