Ad Widget .

ಕುಶಾಲನಗರದಲ್ಲಿ ಕೊಲೆಯಾದ ಶಾದೀದ್ ಮನೆಗೆ ಶಾಸಕ ಮಂಥರ್ ಗೌಡ ಭೇಟಿ

ಸಮಗ್ರ ನ್ಯೂಸ್: ಇತ್ತೀಚೆಗೆ ಕುಶಾಲನಗರ ಶೋರೂಮ್ ಮಾಲಿಕನಿಂದ ಹತ್ಯೆಯಾದ ಶದೀದ್ ಮನೆಗೆ ಮಡಿಕೇರಿ ಕ್ಷೇತ್ರದ ಶಾಸಕ ಮoಥರ್ ಗೌಡ ಬೇಟಿ ನೀಡಿದರು.

Ad Widget . Ad Widget .

ಮಡಿಕೇರಿ ಗಣಪತಿ ಬೀದಿಯಲ್ಲಿನ ಮನೆಗೆ ಭೇಟಿ ನೀಡಿದ ಶಾಸಕರು ಮೃತ ಶದೀದ್ ಕುಟುಂಬಕ್ಕೆ ಸಾಂತ್ವನ ನೀಡಿದರು. ಇದೇ ಸಂದರ್ಭದ ಮಡಿಕೇರಿ ಮುಸ್ಲಿಂ ಒಕ್ಕೂಟದ ವತಿಯಿಂದ ಮೃತನ ಕುಟುಂಬಕ್ಕೆ ಪರಿಹಾರ ಕೋರಿ ಮನವಿಯೊಂದನ್ನು ಸಲ್ಲಿಸಲಾಯಿತು.
ಶದೀದ್‌ ಕುಟುಂಬಕ್ಕೆ ರೂ.10 ಲಕ್ಷ ಪರಿಹಾರ, ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ, ಸರ್ಕಾರಿ ಸೈಟ್, ಸರ್ಕಾರಿ ಆಸ್ಪತ್ರೆ ಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ ವೈದ್ಯರ ಮೇಲೆ ಕ್ರಮ ಕೈಗೊಳ್ಳಲು ಬೇಡಿಕೆ ಸಲ್ಲಿಸಲಾಯಿತು.

Ad Widget . Ad Widget .

ಒಕ್ಕೂಟದ ಅಧ್ಯಕ್ಷ ನಝೀರ್ ಅಹಮದ್ ಪ್ರಧಾನ ಕಾರ್ಯದರ್ಶಿ ಅಮೀನ್ ಮುಹ್ಸಿನ್, ಉಪಾಧ್ಯಕ್ಷರು ಫಯಾಜ್
ಇಸ್ಮಾಯಿಲ್, ಮೊಹಮ್ಮದ್ ಆಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಶಾಸಕರೊಂದಿಗೆ ಕಾಂಗ್ರೆಸ್ ನ ಮುಖಂಡ ಮುನಿರ್ ಅಹಮದ್ ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *