Ad Widget .

ಬೆಂಗಳೂರಿನ ಕ್ಯಾಬ್​ ಡ್ರೈವರ್ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಬೆಂಗಳೂರಿನ ಕ್ಯಾಬ್​ ಡ್ರೈವರ್ ಚಿಕ್ಕಮಗಳೂರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ದರ್ಶನ ಎಂಬಾತ ಬೆಂಗಳೂರಿನಲ್ಲಿ ಕ್ಯಾಬ್​ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ. ಇತ ಹಾಫ್​ ಮರ್ಡರ್​ ಮಾಡಿ ಜೈಲಿಗೆ ಹೋಗಿ ಬೇಲ್​ ಮೇಲೆ ಆಚೆ ಬಂದಿದ್ದ. ಈ ಹಿನ್ನಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ತನ್ನ ತಾತನ ಮನೆಯಲ್ಲಿ ವಾಸವಿದ್ದ. ನಿನ್ನೆ ಸ್ನೇಹಿತರ ಜೊತೆ ಆಚೆ ಹೋಗಿದ್ದವನನ್ನ ಯಾರೋ ದುಷ್ಕರ್ಮಿಗಳು ಕತ್ತು ಸೀಳಿ ಭೀಕರವಾಗಿ ಹತ್ಯೆಗೈದಿದ್ದಾರೆ.

Ad Widget . Ad Widget .

ವಾರದ ಹಿಂದೆ ಬೆಂಗಳೂರಿಗೆ ವಾಪಸ್ ಹೋಗಿದ್ದ ಮೃತ ದರ್ಶನ್ ಸ್ನೇಹಿತರು, ಫೆ.15 ರಾತ್ರಿ ಪುನಃ ಬಂದಿದ್ದಾರೆ. ಈ ಹಿನ್ನಲೆ ಕಾರಿನಲ್ಲಿ ಬಂದ ಸ್ನೇಹಿತರ ಜೊತೆ ದರ್ಶನ್ ಹೋಗಿದ್ದನಂತೆ. ತಾತನಿಗೆ ಫ್ರೆಂಡ್ಸ್ ಬಂದಿದ್ದಾರೆ, ಹೊಲದ ಶೆಡ್​ನಲ್ಲಿ ಮಲಗುತ್ತೇನೆ ಎಂದು ಹೇಳಿ ಹೋಗಿದ್ದಾನೆ. ದರ್ಶನ್ ಕಾರಿನಲ್ಲಿ ಹೋಗಿದ್ದನ್ನ ದರ್ಶನ್ ತಾತ ಕೂಡ ನೋಡಿದ್ದರು. ರಾತ್ರಿ ಹೊಲಕ್ಕೆ ಹೋಗಿ ನೋಡಿದಾಗ ಶೆಡ್​ನಲ್ಲಿ ದರ್ಶನ್ ಇರಲಿಲ್ಲ. ಸ್ನೇಹಿತರ ಜೊತೆ ಎಲ್ಲೋ ಹೋಗಿರಬಹುದು ಎಂದು ತಾತ ಮನೆಗೆ ಬಂದಿದ್ದರು. ಬೆಳಗ್ಗೆ ಮಾಡಾಳು ಗ್ರಾಮದ ತುಸು ದೂರದಲ್ಲಿ ದರ್ಶನ್ ಮೃತದೇಹ ಪತ್ತೆಯಾಗಿದೆ. ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ.ಯಾರು ಕೊಲೆಗೈದಿದ್ದಾರೆ ಎಂಬ ಮಾಹಿತಿ ಸಿಗಲಿಲ್ಲ ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದು ತನಿಖೆ ನಡೆಸುತ್ತಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *