ಬೆಂಗಳೂರು: ಹೆತ್ತವರಿಗೆ ತಿಳಿಯದಂತೆ 25 ವರ್ಷದ ಯುವಕನೊಂದಿಗೆ ಅಪ್ರಾಪ್ತ ಬಾಲಕಿಯ ವಿವಾಹ

ಸಮಗ್ರ ನ್ಯೂಸ್: 25 ವರ್ಷದ ಯುವಕನೊಂದಿಗೆ 14 ವರ್ಷದ ಬಾಲಕಿಯನ್ನು ಆಕೆಯ ಪೋಷಕರಿಗೆ ಹೇಳದೆ ಸಂಬಂಧಿಕರು ಮದುವೆ ಮಾಡಿಸಿರುವ ಘಟನೆಯೊಂದು ಬೆಂಗಳೂರು ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ಬಂಧನಕ್ಕೊಳಪಡಿಸಿದ್ದಾರೆ.

Ad Widget ... ..

ಫೆ.15 ರಂದು 25 ವರ್ಷದ ಯುವಕನೊಂದಿಗೆ ಬಾಲಕಿಗೆ ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ ಇವರೆಲ್ಲ ಸೇರಿ ತಂದೆ-ತಾಯಿಯವರಿಗೆ ತಿಳಿಯದಂತೆ ಮದುವೆ ಮಾಡಿಸಿದ್ದಾರೆ. “ಮಗಳು ಇನ್ನೂ ಅಪ್ರಾಪ್ತೆಯಾಗಿದ್ದಾಳೆ. ಅವಳನ್ನು ಪುಸಲಾಯಿಸಿ ಮದುವೆ ಮಾಡಿಸಿದ್ದಾರೆ. ಕೈವಾರದಲಿನ ಯಲಮ್ಮ ದೇವಾಲಯದಲ್ಲಿ ತಂದೆ ತಾಯಿಗೆ ಗೊತ್ತಿಲ್ಲದೆ ಮದುವೆ ಮಾಡಲಾಗಿದೆ” ಎಂದು ಬಾಲಕಿ ತಾಯಿ ಸರ್ಜಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Ad Widget

Leave a Comment

Your email address will not be published. Required fields are marked *