ಸಮಗ್ರ ನ್ಯೂಸ್: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಇಲ್ಲಿ ಫೆ.14 ರಂದು ನಡೆಯಲಿರುವ ಬೋಜನಾಲಯ ಮತ್ತು ಡಿಜಿಟಲ್ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ಹಲವು ವಿರೋಧಾಭಾಸ ಚರ್ಚೆಗಳು ಹೊರಬಿದ್ದಿದೆ.
ಈ ಬಗ್ಗೆ ಗ್ರಾಮಸ್ಥರೊಬ್ಬರು ‘ಸಮಗ್ರ ಸಮಾಚಾರ’ಕ್ಕೆ ಮಾಹಿತಿ ನೀಡಿದ್ದಾರೆ.
ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡ್ನೂರು ಮರ್ಕಂಜ ಶಾಲೆಯಲ್ಲಿ ಅನೇಕ ದಾನಿಗಳ ಹಾಗೂ ಸರ್ಕಾರದ ಅನುದಾನದಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ವಿಶೇಷವಾಗಿ ಊರ-ಪರಊರಿನ ಅನೇಕರಿಂದ ಹಾಗೂ ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ನಿರ್ಮಾಣ ಮಾಡಲಾದ ಬೋಜನಾಲಯದ ಉದ್ಘಾಟನೆ ಕಾರ್ಯಕ್ರಮ ನಡೆಯಲಿರುವುದು.
ಸರ್ಕಾರದ ಅನುದಾನದ ಜೊತೆಗೆ ಸಾರ್ವಜನಿಕರ ಕೊಡುಗೆಗಳ ಮೂಲಕ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅನೇಕ ಲೋಪದೋಷಗಳು , ಹಾಗೂ ಸರ್ಕಾರದ ಕಾರ್ಯಕ್ರಮದ ಶಿಷ್ಟಾಚಾರ ಉಲ್ಲಂಘನೆ ಕಂಡು ಬಂದಿರುವ ಕಾರಣ ಈ ಬಗ್ಗೆ ಚರ್ಚಿಸಲಾಗಿತ್ತು. ಆದರೆ ಸಮಂಜಸ ವಿಚಾರ ತಿಳಿದು ಬಂದಿರಲಿಲ್ಲ.
ಅದರೆ ಶಾಲೆಯ ಪೋಷಕರ ವಿಚಾರವೆಂದರೆ ಕೇವಲ ಕೆಲ ವ್ಯಕ್ತಿಗಳ ವೈಯಕ್ತಿಕ ದ್ವೇಷದಿಂದ ಅತಿಥಿಗಳನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕುವ ಬಗ್ಗೆ ಗೊಂದಲ ಸೃಷ್ಟಿ ಮಾಡಿರುವುದಲ್ಲದೆ ಶಾಲೆಗೆ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ಅತಿ ಹೆಚ್ಚು ಅನುದಾನ ತರಿಸಿ ಕೊಟ್ಟಂತಹ ವ್ಯಕ್ತಿಗಳನ್ನು ಕಡೆಗಣಿಸಿರುವುದು ಮತ್ತು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಅವಮಾನಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯತ್ ಉಪಾಧ್ಯಕ್ಷರೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ವಾರ್ಡ್ ಸದಸ್ಯರನ್ನು ಕಡೆಗಣಿಸಿರುವುದು ಶಾಲೆಯಲ್ಲಿ ನಡೆಯುವ ಕೆಲವು ವಿಚಾರಗಳಿಂದಾಗಿ ಪೋಷಕರಿಗೆ ಮತ್ತು ಹಳೆ ವಿದ್ಯಾರ್ಥಿಗಳಿಗೆ ತುಂಬಾ ಅಸಮಾಧಾನವಿದೆ.
ಶಿಕ್ಷಣ ಕ್ಷೇತ್ರದಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ, ಕ್ರೀಡಾ ಕ್ಷೇತ್ರದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ ,ಯಾವುದೇ ರಾಜಕೀಯ ಮಾಡಬಾರದು. ಆದರೆ ಈಗೀಗ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಸರ್ಕಾರಿ ಶಿಕ್ಷಣ ಕೇಂದ್ರಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ವಿಪರ್ಯಾಸ. ಏನೇ ಆದರೂ ಶಾಲೆಯ ಕಾರ್ಯಕ್ರಮ ಉತ್ತಮವಾಗಿ ನಡೆಯಬೇಕು ಅನ್ನುವ ಒಂದೇ ಕಾರಣಕ್ಕೆ ಎಲ್ಲರೂ ಮೌನಿಗಳಾಗಿದ್ದಾರೆ.
ಆದರೆ ಸರ್ಕಾರಿ ಶಾಲೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಾದರೂ ನೇರವಾಗಿ ಕಾರಣಕರ್ತರಾಗುವವರು ಶಾಲಾ ಮುಖ್ಯೋಪಾಧ್ಯಾಯರು, ಹಾಗೂ ಇಲಾಖೆಯ ಅಧಿಕಾರಿಗಳು. ಶಾಲಾಭಿವೃದ್ಧಿ ಸಮಿತಿ ,ಹಳೆ ವಿದ್ಯಾರ್ಥಿ ಸಂಘ ಪೋಷಕರು, ಹಾಗೂ ಅಧ್ಯಾಪಕ ವೃಂದದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.