ಲಸಿಕೆ ಹಾಕಿದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಮಗು ಸಾವು| ವೈದ್ಯರ ನಿರ್ಲಕ್ಷ್ಯ..?

ಸಮಗ್ರ ನ್ಯೂಸ್: ರಾಮನಗರದಲ್ಲಿ ಚುಚ್ಚುಮದ್ದು ಪಡೆದ ಕೆಲವೇ ಹೊತ್ತಿನಲ್ಲಿ ಒಂದೂವರೆ ತಿಂಗಳ ಗಂಡು ಮಗು ಮೃತಪಟ್ಟ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಚನ್ನಟ್ಟಣ ತಾಲೂಕಿನ ಭೈರಾಪಟ್ಟಣ ಗ್ರಾಮದ ಸ್ಪೂರ್ತಿ ಮತ್ತು ಮೋಹನ್ ದಂಪತಿಯ ಮಗು ಜಸ್ವಿಕ್ ಮೃತಪಟ್ಟಿದೆ.

Ad Widget ... ..

ದೊಡ್ಡಮಳೂರು ಗ್ರಾಮದಲ್ಲಿ ಇಂದು ಆರೋಗ್ಯ ಇಲಾಖೆ ಸಿಬ್ಬಂದಿ 18 ಮಕ್ಕಳಿಗೆ ಪೆಂಟಾ ಲಸಿಕೆ ನೀಡಿದ್ದಾರೆ. ಈ ಮಕ್ಕಳ ಪೈಕಿ ಜಸ್ವಿಕ್​ಗೆ ಚುಚ್ಚುಮದ್ದು ನೀಡಿದ ಒಂದು ಗಂಟೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದೆ.

Ad Widget

ಸೂಕ್ತ ರೀತಿಯಲ್ಲಿ ಮಗು ತಪಾಸಣೆ ಮಾಡದೇ ವ್ಯಾಕ್ಸಿನ್ ಹಾಕಿರುವ ಆರೋಪ ಕೇಳಿಬಂದಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇಂದು ಅದೇ ಗ್ರಾಮದಲ್ಲಿ 18 ಮಕ್ಕಳಿಗೆ ಲಸಿಕೆ ನೀಡಲಾಗಿತ್ತು. 18 ಮಕ್ಕಳ ಪೈಕಿ 17 ಮಕ್ಕಳ ಆರೋಗ್ಯ ಸ್ಥಿರವಾಗಿದ್ದು, ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಕುಟುಂಬಸ್ಥರ ಆರೋಪದ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Leave a Comment

Your email address will not be published. Required fields are marked *