Ad Widget .

ಸಂಪಾಜೆಯ ಮನೆಯೊಂದರಿಂದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಕಳ್ಳರು ಕೊಡಗಿನಲ್ಲಿ ಬಲೆಗೆ..!! ತ್ರಿಮೂರ್ತಿ ಕಳ್ಳರಿಗಿದೆಯೇ ಕಲ್ಲುಗುಂಡಿಯ ವ್ಯಕ್ತಿಯ ನಂಟು..?

ಸಮಗ್ರ ನ್ಯೂಸ್: ಕೊಡಗು ಸಂಪಾಜೆಯ ಮನೆಯೊಂದರಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಕಳ್ಳರ ತಂಡವನ್ನು ಹಿಡಿದು ಮಡಿಕೇರಿ ಗ್ರಾಮಾಂತರ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ.

Ad Widget . Ad Widget .

ಬಂಧಿತರನ್ನು ಬಲಮುರಿ ನಿವಾಸಿ ಸುದೀಪ್ ಟಿ.ಎಸ್.(23), ಎಂ.ಬಾಡಗ ನಿವಾಸಿ ನಿಶಾಂತ್ ಎಂ.ಎಂ. (27) ಹಾಗೂ ನಾಪೋಕ್ಲು ಹಳೇ ತಾಲ್ಲೂಕು ನಿವಾಸಿ ಇಬ್ರಾಹಿಂ (29) ಎಂದು ಗುರುತಿಸಲಾಗಿದೆ. ಕೊಡಗು ಸಂಪಾಜೆಯ ನಿವಾಸಿ ವಿಜಯ್ ಕುಮಾರ್ ಕೆ.ಕೆ. ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರ ತಂಡವೊಂದು ನುಗ್ಗಿತ್ತು. 47 ಗ್ರಾಂ ತೂಕದ ಚಿನ್ನಾಭರಣ ಹಾಗೂ ರೂ.20 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Ad Widget . Ad Widget .

*ಮರುದಿನವೇ ಸಿಕ್ಕಿಬಿದ್ರು..!!*
ಸಂಪಾಜೆಯಲ್ಲಿ ಕಳ್ಳತನ ನಡೆಸಿ ಮರುದಿನ (ಫೆ. 9 ) ಮತ್ತೊಂದು ಪ್ಲಾನ್ ನೊಂದಿಗೆ ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರ ಗ್ರಾಮದ ನಿವಾಸಿ ಜೀವನ್.ಡಿ ಅವರ ಮನೆಯಲ್ಲಿ ಕಳ್ಳತನ ನಡೆಸಿದರು. ಈ ಪ್ರಕರಣದ ಬೆನ್ನಟ್ಟುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಮೂವರು ಸಿಕ್ಕಿಬಿದ್ದಿದ್ದಾರೆ. ಆ ವೇಳೆ ಸಂಪಾಜೆಯಲ್ಲಿ ಕಳ್ಳತನ ಮಾಡಿರುವುದನ್ನು ಕಳ್ಳರು ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅಂದಾಜು 100 ಗ್ರಾಂ ತೂಕದ ಚಿನ್ನಾಭರಣಗಳು, ರೂ.1.20 ಲಕ್ಷ ನಗದು ಮತ್ತು ಜಮೀನಿನ ಮೂಲ ದಾಖಲಾತಿಗಳನ್ನು ಕಳವುಗೈಯಲಾಗಿತ್ತು. ಆರೋಪಿಗಳು ಈ ಹಿಂದೆ ಮಂಗಳೂರು, ಹಾಸನ, ಮದ್ದೂರು, ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಕಳವು ಮಾಡಿದ್ದಾರೆನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.

*ಕಲ್ಲುಗುಂಡಿಯ ವ್ಯಕ್ತಿಯ ನಂಟು..?*
ಸದ್ಯ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿ ನಾಪೋಕ್ಲು ಮೂಲದ ಇಬ್ರಾಹಿಂ (29 ವರ್ಷ) ಎನ್ನುವವನಿಗೆ ಕಲ್ಲುಗುಂಡಿಯ ಚರ್ಚ್ ರೋಡ್ ಸಮೀಪದ ವ್ಯಕ್ತಿಯೊಂದಿಗೆ ನಂಟಿದೆ ಎಂದು ಊರಿನ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಕಳ್ಳರನ್ನು ಹಿಡಿದಿರುವ ಕೊಡಗು ಪೊಲೀಸ್ ಇಲಾಖೆ ಕೆಲಸಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಇದೇ ವೇಳೆ ಸ್ಥಳೀಯ ಕಳ್ಳನನ್ನು ಕೂಡ ಪೊಲೀಸರು ತನಿಖೆ ನಡೆಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕಳ್ಳತನ ನಡೆಯುವುದನ್ನು ತಡೆದಂತಾಗುತ್ತದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

Leave a Comment

Your email address will not be published. Required fields are marked *