Ad Widget .

ಆಂಬ್ಯುಲೆನ್ಸ್‌ನಲ್ಲಿ ಗಾಂಜಾ ಸಾಗಾಟ| ಇಬ್ಬರ ಬಂಧನ| 4 ಕೆಜಿ ಗಾಂಜಾ ವಶಕ್ಕೆ

ಸಮಗ್ರ ನ್ಯೂಸ್: ಮಾದಕ ಪದಾರ್ಥಗಳ ಸಾಗಾಟಕ್ಕೆ ಆ್ಯಂಬುಲೆನ್ಸ್‌ಗಳ ಬಳಕೆಯಾಗುತ್ತಿರುವ ಅಘಾತಕಾರಿ ಸುದ್ದಿ ಕೇರಳದಲ್ಲಿ ಬೆಳಕಿಗೆ ಬಂದಿದೆ. ಆಂಬ್ಯುಲೆನ್ಸ್‌ನಲ್ಲಿ ಸಾಗಿಸುತ್ತಿದ್ದ 4ಕೆಜಿ ಗಾಂಜಾ ಸಹಿತ ಇಬ್ಬರನ್ನು ಕೊಲ್ಲಂನ ಪತ್ತನಪುರಂ ಪಿಟವೂರ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

Ad Widget . Ad Widget .

ಕಾರವೂರು ಮೂಲದ ವಿಷ್ಣು ಹಾಗೂ ಪುನಲೂರಿನ ನಾಸೀರ್ ಬಂಧಿತ ಆರೋಪಿಗಳಾಗಿದ್ದಾರೆ. ಪುನಲೂರಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರ ಬಲೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಪುನಲೂರು ತಾಲೂಕು ಆಸ್ಪತ್ರೆ ಬಳಿ ಹೋಗುತ್ತಿದ್ದ ಆಂಬ್ಯುಲೆನ್ಸ್ ಸಮಶಯವಾಗಿ ನಿಲ್ಲಿಸಿ ತಪಾಸಣೆ ನಡೆಸಿದಾಗ ಕೃತ್ಯ ಬಯಲಾಗಿದೆ.

Ad Widget . Ad Widget .

ಪಠಾಣಪುರಂ ಪ್ರದೇಶಕ್ಕೆ ಗಾಂಜಾ ವ್ಯಾಪಕವಾಗಿ ಸಾಗಾಟವಾಗುತ್ತಿರುವ ರಹಸ್ಯ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಈ ಅಕ್ರಮ ಜಾಲ ಬಯಲಾಗಿದೆ. ತಲಾ 2 ಕೆಜಿಯ ಎರಡು ಪೊಟ್ಟಣಗಳಲ್ಲಿ 4ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *