Ad Widget .

ಬಿಎಂಟಿಸಿ ನೌಕರರಿಗೂ ಅಪಘಾತ ವಿಮೆ ನೀಡಲು ಮುಂದಾದ ಸರ್ಕಾರ

ಸಮಗ್ರ ನ್ಯೂಸ್: ಇನ್ನೂ ಮುಂದೆ ಕೆಎಸ್​ಆರ್​ಟಿಸಿ ಮಾದರಿಯಲ್ಲಿಯೇ ಬಿಎಂಟಿಸಿ ನೌಕರರಿಗೂ ಒಂದು ಕೋಟಿ ರುಪಾಯಿ ಅಪಘಾತ ವಿಮೆ ನೀಡಲು ಸರ್ಕಾರ ಮುಂದಾಗಿದ್ದು, ಇಂದಿನಿಂದಲೇ ಈ ವಿಮಾ ಸೌಲಭ್ಯ ಜಾರಿಯಾಗಲಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿಯಾಗಿದ್ದು, ಬಿಎಂಟಿಸಿ‌ಯ 28 ಸಾವಿರ ನೌಕರರ ಕುಟುಂಬಗಳಿಗೆ ಸೌಲಭ್ಯ ದೊರೆಯಲಿದೆ.

Ad Widget . Ad Widget .

ಬಿಎಂಟಿಸಿ ಎಂಡಿ ರಾಮಚಂದ್ರನ್. ಆರ್, ಕೆಎಸ್​ಆರ್​ಟಿಸಿ ನೌಕರರು ಸಾವನ್ನಪ್ಪಿದರೆ ಮಾತ್ರ ಒಂದು ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಬಿಎಂಟಿಸಿ ನೌಕರರಿಗೆ ಕೇವಲ ಮೂರು ಲಕ್ಷ ರುಪಾಯಿ ಪರಿಹಾರವಿತ್ತು. ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿಯಾಗಿದೆ. ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲದಿದ್ದಾಗಲೂ ಸಂಭವಿಸುವ ಅಪಘಾತಕ್ಕೂ 1 ಕೋಟಿ 15 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಸಿಬ್ಬಂದಿ ಸಾಮಾನ್ಯವಾಗಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ ಎಂದರು.

Ad Widget . Ad Widget .

Leave a Comment

Your email address will not be published. Required fields are marked *