Ad Widget .

ಏನಿಲ್ಲ ಏನಿಲ್ಲ ಬಜೆಟ್ ನಲ್ಲಿ ಏನಿಲ್ಲ ಎಂದ ಬಿಜೆಪಿಗೆ ತಿರುಗೇಟು ಕೊಟ್ಟ ಕಾಂಗ್ರೆಸ್

ಸಮಗ್ರ ನ್ಯೂಸ್: ಇಂದು ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಗೆ ಕಾಂಗ್ರೆಸ್ ಬಿಜೆಪಿ ನಡುವೆ ಬಜೆಟ್ ಬಡಿದಾಟ ಜೋರಾಗಿ ನಡೆದೆಹೊಯ್ತು.

Ad Widget . Ad Widget .

ಹೌದು ಸಿದ್ದರಾಮಯ್ಯ ಬಜೆಟ್ ಗೆ ಬಿಜೆಪಿ ಆಕ್ರೋಶದ ಪೋಸ್ಟರ್ ಹಾಕಿದೆ. ಇದು ಬಜೆಟ್ ಅಲ್ಲ ಸಾಲ ಶೂಲದ ಹರಿಕಾರ ಸಾಲರಾಮಯ್ಯ, ಕರ್ನಾಟಕವನ್ನು ಸಾಲ ರಾಜ್ಯವನ್ನಾಗಿ ಪರಿವರ್ತಿಸುತ್ತಾರೆ ಎಂದು ಬಿಜೆಪಿ ಕಿಡಿಕಾರಿತು. ‘ಏನಿಲ್ಲ ಏನಿಲ್ಲ ಸಿದ್ದು ಬಜೆಟ್ ನಲ್ಲಿ ಏನಿಲ್ಲ’ ಎಂದು ಪ್ರತಿಭಟನೆ ಮಾಡಿದ್ದರು.

Ad Widget . Ad Widget .

ಏನಿಲ್ಲ ಏನಿಲ್ಲ ಬಜೆಟ್ ನಲ್ಲಿ ಏನಿಲ್ಲ ಎಂದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ. ಏನಿಲ್ಲ ಏನಿಲ್ಲ ಬಿಜೆಪಿಯವರ ಮೆದುಳಲ್ಲಿ ಏನಿಲ್ಲ… ಪ್ರಜಾಪ್ರಭುತ್ವದ ಮೇಲೆ ಗೌರವವಿಲ್ಲ.. ಶಾಂತಿ ಸಹಬಾಳ್ವೆ ಸಹಿಸಲ್ಲ.. ಕನ್ನಡಿಗರ ಮೇಲೆ ಕಾಳಜಿ ಇಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ. X ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ ಕಾಂಗ್ರೆಸ್. ಏನಿಲ್ಲ ಏನಿಲ್ಲ ಬಿಜೆಪಿಗರ ಬುರುಡೆಯಲ್ಲಿ ಏನೂ ಇಲ್ಲ. ಅವರು ಹೇಳುವುದೆಲ್ಲ ನಿಜವಲ್ಲ, ನಂಬಿಕೆಗೆ ಅರ್ಹರು ಅವರಲ್ಲ..ಜನಪರ ಚಿಂತನೆ ಇಲ್ಲವೇ ಇಲ್ಲ.. ಜನರ ಕಷ್ಟವು ಅವರಿಗೆ ಬೇಕಿಲ್ಲ.. ಏನಿಲ್ಲ ಏನಿಲ್ಲ ಬಿಜೆಪಿಯವರ ಹೃದಯದಲ್ಲಿ ಏನೂ ಇಲ್ಲ … ಕರ್ನಾಟಕದ ಯಜಮಾನರು ನೀವಲ್ಲ ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.

Leave a Comment

Your email address will not be published. Required fields are marked *