ಕರಾವಳಿಯಲ್ಲಿ ಸಿಎಂ ಕಾರ್ಯಕ್ರಮ ಹಿನ್ನಲೆ| ಫೆ.17ರಂದು ನಡೆಯಲಿದ್ದ ಒಕ್ಕಲಿಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯ ಮುಂದೂಡಿಕೆ| ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ

ಸಮಗ್ರ ನ್ಯೂಸ್: ಯುವ-ಘಟಕ-ಒಕ್ಕಲಿಗರ ಯಾನೆ ಗೌಡ ಸೇವಾ ಸಂಘ ಮಂಗಳೂರು ಆಯೋಜಿಸುತ್ತಿರುವ ಒಕ್ಕಲಿಗರ ಪ್ರೀಮಿಯರ್ ಲೀಗ್ 2024 ಅಂತರ್ ಜಿಲ್ಲಾ ಕ್ರಿಕೆಟ್ ಕೂಟವು ಅಡ್ಯಾರಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಫೆ.18ರಿಂದ ಆರಂಭವಾಗಲಿದೆ.

Ad Widget ... ..

ಕ್ರಿಕೆಟ್ ಕೂಟದ ಉದ್ಘಾಟನೆಯು ಫೆ.18 ರಂದು ನಡೆಯಲಿದೆ. ಇದರ ಸಮಾರೋಪ ಸಮಾರಂಭವು ಫೆ.19ರ ಸಂಜೆ ನಡೆಯಲಿದೆ. ಈ ಕೂಟದಲ್ಲಿ ದಕ್ಷಿಣ ಕನ್ನಡ, ಕೊಡಗು, ಉಡುಪಿ , ಕಾಸರಗೋಡು ಜಿಲ್ಲೆಯ ಒಕ್ಕಲಿಗ ಸಮುದಾಯದ ತಂಡಗಳು ಪಾಲ್ಗೊಳ್ಳಲಿವೆ.

Ad Widget

ಯುವ-ಘಟಕ-ಒಕ್ಕಲಿಗರ ಯಾನೆ ಗೌಡ ಸೇವಾ ಸಂಘ ಮಂಗಳೂರು ಇದರ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಅವರು ಮಾತನಾಡಿ ಈಗಾಗಲೇ ಕೂಟದಲ್ಲಿ ಪಾಲ್ಗೊಳ್ಳಲು 32 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಈ ಹಿಂದೆ ಫೆ.17 ಹಾಗೂ ಫೆ.18ರಂದು ಕೂಟ ನಡೆಸಲು ದಿನ ನಿಗದಿಯಾಗಿತ್ತು. ಆದರೆ ಫೆ.17 ರಂದು ಕಾಂಗ್ರೆಸ್ ಸಮಾವೇಶ ಅದೇ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆಯಲಿರುವುದರಿಂದ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಕೂಟವನ್ನು ಫೆ.18 ಮತ್ತು ಫೆ.19ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *