ಸಮಗ್ರ ನ್ಯೂಸ್: ಇತ್ತೀಚೆಗೆ ಅಗ್ನಿ ಅವಘಡಗಳು ಹೆಚ್ಚುತ್ತಲೇ ಇದೆ. ದಿನ ಇಂತಹ ಸುದ್ದಿಗಳು ಬರುತ್ತದೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವ ಎಂಬ ಸಂಶಯ ಮೂಡುತ್ತಿದೆ. ಹೌದು ಇಂದು ಸಹ ಇಂತಹದೆ ಘಟನೆ ನಡೆದಿದೆ. ಪರ್ಫ್ಯೂಮ್ ಫ್ಯಾಕ್ಟರಿ ಅಗ್ನಿ ಅವಘಡ ದಲ್ಲಿ ಮೂವರು ಕಾರ್ಮಿಕರು ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ರಾಮಸಂದ್ರದಲ್ಲಿ ದುರಂತ ಸಂಭವಿಸಿದೆ.
ಬೆಂಕಿಯಲ್ಲಿ ಸಿಲುಕಿ ಮೂವರು ಕಾರ್ಮಿಕರು ಸಜೀವದಹನವಾಗಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪರ್ಫ್ಯೂಮ್ ಕೆಮಿಕಲ್ ಸ್ಫೋಟಗೊಂಡ ಪರಿಣಾಮ ಆಕಸ್ಮಿಕ ಬೆಂಕಿಯಿಂದ ಪರ್ಫ್ಯೂಮ್ ಫ್ಯಾಕ್ಟರಿ ಹೊತ್ತಿ ಉರಿಯುತ್ತಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದಾರೆ. ಗಂಭೀರ ಗಾಯಗೊಂಡ ಅಲ್ಲಾಭಕ್ಷ, ಅಫ್ರೋಜ್, ರಿಯಾಜ್, ಸಾಧಿಕ್, ಇಮ್ರಾನ್ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೂವರ ಮೃತದೇಹಗಳು ಆರ್.ಆರ್.ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಗ್ನಿ ದುರಂತ ಬಗ್ಗೆ ಕುಂಬಳಗೋಡು ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಖಾಲಿ ಜಾಗದ ಶೆಡ್ನಲ್ಲಿ ಪರ್ಫ್ಯೂಮ್ ಕೆಮಿಕಲ್ ಫಿಲ್ಲಿಂಗ್ ಮಾಡಲಾಗುತ್ತಿತ್ತು. ಒಟ್ಟು 8 ಸಿಬ್ಬಂದಿ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಇದೆ. ಫಿಲ್ಲಿಂಗ್ ವೇಳೆ ಸ್ಫೋಟಗೊಂಡು ಇಡೀ ಮನೆಗೆ ಬೆಂಕಿ ಆವರಿಸಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿ ದುರಂತದಲ್ಲಿ 1 ಬೈಕ್, 1 ಕಾರು ಹಾಗೂ ಆಟೋ ಸಂಪೂರ್ಣ ಹಾನಿಯಾಗಿದ್ದು, ಬೆಂಕಿಯ ತೀವ್ರತೆಗೆ ಅಕ್ಕಪಕ್ಕದ ಮನೆಯ ವಸ್ತುಗಳು ಬೆಂಕಿಗಾಹುತಿ ಆಗಿದೆ.
ರಾಮಸಂದ್ರದಲ್ಲಿ ಸಂಜೆ 5 ಗಂಟೆಗೆ ಅಗ್ನಿ ಅವಘಡ ಸಂಭವಿಸಿದೆ. ಸಲೀಂ ಸೇರಿ ಮೂವರ ಸಾವಾಗಿದೆ. ಇಬ್ಬರ ಗುರುತು ಪತ್ತೆಯಾಗಿಲ್ಲ. ಗಾಯಾಳು ಐವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಐವರು ಗಾಯಾಳುಗಳ ಪೈಕಿ ಓರ್ವ 15 ವರ್ಷದ ಬಾಲಕನಿದ್ದಾನೆ. ಇನ್ನೆನಿದ್ದರು FSL ತಜ್ಞರ ವರದಿ ಬಳಿಕ ಘಟನೆಗೆ ಸ್ಪಷ್ಟ ಕಾರಣ ಗೊತ್ತಾಗಲಿದೆ ಎಂದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.