Ad Widget .

ಪ್ರತಿಷ್ಠಿತ ಕಾರ್ ಶೋ ರೂಂ ಗೆ ಬೆಂಕಿ: ಕೋಟ್ಯಂತರ ರುಪಾಯಿ ನಷ್ಟ

ಸಮಗ್ರ ನ್ಯೂಸ್: ಶಿವಮೊಗ್ಗದ ಪ್ರತಿಷ್ಠಿತ ಕಾರ್ ಶೋ ರೂಂ ಗೆ ಬೆಂಕಿ ಬಿದ್ದು ಕೋಟಿ ಕೋಟಿಗೂ ಅಧಿಕ ಕಾರ್​ಗಳು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

Ad Widget . Ad Widget .

ಸುಮಾರು 9.30 ಆಸುಪಾಸಿನಲ್ಲಿ ನಗರದ ಶಂಕರ ಮಠದ ರಸ್ತೆಯ ರಾಹುಲ್ ಹುಂಡೈ ಕಾರ್ ಶೋ ರೂಂನಲ್ಲಿ ಆಕಸ್ಮಿಕ ಬೆಂಕಿ ಕಂಡು ಬಂದಿದೆ. ನೋಡು ನೋಡುತ್ತಿದ್ದಂತೆ ಶೋಂ ನಲ್ಲಿ ಗ್ರಾಹಕರಿಗೆ ನೋಡಲು ಇಟ್ಟಿದ್ದ ಒಳಗೆ ಎರಡು ಕಾರ್​ಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೂ ಪಕ್ಕದಲ್ಲಿ ಟಾಟಾ ಕಾರ್ ಶೋ ರೂಂ ಇದೆ. ಹುಂಡೈ ಶೋರೂಂ ಹತ್ತಿದ ಬೆಂಕಿಯು ಪಕ್ಕದ ಟಾಟಾ ಶೋ ಆವರಣದಲ್ಲಿ ನಿಲ್ಲಿಸಿದ್ದ ಸುಮಾರು ನಾಲ್ಕು ಕಾರ್ ಗಳು ಸುಟ್ಟು ಹೋಗಿವೆ. ಶೋ ರೂಂ ನಲ್ಲಿದ್ದ ಕಾರ್​ಗೆ ಸಂಬಂಧಿಸಿದ ಬಿಡಿ ಭಾಗ ಮತ್ತು ಇತರೆ ವಸ್ತುಗಳು ಸೇರಿದಂತೆ ಒಟ್ಟು ಎರಡು ಕೋಟಿಗೂ ಅಧಿಕ ನಷ್ಟವಾಗಿದೆ.

Ad Widget . Ad Widget .

ಅಧಿಕಕಾಲ ಆಗ್ನಿಶಾಮಕ ಸಿಬ್ಬಂದಿ ಮತ್ತು ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಹುಂಡೈ ಶೋರೂಂ ನಲ್ಲಿದ್ದ ಕಾರ್ ಮತ್ತು ಬಿಡಿ ಭಾಗಗಳು ಸುಟ್ಟು ಭಸ್ಮವಾಗಿವೆ. ಅಕ್ಕಪಕ್ಕದಲ್ಲಿ ಬಡಾವಣೆ ಮತ್ತು ಪೆಟ್ರೋಲ್ ಬಂಕ್ ಇದ್ದ ಹಿನ್ನಲೆಯಲ್ಲಿ ಸಾವಿರಾರು ಜನರು ಆತಂಕಗೊಂಡು ಮನೆಯಿಂದ ಹೊರಗೆ ಬಂದಿದ್ದರು. ಬಾಗಿಲು ಹಾಕಿದ ಶೋರೂಂ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಹೊತ್ತಿಕೊಂಡಿತ್ತು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Leave a Comment

Your email address will not be published. Required fields are marked *