Ad Widget .

ಫೆ.24 ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಬೆಳ್ಳಿಹಬ್ಬ ಪ್ರಯುಕ್ತ ಕ್ರೀಡಾ ಸಮ್ಮಿಲನ| ನೂತನ ಶಾಲಾ ಕಟ್ಟಡಕ್ಕೆ ಗುದ್ದಲಿ ಪೂಜೆ

ಸಮಗ್ರ ನ್ಯೂಸ್: ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಸುಳ್ಯ ಇದರ ಬೆಳ್ಳಿಹಬ್ಬದ ಪ್ರಯುಕ್ತ ಸಹ ಸಂಸ್ಥೆ ಮಹಾತ್ಮಗಾಂಧಿ ಮಲ್ನಾಡ್ ವಿದ್ಯಾ ಸಂಸ್ಥೆಯ 2 ಕೊಠಡಿಯ ಗುದ್ದಲಿ ಪೂಜೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಇತರೆ ಸಹಕಾರಿ ಸಂಘಗಳು, ಶ್ರೀ ವೆಂಕಟರಮಣ ಸೊಸೈಟಿಯ ಸದಸ್ಯರಿಗೆ, ಆಡಳಿತ ಮಂಡಳಿ-ಸಲಹಾ ಸಮಿತಿ ಹಾಗೂ ಸಿಬ್ಬಂದಿಗಳಿಗೆ ಕ್ರೀಡಾ ಸಮ್ಮಿಲನ ಕಾರ್ಯಕ್ರಮವು ಫೆ.24 ರಂದು ಎಂ.ಜಿ.ಎಂ. ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣ ಕೊಡಿಯಾಲಬೈಲಿನಲ್ಲಿ ನಡೆಯಲಿದೆ ಎಂದು ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಸುಳ್ಯ ಇಲ್ಲಿನ ಅಧ್ಯಕ್ಷರಾಗಿರುವ ಪಿ.ಸಿ ಜಯರಾಮ ಅವರು ಹೇಳಿದರು.

Ad Widget . Ad Widget .

ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಬೆಳ್ಳಿಹಬ್ಬ ಅಂಗವಾಗಿ ಕ್ರೀಡಾಕೂಟದ ಕುರಿತು ಫೆ.16 ರಂದು ಸುಳ್ಯ ಶ್ರೀ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಮಾಹಿತಿ ತಿಳಿಸಿದರು.

Ad Widget . Ad Widget .

ಕ್ರೀಡಾ ಸಮ್ಮಿಲನ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಶಸ್ತಿ ಪುರಸ್ಕೃತ ಹಿರಿಯ ಕ್ರೀಡಾಪಟು ಬಾಲಕೃಷ್ಣ ಗೌಡ ಕುದ್ವ, ಮುಖ್ಯ ಅತಿಥಿಯಾಗಿ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ರಾಧಾಕೃಷ್ಣ ಮಾಣಿಬೆಟ್ಟು ಮತ್ತು ಗೌಡ ಸೋಶಿಯೋ ಎಜ್ಯುಕೇಶನ್ ಫೌಂಡೇಶನ್ ಸುಳ್ಯ ಇದರ ಅಧ್ಯಕ್ಷರಾಗಿರುವ ಚಂದ್ರಾ ಕೋಲ್ಚಾರ್ ವಹಿಸಲಿದ್ದಾರೆ. ಇದರ ಅಧ್ಯಕ್ಷತೆಯನ್ನು ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಸುಳ್ಯ ಇಲ್ಲಿನ ಅಧ್ಯಕ್ಷರಾಗಿರುವ ಪಿ.ಸಿ ಜಯರಾಮ ಅವರು ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಸ್ಪರ್ಧೆಗಳ ವಿವರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಇತರೆ ಸಹಕಾರಿ ಸಂಘಗಳ
ಪುರುಷರಿಗೆ : ಹಗ್ಗ-ಜಗ್ಗಾಟ, ಅದೃಷ್ಟ ಪುರುಷ, ಮಹಿಳೆಯರಿಗೆ : ಹಗ್ಗ-ಜಗ್ಗಾಟ, ಅದೃಷ್ಟ ಮಹಿಳೆ.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸದಸ್ಯರಿಗೆ ನಿಧಾನ ಬೈಕ್ / ಸ್ಕೂಟಿ ಓಡಿಸುವುದು, ಲಕ್ಕಿಗೇಮ್ , ಒಂದು ನಿಮಿಷದ ಸ್ಪರ್ಧೆ , ಗುಂಡೆಸತ.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ / ಸಲಹಾ ಸಮಿತಿಯವರಿಗೆ ಹಿರಿಯರ ನಡಿಗೆ ಸ್ಪರ್ಧೆ, ಭಾಷಣ ಸ್ಪರ್ಧೆ, ಒಂದು ನಿಮಿಷದ ಸ್ಪರ್ಧೆ, ಲಕ್ಕಿಗೇಮ್.
ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸಿಬ್ಬಂದಿಗಳಿಗೆ ಪುರುಷರಿಗೆ : ಹಗ್ಗ-ಜಗ್ಗಾಟ, ನಿಧಾನ ಬೈಕ್ ಓಡಿಸುವುದು, ಗುಂಡೆಸತ, ಮಹಿಳೆಯರಿಗೆ : ಹಗ್ಗಜಗ್ಗಾಟ, ನಿಧಾನ ಸ್ಕೂಟಿ ಓಡಿಸುವುದು, ಲಕ್ಕಿಗೇಮ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

Leave a Comment

Your email address will not be published. Required fields are marked *