ಸಮಗ್ರ ನ್ಯೂಸ್: ಜಿಲ್ಲೆಯ ಒಕ್ಕಲಿಗ ಗೌಡರ ಬಹುಕಾಲದ ಕನಸಾದ ನೂತನ ಜಿಲ್ಲಾ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲೆಯ ಎರಡನೆ ಅತೀ ದೊಡ್ಡ ಸಮುದಾಯವೆನಿಸಿದ ಒಕ್ಕಲಿಗ ಗೌಡರು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ನಿರ್ಣಾಯಕ ಸಮುದಾಯವಾಗಿ ಹೊರಹೊಮ್ಮುವ ಸಾಧ್ಯತೆಯನ್ನು ವಿಶ್ಲೇಷಿಸಲಾಯಿತು.
ನಾಲ್ಕೂ ಲಕ್ಷಕಿಂತ ಅಧಿಕ ಮತದಾರರೆ ಇದ್ದರು ಕ್ಯಾಂಪ್ಕೋ ಒಂದು ಹುದ್ದೆ ಸಮುದಾಯ ಪಡೆದುಕೊಂಡಿದ್ದರು ಉಳಿದಂತೆ ಯಾವುದೇ ಶಾಸನಾತ್ಮಕ ಹುದ್ದೆ, ಪ್ರಮುಖ ಮಂಡಳಿ, ಸಹಕಾರ ಕ್ಷೇತ್ರ ಗಳಲ್ಲಿ ಪ್ರಾತಿನಿದ್ಯದಿಂದ ಹೊರತಾಗಿರುವ ಬಗ್ಗೆ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳತ್ತ ಟೀಕೆ, ಆಕ್ರೋಶ ವ್ಯಕ್ತಗೊಂಡಿತ್ತು. ರಾಜಕೀಯ ಪಕ್ಷಗಳ ಸಹಿತ ಮಾಧ್ಯಮಗಳಲ್ಲೂ ಆಗಾಗ್ಗೆ ನಕಾರಾತ್ಮಕ ಸುದ್ದಿ ವೈಭವೀಕರಣ ಮುಖೇನ ನಿರ್ಲಕ್ಷ್ಯ ಭಾವನೆ ಮತ್ತಿತ್ತರ ಕಾರಣಗಳಿಂದ ಜಿಲ್ಲಾ ಸಂಘದ ಅಗತ್ಯತೆಯನ್ನು ಸಮುದಾಯ ಅನೇಕಮಂದಿ ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಗುರುಗಳಾದ ಶ್ರೀ ಧರ್ಮಪಾಲನಾಥ ಸ್ವಾಮಿಗಳ ಉಪಸ್ಥಿತಿಯಲ್ಲಿ ನೂತನ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಸಮಿತಿ ರಚನೆ ಬಗ್ಗೆ ಮಾಹಿತಿ ಇರಲಿಲ್ಲ. ಸಮಿತಿ ರಚನೆ ಆಗಿರುವುದು ಸಂತೋಷದ ಸಂಗತಿ. ಸಮಿತಿಯಲ್ಲಿ ವಿವಿಧ ಪಕ್ಷಗಳ ಸೈದ್ದಾಂತಿಕ ನೆಲೆಗಟ್ಟಿನ ಹಾಗು ಅಷ್ಟೇ ತಟಸ್ಥ ರಾಜಕೀಯ ನೀತಿಯ ಮುಖಂಡರು ಸಮಿತಿಯಲ್ಲಿರುವುದು ನೂತನ ಸಮಿತಿಯ ವಿಶೇಷತೆ ಎಂದು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು “ಸಮಗ್ರ” ಪ್ರತಿನಿಧಿಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಸಮಿತಿ ಪ್ರಮುಖರು ಅಧ್ಯಕ್ಷರಾಗಿ ಹಿರಿಯ ಬಿಜೆಪಿ ಪರಿವಾರ ನಾಯಕ ಉದ್ಯಮಿಯಾಗಿರುವ ಡಿ.ಬಿ. ಬಾಲಕೃಷ್ಣ ಆಯ್ಕೆಯಾದರು. ಉಪಾಧ್ಯಕ್ಷ ಪುರಂದರ ಗೌಡ ಟಿ., ಭಾಸ್ಕರ ದೇವಸ್ಯ, ಪ್ರಧಾನ ಕಾರ್ಯದರ್ಶಿ ಡಾ. ಎನ್.ಎ.ಜ್ಞಾನೇಶ್, ಜಂಟಿ ಕಾರ್ಯದರ್ಶಿ ದಾಮೋದರ ಗೌಡ, ಕೋಶಾಧಿಕಾರಿ ಕೆ.ವಿಶ್ವನಾಥ್ ಗೌಡ, ಜಂಟಿ ಕೋಶಾಧಿಕಾರಿ ಸೂರಜ್ ಕುಮಾರ್ ಯು. ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಕ್ಷಿತ್ ಪುತ್ತಿಲ, ಕೆ. ವಿಜಯ್ ಗೌಡ, ಸೌಮ್ಯಲತಾ, ಯಶವಂತ, ವಚನ ಜಯರಾಮ್, ಬಿ.ಅಮರನಾಥ, ಗೌರಿ ಹೆಚ್., ಶ್ರೀಕಾಂತ್ ಮಾವಿನಕಟ್ಟೆ, ಅನೂಪ್ ನರಿಯೂರು, ಮಧುರಾ ಯಂ.ಆರ್., ವಿಶ್ವನಾಥ್ ಯನ್., ಸಾರಿಕ ಸುರೇಶ್, ಯಸ್. ಶಾಂತರಾಜ್, ಯು.ಯಸ್. ಲಿಂಗಯ್ಯ ಆಯ್ಕೆಯಾಗಿದ್ದರೆ.
ಈ ಸಂದರ್ಭ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ, ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.