ಸಲಿಂಗ ವಿವಾಹಕ್ಕೆ ಗ್ರೀಸ್‍ನಲ್ಲಿ ಕಾನೂನಿನ ಮಾನ್ಯತೆ/ ಸಲಿಂಗ ವಿವಾಹ ಮಾನ್ಯಗೊಳಿಸಿದ ಜಗತ್ತಿನ ಮೊದಲ ದೇಶ

ಸಮಗ್ರ ನ್ಯೂಸ್: ಸಲಿಂಗ ವಿವಾಹವನ್ನು ಕಾನೂನುಬದ್ದಗೊಳಿಸುವ ಮೂಲಕ ಸಲಿಂಗ ವಿವಾಹ ಮಾನ್ಯಗೊಳಿಸಿದ ಜಗತ್ತಿನ ಮೊದಲ ದೇಶವಾಗಿ ಗ್ರೀಸ್ ಹೊರಹೊಮ್ಮಿದೆ. ಪ್ರಧಾನ ಮಂತ್ರಿ ಕಿರಿಯಾಕೋಸ್ ಮಿಟ್ರೊಟಾಕಿಸ್, ಸಲಿಂಗ ದಂಪತಿಯು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಸಂಸತ್ತಿನಲ್ಲಿ ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ಈ ಹೊಸ ಕಾನೂನು ಅಸಮಾನತೆಯನ್ನು ನಿರ್ಮೂಲನೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

Ad Widget ... ..

ಅರ್ಥೋಡಾಕ್ಸ್ ಚರ್ಚ್ ನೇತೃತ್ವದಲ್ಲಿ ಈ ಕಾನೂನಿಗೆ ತೀವ್ರ ಪ್ರತಿರೋಧ ವ್ಯಕ್ತವಾಗಿದ್ದು, ಇದರ ವಿರುದ್ಧ ಅಥೆನ್ಸ್‍ನಲ್ಲಿ ಪ್ರತಿಭಟನಾ ರ್ಯಾಲಿ ಕೂಡ ನಡೆಸಲಾಗಿದೆ. ರಾಜಧಾನಿಯ ಸಿಂಟಾಗ್ಯಾ ಸ್ಟೇರ್‍ನಲ್ಲಿ ಅನೇಕರು ಬ್ಯಾನರ್, ಶಿಲುಬೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಬೈಬಲ್ ಸಾಲುಗಳನ್ನು ಸಹ ವಾಚಿಸಿದ್ದಾರೆ. ಇದೀಗ 300 ಸದಸ್ಯ ಬಲದ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಲು ಸರಳ ಬಹುಮತದ ಅಗತ್ಯವಿದೆ.

Ad Widget

Leave a Comment

Your email address will not be published. Required fields are marked *