ಸಮಗ್ರ ನ್ಯೂಸ್: ವಾಸ್ತವವಾಗಿ, ತುಟಿಗಳು ಅತ್ಯಂತ ಸೂಕ್ಷ್ಮವಾದ ಚರ್ಮವನ್ನು ಹೊಂದಿರುತ್ತದೆ. ಹಾಗಾಗಿಯೇ ಚಳಿಗಾಲದಲ್ಲಿ ತುಟಿಯು ಬಹು ಬೇಗನೆ ಒಡೆಯುತ್ತವೆ. ನೀವು ಬಳಸುವ ಲಿಪ್ ಬಾಮ್ ಗಳಿಗಿಂತ ಭಿನ್ನವಾಗಿ ಮನೆಯಲ್ಲಿಯೇ ದೊರೆಯುವ ನೈರ್ಸಗಿಕವಾದ ಪದಾರ್ಥಗಳಿಂದ ಒಡೆದ ತುಟಿಯನ್ನು ಹೇಗೆ ಮೃದುವಾಗಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ತುಟಿಯು ನಿರ್ಜಲೀಕರಣಗೊಂಡಾಗ, ಅವು ಕ್ರಮೇಣ ಒಣಗಲು ಪ್ರಾರಂಭ ಮಾಡುತ್ತದೆ. ಕೆಲವೊಮ್ಮೆ ತುಟಿಗಳ ಚರ್ಮದಲ್ಲಿ ಸಿಪ್ಪೆ ಸುಲಿಕೆ, ರಕ್ತಸ್ರಾವವು ಉಂಟಾಗಬಹುದು. ಅಷ್ಟಕ್ಕೂ ತುಟಿಗಳು ಒಣಗಲು ಕಾರಣಗಳೇನು? ಎಂಬುದಕ್ಕೆ ಉತ್ತರ ಇಲ್ಲಿದೆ.
ಸೂರ್ಯನ ತೀಕ್ಷ್ಣವಾದ ಬಿಸಿಲು ಚರ್ಮಕ್ಕೆ ಹೊಂದಿಕೆಯಾಗದ ಲಿಪ್ಸ್ಟಿಕ್ ಅಥವಾ ಲಿಪ್ ಬಾಮ್ ನ ಬಳಕೆ ಧೂಮಪಾನ ಮಾಡುವುರಿಂದ ಮದ್ಯ ಸೇವನೆಯ ಪರಿಣಾಮ ನಿರ್ದಿಷ್ಟವಾದ ಔಷಧಿಗಳು ಅಥವಾ ಅಲರ್ಜಿಗಳಿಂದ ನಿರ್ಜಲೀಕರಣದಿಂದ ಉಂಟಾಗುತ್ತದೆ.
ವಿವಿಧ ಲಿಪ್ ಬಾಮ್ ಗಳಂತೆ ಪೆಟ್ರೋಲಿಯಂ ಜೆಲ್ಲಿ ಕೂಡ ಒಂದು. ಆದರೆ ಇತರ ಲಿಪ್ ಬಾಮ್ಗಳಿಗೆ ಹೋಲಿಸಿದರೆ ಇದು ಅಧಿಕ ತೇವಾಂಶವನ್ನು ಹೊಂದಿದ್ದು, ಚರ್ಮವನ್ನು ಲಾಕ್ ಮಾಡುತ್ತದೆ. ಇದರಿಂದ ನಿಮ್ಮ ಚರ್ಮವು ಸಂಪೂರ್ಣವಾಗಿ ಒಣಗುವುದನ್ನು ತಡೆಯುತ್ತದೆ. ಇದರಿಂದ ಉಂಟಾಗುವ ಅಲರ್ಜಿಯ ಪ್ರಕ್ರಿಯೆ, ಊತ, ಕಿರಿಕಿರಿಗಳನ್ನು ಇದು ತಕ್ಷಣವೇ ಪರಿಹಾರಿಸುತ್ತದೆ. ಪ್ರತಿನಿತ್ಯವು ಪೆಟ್ರೋಲಿಯಂ ಜೆಲ್ಲಿಯನ್ನು ನಿಮ್ಮ ಒಣ ತುಟಿಗಳಿಗೆ ಹಚ್ಚಿ ಹಾಗು ಚಮತ್ಕಾರ ನೋಡಿ.
ಅಲೋವೆರಾ ಬಳಸಿ:
ಇದೊಂದು ಆರ್ಧ್ರಕ ಜೆಲ್ ಆಗಿದ್ದು, ಚರ್ಮಕ್ಕೆ ಅತ್ಯುತ್ತಮವಾದ ಪ್ರಯೋಜನವನ್ನು ನೀಡುತ್ತದೆ. ಅಲೋವೆರಾ ಬಳಸುವುದರಿಂದ ಚರ್ಮವನ್ನು ತೇವಾಂಶಗೊಳಿಸುವುದಲ್ಲದೇ, ತುಟಿಗಳನ್ನು ಹೈಡ್ರೇಟ್ ಮಾಡುತ್ತದೆ. ಇದರಿಂದಾಗಿ ಒಡೆದ ತುಟಿಯು ಮೃದುವಾಗಿ ಕಂಗೊಳಿಸುತ್ತದೆ.
ತಾಜಾ ಅಲೋವೆರಾ ಜೆಲ್ ಅನ್ನು ಪ್ರತಿನಿತ್ಯ ನಿಮ್ಮ ತುಟಿಗೆ ಬಳಸುವುದರಿಂದ ಉತ್ತಮವಾದ ಪ್ರಯೋಜನಗಳನ್ನು ಪಡೆಯಬಹುದು.
ಜೇನುತುಪ್ಪವನ್ನು ಬಳಸಿ
ಜೇನುತುಪ್ಪವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಆಯುರ್ವೇದ ಔಷಧಿಯಾಗಿದ್ದು, ನಿಮ್ಮ ಒಡೆದ ತುಟಿಗಳನ್ನು ಮೃದುವಾಗಿಸಲು ಜೇನುತುಪ್ಪದ ಬಳಕೆ ಸೂಕ್ತವಾದ ಮನೆಮದ್ದಾಗಿದೆ. ಇದು ಹ್ಯೂಮೆಕ್ಟಂಟ್ ಆಗಿದ್ದು, ಹುಣ್ಣುಗಳು ಮತ್ತು ಬಿರುಕುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮೊದಲು ಜೇನುತುಪ್ಪದ ತೆಳುವಾದ ಲೇಯರ್ ಅನ್ನು ನಿಮ್ಮ ಒಡೆದ ತುಟಿಗಳಿಗೆ ಲೇಪಿಸಿ. ೨೦ ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಶುದ್ಧವಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಸುಲಭವಾಗಿ ಒಡೆದ ತುಟಿಗಳಿಂದ ಪಾರಾಗಬಹುದು.
ಒಡೆದ ತುಟಿಗೆ ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯು ಎಮೋಲಿಯಂಟ್ ಆಗಿದೆ. ಇದು ಅನೇಕ ಚರ್ಮ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೇ, ಒಡೆದ ತುಟಿಗೂ ಚಿಕಿತ್ಸೆ ನೀಡುತ್ತದೆ. ತೆಂಗಿನ ಎಣ್ಣೆಯಲ್ಲಿನ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ನಿಮ್ಮ ತುಟಿಗಳ ಸೂಕ್ಷ್ಮಾಣುಗಳಿಂದ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ ರಾತ್ರಿ ತೆಂಗಿನ ಎಣ್ಣೆಯನ್ನು ನಿಮ್ಮ ಒಡೆದ ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ.
ನಿಮ್ಮ ತುಟಿಗೆ ಸಕ್ಕರೆಯನ್ನು ಬಳಸಿ:
ಸಕ್ಕರೆಯು ಅತ್ಯುತ್ತಮವಾದ ಸ್ಕ್ರಬ್ ಆಗಿದ್ದು, ಸತ್ತ ಚರ್ಮದ ಕೋಶವನ್ನು ಉತ್ತೇಜಿಸುತ್ತದೆ. ತುಟಿಗಳಿಗೆ ಅಗತ್ಯವಾದ ತೇವಾಂಶವನ್ನು ನೀಡಲು ಸಕ್ಕರೆಯು ಸಹಾಯ ಮಾಡುತ್ತದೆ. ಇದು ಕೇವಲ ತುಟಿಗಳಿಗೆ ಅಲ್ಲದೇ, ಚರ್ಮಕ್ಕೂ ಕೂಡ ಸಹಾಯಕವಾಗಿದೆ.
ಒಂದು ಬೌಲ್ ನಲ್ಲಿ ಒಂದು ಚಮಚ ಸಕ್ಕರೆ, ಅರ್ಧ ಚಮಚ ತೆಂಗಿನ ಎಣ್ಣೆ, ಒಂದು ಚಮಚ ಜೇನು ತುಪ್ಪವನ್ನು ಬೆರಸಿ ಮಿಶ್ರಣವನ್ನು ತಯಾರು ಮಾಡಿಕೊಳ್ಳಿ. ಇದನ್ನು ನಿಮ್ಮ ತ್ವಚೆಗೆ ಹಾಗು ತುಟಿಗೆ ಲೇಪನ ಮಾಡಿಕೊಳ್ಳಿ. ಇದರಿಂದಾಗಿ ಉತ್ತಮವಾದ ಚರ್ಮ ಕಾಂತಿಯುತವಾಗಿ ಕಾಣುತ್ತದೆ.