ಸಂಸದ ಡಿ.ಕೆ ಸುರೇಶ್ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಭಯಾನಕ ಸುಂಟರಗಾಳಿ: ಟೆಂಟ್ ಹೌಸ್ ಚೆಲ್ಲಾಪಿಲ್ಲಿ

ಸಮಗ್ರ ನ್ಯೂಸ್: ಸಂಸದ ಡಿ.ಕೆ ಸುರೇಶ್ ಅವರು ಕುಣಿಗಲ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಮೈದಾನದಲ್ಲಿ ಉದ್ಯೋಗ ಮೇಳ ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಭಯಾನಕ ಸುಂಟರಗಾಳಿ ಬೀಸಿದ ರಭಸಕ್ಕೆ ಭಾನೆತ್ತರಕ್ಕೆ ಹಾರಿ ಟೆಂಟ್ ಹೌಸ್ ಚೆಲ್ಲಾಪಿಲ್ಲಿಯಾಗಿರುವಂತಹ ಘಟನೆ ನಡೆದಿದೆ.

Ad Widget ... ..

ಕುಣಿಗಲ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಮೈದಾನದಲ್ಲಿ ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಕಾರದೊಂದಿಗೆ ನಿನ್ನೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಯಾನಕ ಸುಂಟರಗಾಳಿ ಬೀಸಿದೆ. ಘಟನೆಯಿಂದ ಯಾರಿಗೂ ಹಾನಿ ಸಂಭವಿಸಿಲ್ಲ. ಸಂಸದ ಡಿ.ಕೆ ಸುರೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಕುಣಿಗಲ್ ಶಾಸಕ ಡಾ ರಂಗನಾಥ್ ಸೇರಿದಂತೆ ಸುಮಾರು 2 ಸಾವಿರಕ್ಕಿಂತ ಹೆಚ್ಚು ಉದ್ಯೋಗಕಾಂಕ್ಷಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯ ಹಂತದಲ್ಲಿ ರಭಸವಾಗಿ ಸುಂಟರಗಾಳಿ ಬೀಸಿದೆ. ಕೆಲ ಕಾಲ ಆತಂಕ ಸೃಷ್ಟಿಸಿತ್ತು.

Ad Widget

Leave a Comment

Your email address will not be published. Required fields are marked *