Ad Widget .

ಮತದಾನ ಜಾಗೃತಿ/ ಶುಭ್‍ಮನ್ ಗಿಲ್ ಪಂಜಾಬ್ ರಾಜ್ಯ ಐಕಾನ್ ಆಗಿ ಆಯ್ಕೆ

ಸಮಗ್ರ ನ್ಯೂಸ್: ಮತದಾರರಲ್ಲಿ ಜಾಗೃತಿ ಮೂಡಿಸಲು, ಪಂಜಾಬ್ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಭಾರತೀಯ ಕ್ರಿಕೆಟಿಗ ಶುಭ್‍ಮನ್ ಗಿಲ್ ಅವರನ್ನು ರಾಜ್ಯ ಐಕಾನ್ ಎಂದು ಘೋಷಿಸಿದೆ. ಲೋಕಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಚುನಾವಣೆಯಲ್ಲಿ ಶೇ. 70 ರಷ್ಟು ಮತದಾನವನ್ನು ಖಚಿತಪಡಿಸಿಕೊಳ್ಳಲು ಗಿಲ್ ವಿವಿಧ ಅಭಿಯಾನಗಳಲ್ಲಿ ಭಾಗವಹಿಸುತ್ತಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಸಿಬಿನ್ ಸಿ ಅವರು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ad Widget . Ad Widget .

ಕ್ರೀಡಾ ಉತ್ಸಾಹಿಗಳಲ್ಲಿ ವಿಶೇಷವಾಗಿ ಯುವಕರಲ್ಲಿ ಜನಪ್ರಿಯರಾಗಿರುವ ಪಂಜಾಬ್ ನಿವಾಸಿ ಗಿಲ್ ಅವರನ್ನು ಚುನಾವಣೆಗೆ ರಾಜ್ಯ ಐಕಾನ್” ಆಗಿ ನೇಮಿಸಲಾಗಿದೆ. ಕಳೆದ ಬಾರಿ ಪಂಜಾಬ್‍ನ 13 ಸ್ಥಾನಗಳಲ್ಲಿ ನಡೆದ 2019ಕ ಲೋಕಸಭೆ ಚುನಾವಣೆಯಲ್ಲಿ ಶೇ. 65.96 ಮತದಾನವಾಗಿದ್ದು, ಈ ಬಾರಿ ಚುನಾವಣಾ ಆಯೋಗ ಶೇ. 70 ರಷ್ಟು ಮತದಾನದ ಗುರಿ ಹೊಂದಿದೆ ಎಂದು ಸಿಇಒ ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *