ಸಮಗ್ರ ನ್ಯೂಸ್: ಹೃದಯಾಘಾತ ಸಂಭವಿಸಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಎಂಬಲ್ಲಿ ನಡೆದಿದೆ. ಇಲ್ಲಿನ ಉದ್ಯಮಿ ದಾವೂದ್ ಅವರ ಪುತ್ರಿ ಹಫೀಝಾ (17) ಮೃತ ವಿದ್ಯಾರ್ಥಿನಿ.
ಈಕೆ ಉಪ್ಪಿನಂಗಡಿಯ ಇಂಡಿಯನ್ ಸ್ಕೂಲ್ನ ಹಳೆವಿದ್ಯಾರ್ಥಿಯಾಗಿದ್ದು, ಪ್ರಸಕ್ತ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದಳು. ಬುಧವಾರ ತಡರಾತ್ರಿ ವರೆಗೆ ಅಭ್ಯಾಸ ನಿರತಳಾಗಿದ್ದ ಆಕೆ ಬಳಿಕ ನಿದ್ರಿಸಿದ್ದು, ಗುರುವಾರ ಬೆಳಗ್ಗೆ ಎದ್ದೇಳದೇ ಇರುವುದನ್ನು ಕಂಡು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡುಬಂದಿತು. ಮೃತಳು ತಂದೆ, ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾಳೆ.