Ad Widget .

ಅನುಶ್ರೀ ಜೊತೆಗೆ ಉನ್ನಿಮುಕುಂದನ್ ಮದುವೆ!? ಗಾಸಿಪ್ ಗಳಿಗೆ ಪ್ರತಿಕ್ರಿಯಿಸಿದ ಮಲೆಯಾಳಂನ ಫೇವರಿಟ್ ಹೀರೋ

ಸಮಗ್ರ ನ್ಯೂಸ್: ದಕ್ಷಿಣ ಭಾರತದ ನಟ ಉನ್ನಿ ಮುಕುಂದನ್ ಮಲಯಾಳಿಗಳ ಫೇವರಿಟ್ ನಟ. ಮಾಲಿವುಡ್‌ನ ಸ್ಫುರದ್ರೂಪಿ ನಟರಲ್ಲಿ ಉನ್ನಿ ಮುಕುಂದನ್ ಕೂಡ ಒಬ್ಬರು. ಒಬ್ಬ ಹೀರೊಗೆ ಬೇಕಿರೋ ಫೀಚರ್ಸ್ ಇರುವ ನಟನೀತ. 36 ವರ್ಷದ ನಟ ಮಲಯಾಳಿಗಳ ಫೇವರಿಟ್ ನಟ ಕೂಡ ಹೌದು. ಸಾಕಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸುವ ಮೂಲಕ ಮಲಯಾಳಿಗಳನ್ನು ಸೆಳೆದಿಟ್ಟುಕೊಂಡಿದ್ದಾರೆ.

Ad Widget . Ad Widget .

ಕೆಲವು ದಿನಗಳಿಂದ ಉನ್ನಿ ಮುಕುಂದನ್ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಮಲಯಾಳಂ ನಟ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆಯಾಗುತ್ತಿದ್ದಾರೆ. ಶೀಘ್ರದಲ್ಲಿಯೇ ಈ ನಟ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅಂತೆಲ್ಲ ಸುದ್ದಿಗಳು ಹಬ್ಬಿದ್ದವು. ಆ ಸುದ್ದಿ ವೈರಲ್ ಆಗುತ್ತಿದ್ದಂತೆ ಉನ್ನಿ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ.

Ad Widget . Ad Widget .

ಕೆಲವು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಉನ್ನಿ ಮುಕುಂದನ್ ಹಾಗೂ ಅನುಶ್ರೀ ಮದುವೆ ಆಗುತ್ತಿದ್ದಾರೆ ಅನ್ನೋ ಸುದ್ದಿಯೊಂದು ಸಂಚಲನ ಸೃಷ್ಟಿಸಿತ್ತು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಮಲಯಾಳಂ ನಟ ಉನ್ನಿ ಮುಕುಂದನ್ ಪ್ರತಿಕ್ರಿಯೆ ನೀಡಿದ್ದಾರೆ.

ಉನ್ನಿ ಮುಕುಂದನ್ ಹಾಗೂ ಅನುಶ್ರೀ ಇಬ್ಬರೂ ಇವೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದ್ದವು. ಅದೇ ಫೋಟೊಗಳನ್ನು ಇಟ್ಟುಕೊಂಡು ಉನ್ನಿ ಮುಕುಂದನ್, ಅನುಶ್ರೀಯನ್ನು ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿಸಲಾಗಿತ್ತು. ಅಸಲಿಗೆ ಇದು ಸುಳ್ಳು ಸುದ್ದಿ. ಈ ಸುದ್ದಿ ಬಗ್ಗೆ ಮಲಯಾಳಂ ನಟ
ಪ್ರತಿಕ್ರಿಯೆ ನೀಡಿದ್ದಾರೆ.

ಕನ್ನಡ ಕಿರುತೆರೆ ಜನಪ್ರಿಯ ನಿರೂಪಕಿ ಕಮ್ ಸ್ಯಾಂಡಲ್‌ವುಡ್‌ ನಟಿ ಅನುಶ್ರೀ ಮನೆಮಾತಾಗಿರುವ ನಟಿ. ಅದ್ಭುತವಾಗಿ ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುತ್ತಾರೆ ಅನುಶ್ರೀ. ಆಗಾಗ್ಗೆ ಇನ್​ಸ್ಟಾಗ್ರಾಮ್ ಲೈವ್​ಗೆ ಬಂದು ತಮ್ಮ ಫ್ಯಾನ್ಸ್ ಜೊತೆ ನಟಿ ಆಗ್ಗಾಗ್ಗೆ ಮಾತನಾಡುತ್ತಾ ಇರುತ್ತಾರೆ.

ಅನುಶ್ರೀ ಅವರಿಗೆ ಎಲ್ಲಿಯೇ ಹೋದ್ರೂ ಎದುರಾಗುವ ಪ್ರಶ್ನೆ ಒಂದೇ ನಿಮ್ಮ ಮದ್ವೆ ಯಾವಾಗ ಎನ್ನುವುದು. ಇದಾಗಲೇ ಈ ಪ್ರಶ್ನೆಗೆ ನಟಿ ತಮ್ಮದೇ ಆದ ರೀತಿಯಲ್ಲಿ ಹಲವಾರು ವಿಧನಾಗಿ ಉತ್ತರಿಸಿದ್ದಾರೆ. 1987ರಲ್ಲಿ ಹುಟ್ಟಿರುವ ಅನುಶ್ರೀ ಅವರಿಗೆ ಈಗ 36 ವರ್ಷ ವಯಸ್ಸು. ಮದುವೆಯ ವಯಸ್ಸು ಮೀರುತ್ತಿದ್ದರೂ ಮದ್ವೆ ಯಾಕೆ ಆಗ್ತಿಲ್ಲ ಎನ್ನೋ ಆತಂಕದಲ್ಲಿ ಇರುವಂತೆ ತೋರುತ್ತಿದೆ ಅನುಶ್ರೀ ಫ್ಯಾನ್ಸ್​. ಮದುವೆಯ ವಿಷಯವಾಗಿ ನಟಿ ಎಷ್ಟೇ ಸಮಜಾಯಿಷಿ, ಎಷ್ಟೇ ಉತ್ತರ ಕೊಟ್ಟರೂ ಅಭಿಮಾನಿಗಳಿಗೆ ಸಮಾಧಾನವಾಗುವಂತೆ ಕಾಣುತ್ತಿಲ್ಲ.

ಒಂದೆಡೆ ಕನ್ನಡದ ಆಯಂಕರ್ ಅನುಶ್ರೀಯ ಮದುವೆಯ ಮಾತು, ಇನ್ನೊಂದೆಡೆ ಮಾಲಿವುಡ್‌ನ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌ ಉನ್ನಿ ಮುಕುಂದನ್ ಮದ್ವೆ ಮಾತು. ಇದನ್ನೆರೆಡೂ ಮಿಕ್ಸ್‌ ಮಾಡಿರುವ ಕನ್ನಡಿಗರು, ಇವರಿಬ್ಬರ ಫೋಟೋ ಜೊತೆ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಅಸಲಿಗೆ ಈಕೆ ಕನ್ನಡದ ಆಯಂಕರ್ ಅನುಶ್ರೀ ಅಲ್ಲ, ಬದಲಿಗೆ ಮಲಯಾಳಂ ನಟಿ ಅನುಶ್ರೀ. ಆದರೆ ಆಯಂಕರ್ ಅನುಶ್ರೀ ಸಕತ್‌ ಫೇಮಸ್‌ ಆಗಿರುವ ಕಾರಣ, ಸೋಷಿಯಲ್‌ ಮೀಡಿಯಾಗಳಲ್ಲಿ ಆಯಂಕರ್ ಅನುಶ್ರೀ ಫೋಟೋ ವೈರಲ್‌ ಆಗುತ್ತಿದೆ. ಜೊತೆಗೆ ಇವರಿಬ್ಬರ ಮದುವೆಯ ರೂಮರ್‌ ಹರಡುತ್ತಿದೆ. ಆದರೆ ನಿಜವಾಗಿಯೂ ಇದು ಈ ಅನುಶ್ರೀ ಅಲ್ಲ, ಬದಲಿಗೆ ಆ ಅನುಶ್ರೀ.

ಉನ್ನಿ ಮುಕುಂದನ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡು ಮಲಯಾಳಂನಲ್ಲಿ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ” ಇಂತಹ ಸುಳ್ಳು ಸುದ್ದಿಗಳನ್ನು ನಿಲ್ಲಿಸುವುದಕ್ಕೆ ನಿಮಗೆ ನಾನು ಎಷ್ಟು ಹಣ ಕೊಡಬೇಕು” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಇದು ಸುಳ್ಳು ಸುದ್ದಿ ಅನ್ನೋದನ್ನು ಮಲಯಾಳಂ ನಟ ಸ್ಪಷ್ಟ ಪಡಿಸಿದ್ದಾರೆ.

ಉನ್ನಿ ಮುಕುಂದನ್ ಜೊತೆ ಕಾಣಿಸಿಕೊಂಡಿರೋ ಅನುಶ್ರೀ ಕೂಡ ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ. 2012ರಲ್ಲಿ ‘ಡೈಮಂಡ್ ನೆಕ್ಲೆಸ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ ಸಾಕಷ್ಟು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ’12th ಮ್ಯಾನ್’, ‘ಕಲ್ಲನುಂ ಭಗವತಿಯುಂ’ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ‘ತಾರಾ’ ಅನ್ನೋ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

Leave a Comment

Your email address will not be published. Required fields are marked *