ಸಮಗ್ರ ನ್ಯೂಸ್: ನಮ್ಮ ದೈಹಿಕ ಆರೋಗ್ಯ ಉತ್ತಮವಾಗಿರುವ ಜೊತೆಗೆ ನಮ್ಮ ಮಾನಸಿಕ ಆರೋಗ್ಯವೂ ಉತ್ತಮವಾಗಿರಬೇಕು. ಆಗ ಮಾತ್ರ ನಾವು ಆರೋಗ್ಯಕರ ಜೀವನವನ್ನು ಹೊಂದಲು ಸಾಧ್ಯ. ಆದರೆ ಕೆಲವರಿಗೆ ಮೂಗಿನೊಳಗೆ ಬೆರಳನ್ನು ಹಾಕುವ ಅಭ್ಯಾಸವಿರುತ್ತದೆ. ಇದು ನಮ್ಮನ್ನು ಮಾನಸಿಕ ಕಾಯಿಲೆಗೆ ಬಲಿಯಾಗುವಂತೆ ಮಾಡುತ್ತದೆಯಂತೆ.
ತಜ್ಞರು ತಿಳಿಸಿದ ಪ್ರಕಾರ ಮೂಗಿನೊಳಗೆ ಬೆರಳನ್ನು ಹಾಕುವ ವ್ಯಕ್ತಿ ಮಾನಸಿಕ ರೋಗಕ್ಕೆ ತುತ್ತಾಗುತ್ತಾನಂತೆ. ಯಾಕೆಂದರೆ ಮೂಗಿನಲ್ಲಿ ಬೆರಳನ್ನು ಹಾಕುವ ಮೂಲಕ ಸೂಕ್ಷ್ಮಜೀವಿಗಳು ಮೂಗಿನ ಅಂಗಾಂಶಕ್ಕೆ ಸೋಂಕನ್ನು ಉಂಟುಮಾಡುತ್ತದೆ. ಇದು ನಂತರ ಮೆದುಳನ್ನು ತಲುಪುತ್ತದೆಯಂತೆ. ಯಾಕೆಂದರೆ ಮೂಗು ಮತ್ತು ಮೆದುಳಿಗೆ ನೇರ ಸಂಪರ್ಕವಿದೆ.
ಈ ಸೂಕ್ಷ್ಮಜೀವಿಗಳು ಮೆದುಳನ್ನು ತಲುಪಿ ಅಲ್ಲಿ ಅಮಿಲಾಯ್ಡ್ ಬೀಟಾ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆಯಂತೆ. ಇದು ಬುದ್ದಿಮಾಂದ್ಯತೆಗೆ ಕಾರಣವಾಗುತ್ತದೆಯಂತೆ. ಇದರಿಂದ ಜ್ಞಾಪಕ ಶಕ್ತಿಯಲ್ಲಿ ದುರ್ಬಲತೆ, ಯೋಚನಾ ಸಾಮರ್ಥ್ಯವನ್ನು ಕಳೆದುಕೊಳ್ಳುವುದು, ಮಾತನಾಡುವಾಗ ತೊದಲುವುದು ಮುಂತಾದ ಸಮಸ್ಯೆ ಕಾಡುತ್ತದೆಯಂತೆ.