Ad Widget .

ನಿಮ್ಮ ಮಗಳು ಬೇಗನೆ ಋತುಮತಿಯಾಗುವುದನ್ನು ತಡೆಯಬೇಕೇ? ಹಾಗಿದ್ರೆ ಈ ಐದು ಸೂತ್ರಗಳನ್ನು ಪಾಲಿಸಿ…

ಸಮಗ್ರ ನ್ಯೂಸ್: ಈಗಿನ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ, 8 ವರ್ಷದಲ್ಲಿ ಆದರೆ ಪಾಪ ಆ ಮಗುವಿಗೆ ಪ್ಯಾಡ್‌ ಬದಲಾಯಿಸುವುದು ಕೂಡ ಕಷ್ಟವಾಗುವುದು, ಮೊದಲೆಲ್ಲಾ ಹೆಣ್ಮಕ್ಕಳು 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು.

Ad Widget . Ad Widget .

ಕೆಲವು ಪೋಷಕರು ಅಯ್ಯೋ ನನ್ನ ಮಗಳಿಗೆ 16 ವರ್ಷವಾದರೂ ಇನ್ನೂ ದೊಡ್ಡವಳಾಗಿಲ್ಲ ಎಂದು ಚಿಂತೆ ಮಾಡುತ್ತಿದ್ದರು, ಆದರೆ ಈಗ ಪೋಷಕರು ನಮ್ಮ ಮಗಳು 8 ವರ್ಷಕ್ಕೆ ಋತುಮತಿಯಾದಳು ಎಂದು ಕಣ್ಣೀರು ಹಾಕುತ್ತಿದ್ದಾರೆ.

Ad Widget . Ad Widget .

ಮಕ್ಕಳು ಬೇಗನೆ ಋತುಮತಿಯಾಗುವುದು ಒಳ್ಳೆಯದಲ್ಲ. ಬೇಗನೆ ಋತುಮತಿಯಾದರೆ ಪ್ರೀಮೆನೋಪಾಸ್‌ ಅಪಾಯವಿದೆ, ಹೀಗಾಗಿ 12 ವರ್ಷದ ಬಳಿಕ ಋತುಮತಿಯಾಗುವುದು ಒಳ್ಳೆಯದು.

ನಿಮ್ಮ ಮಗಳು ಚಿಕ್ಕ ಪ್ರಾಯದಲ್ಲಿ ಋತುಮತಿಯಗುವುದನ್ನು ತಡೆಗಟ್ಟಲು ಪೋಷಕರು ಈ 5 ವಿಷಯಗಳತ್ತ ಗಮನಹರಿಸಬೇಕು:

  1. ಪ್ರತಿದಿನ 1 ಗಂಟೆ ಸೂರ್ಯನ ಬೆಳಕು ಮಕ್ಕಳ ಮೈಮೇಲೆ ಬೀಳಬೇಕು:
    ನಿಮ್ಮ ಮಕ್ಕಳ ಮೇಲೆ ಪ್ರತಿದಿನ ಒಂದು ಗಂಟೆಯಾದರೂ ಬೆಳಗಿನ ಬಿಸಿಲು ಮೈ ಮೇಲೆ ಬೀಳಬೇಕು, ಇದರಿಂದ ಮಕ್ಕಳಿಗೆ ಅವಶ್ಯಕತೆಯಿರುವ ವಿಟಮಿನ್‌ ಡಿ ಸಿಗುವುದು. ನೀವು ಈ ಸಮಯದಲ್ಲಿ ಮಕ್ಕಳ ಜೊತೆ ಮನೆಯ ಹೊರಗಡೆ ಬಂದು ಆಟವಾಡಿ ಅಲ್ಲದೆ ಅವರಿಗೆ ಮೊಬೈಲ್ ಕೊಡುವುದು, ಟಿವಿ ಮುಂದೆ ಕೂರಿಸುವುದು ಮಾಡಿಸದೆ ಹೊರಗಡೆ ಹೋಗಿ ಆಟ ಆಡಲು ಪ್ರೋತ್ಸಾಹಿಸಿ. ರಜೆ ಇರುವಾಗ ಮನೆಯೊಳಗಡೆ ಇರುವುದಕ್ಕಿಂತ ಹೊರಗಡೆ ಹೋಗಿ ಆಡಲು ಪ್ರೋತ್ಸಾಹಿಸಿ.
  2. ಮಕ್ಕಳಿಗೆ ಕಾಸ್ಮೆಟಿಕ್ ಹಚ್ಚಬೇಡಿ:
    ಮಕ್ಕಳಿಗೆ ಕಾಸ್ಮೆಟಿಕ್ ಹಚ್ಚುವುದು ಒಳ್ಳೆಯದಲ್ಲ, ಅದು ಅವರ ತ್ವಚೆಗೆ ಒಳ್ಳೆಯದಲ್ಲ, ಅಲ್ಲದೆ ಕಾಸ್ಮೆಟಿಕ್‌ಗೂ ಹಾಗೂ ಬೇಗನೆ ಋತುಮತಿಯಾಗುವುದಕ್ಕೂ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ, ಆದ್ದರಿಂದ ಮಕ್ಕಳಿಗೆ ಕಾಸ್ಮೆಟಿಕ್ ಬಳಸಬೇಡಿ. ಅಲ್ಲದೆ ಮಕ್ಕಳಿಗೆ ಕಾಸ್ಮೆಟಿಕ್ ನೀಡುವುದು ಅವರ ತ್ವಚೆ ಆರೋಗ್ಯಕ್ಕೂ ಒಳ್ಳೆಯದಲ್ಲ.
  3. ನಾನ್‌ವೆಜ್‌ ಕಡಿಮೆ ಬಳಸಿ:
    ಮಕ್ಕಳಿಗೆ ಪ್ರತಿದಿನ ನಾನ್‌ವೆಜ್‌ ಕೊಡಬೇಡಿ, ನಾನ್‌ವೆಜ್‌ ಸೇವನೆ ವಾರದಲ್ಲಿ ಎರಡು ಬಾರಿ ಇದ್ದರೆ ಒಳ್ಳೆಯದು, ಪ್ರತಿದಿನ ನಾನ್‌ವೆಜ್‌ ಸೇವನೆ ಮಾಡುವುದರಿಂದ ಬೇಗನೆ ಋತುಮತಿಯಾಗುವ ಸಾಧ್ಯತೆ ಇದೆ, ಆದ್ದರಿಂದ ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ನೀಡಿ, ನಾನ್‌ವೆಜ್‌ ಕಡಿಮೆ ಸೇವಿಸಿ. ಮೀನು ಒಳ್ಳೆಯದು, ಫಾರಂ ಕೋಳಿ ಬದಲಿಗೆ ನಾಟಿ ಕೋಳಿ ನೀಡಿ, ಮೊಟ್ಟೆಯನ್ನು ಕೂಡ ಮಿತಿಯಲ್ಲಿ ನೀಡಿ, ಜಂಕ್‌ ಫುಡ್‌ ಹೆಚ್ಚು ನೀಡಬೇಡಿ, ಹೀಗೆ ಅವರ ಆಹಾರ ಕ್ರಮದ ಕಡೆಗೆ ಗಮನಹರಿಸಿ.
  4. ದೈಹಿಕ ಚಟುವಟಿಕೆ ತುಂಬಾನೇ ಮುಖ್ಯ:
    ಮಕ್ಕಳಿಗೆ ದೈಹಿಕ ಚಟುವಟಿಕೆ ತುಂಬಾನೇ ಮುಖ್ಯ. ಆದ್ದರಿಂದ ಮಕ್ಕಳನ್ನು ಡ್ಯಾನ್ಸ್, ಕ್ರೀಡೆ, ಯೋಗ, ಕರಾಟೆ ಅಂತ ಸೇರಿಸಿ, ಇದರಿಂದ ಅವರು ದೈಹಿಕವಾಗಿ ಫಿಟ್ ಆಗಿರುತ್ತಾರೆ, ಪ್ರತಿನಿತ್ಯ 2 ಗಂಟೆ ದೈಹಿಕ ವ್ಯಾಯಾಮ ಅವಶ್ಯಕ. ನೀವೂ ಅವರ ಜೊತೆ ಆಟ ಆಡುವುದರಿಂದ ಅವರಿಗೂ ಖುಷಿ, ಅಪ್ಪ-ಾಮ್ಮ ಮಕ್ಕಳು ಫಿಟ್ನೆಸ್‌ ಕಡೆ ಗಮನಹರಿಸಬಹುದು.
  5. ತುಂಬಾನೇ ಹಾಲು ಕೊಡಬೇಡಿ:
    ಕೆಲವರು ಮಕ್ಕಳಿಗೆ ತುಂಬಾನೇ ಹಾಲು ಕೊಡುತ್ತಾರೆ, ಹಾಗೆ ಮಾಡಬೇಡಿ, ಮಕ್ಕಳಿಗೆ ದಿನದಲ್ಲಿ ಒಂದು ಅಥವಾ ಎರಡು ಲೋಟ ಹಾಲು ಕೊಡಿ, ತುಂಬಾ ಹಾಲು ಕೊಡುವುದರಿಂದ ಹಾರ್ಮೋನ್‌ಗಳ ಬದಲಾವಣೆಯಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಾರೆ.

Leave a Comment

Your email address will not be published. Required fields are marked *