Ad Widget .

ಭಾರತೀಯ ಜಾಹೀರಾತು ಜಗತ್ತಿಗೆ ಕಾಲಿಟ್ಟ ಜಾನಿ ಸಿನ್ಸ್| ಅಮೇರಿಕನ್ ನೀಲಿತಾರೆಗೆ ರಣವೀರ್ ಸಿಂಗ್ ಸಾಥ್

ಸಮಗ್ರ ನ್ಯೂಸ್: ಭಾರತೀಯ ಜಾಹೀರಾತು ಜಗತ್ತಿಗೆ ಮೊತ್ತಮೊದಲ ಬಾರಿಗೆ ಅಮೆರಿಕ ಮೂಲದ ನೀಲಿ ಚಿತ್ರಗಳ ತಾರೆ ಜಾನಿ ಸಿನ್ಸ್ ಪ್ರವೇಶ ಮಾಡಿದ್ದಾರೆ.

Ad Widget . Ad Widget .

ಮುಂಬೈ ಮೂಲದ Bold care ಎನ್ನುವ ಲೈಂಗಿಕ ಹಾಗೂ ವಯಸ್ಕರ ಸಂಬಂಧಿ ಉತ್ಪನ್ನಗಳ ತಯಾರಿಕಾ ಕಂಪನಿಯ ಹೊಸ ಜಾಹೀರಾತಿನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಜಾನಿ ಸಿನ್ಸ್‌ ಕಾಣಿಸಿಕೊಂಡಿದ್ದಾರೆ.

Ad Widget . Ad Widget .

1.49 ನಿಮಿಷದ ಈ ಜಾಹೀರಾತು ಇಂಟರ್‌ನೆಟ್‌ನಲ್ಲಿ ಭಾರಿ ಸದ್ದು ಮಾಡಿದ್ದು, ರಣವೀರ್ ಸಿಂಗ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಮೂಡಿಬಂದಿರುವ ಈ ಜಾಹೀರಾತಿನ ಕ್ರಿಯೇಟಿವಿಟಿಯನ್ನು ಹಲವರು ಮೆಚ್ಚಿಕೊಂಡಿದ್ದು, ಜಾನಿ ಸಿನ್ಸ್ ಅವರ ನಟನೆಯನ್ನು ಹಲವರು ಕೊಂಡಾಡಿದ್ದಾರೆ. ಅಲ್ಲದೇ ಇದರ ಕುರಿತು ನೆಟ್ಟಿಗರು ವಿವಿಧ ರೀತಿಯ ಚರ್ಚೆ ನಡೆಸುತ್ತಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?
ಒಂದು ಸಂಪ್ರದಾಯ ಕುಟುಂಬದಲ್ಲಿ ವಿವಾಹಿತ ಮಹಿಳೆ (ಸೊಸೆ) ಕೋಣೆಯಿಂದ ಹೊರಬಂದು ತಾನು ಮನೆ ಬಿಟ್ಟು ಹೋಗುವುದಾಗಿ ಕುಟುಂಬದ ಎಲ್ಲರ ಎದುರು ಹೇಳುತ್ತಾರೆ. ತನ್ನ ಗಂಡನಿಗೆ (ಜಾನಿ ಸಿನ್ಸ್) ಲೈಂಗಿಕ ದೌರ್ಬಲ್ಯ ಇದೆ ಎಂದು ಅತ್ತೆ, ಮಾವನ ಎದುರು ಅವರು ಹೇಳುತ್ತಾರೆ. ಇದರಿಂದ ಹಾಲ್‌ನಲ್ಲಿ ಕೂತಿದ್ದ ಮನೆ ಮಂದಿ ಆಘಾತಗೊಳ್ಳುತ್ತಾರೆ.

ಆಗ ಜಾಹೀರಾತಿನಲ್ಲಿ ಜಾನಿ ಸಿನ್ಸ್ ಸಹೋದರ ರಣವೀರ್ ಸಿಂಗ್ ಅವರು ಜಾನಿ ಸಿನ್ಸ್ ಬಳಿ ಸಮಜಾಯಿಷಿ ಕೇಳುತ್ತಾರೆ. ಅಷ್ಟರಲ್ಲಿ ಸೊಸೆ ಮಾತು ಕೇಳಿಸಿಕೊಂಡು ಅತ್ತೆ, ಸೊಸೆಗೆ ಜೋರಾಗಿ ಕೆನ್ನೆಗೆ ಬಾರಿಸುತ್ತಾರೆ. ಆಗ ಅಟ್ಟದಿಂದ ಸೊಸೆ ಬೀಳುವಾಗ ರಣವೀರ್ ಅವರು ಜಾನಿ ಸಿನ್ಸ್‌ ಅವರನ್ನು ಎಚ್ಚರಿಸಿ Bold care ಉತ್ಪನ್ನವೊಂದನ್ನು ಎಸೆಯುತ್ತಾರೆ. ಅದನ್ನು ತೆಗೆದುಕೊಂಡ ಜಾನಿ ಸಿನ್ಸ್ ತಮ್ಮ ಹೆಂಡತಿಯನ್ನು ಕೆಳಗೆ ಬೀಳದ ಹಾಗೆ ಜಂಪ್ ಮಾಡಿ ರಕ್ಷಿಸುತ್ತಾರೆ. ಅಲ್ಲಿಗೆ ‘ಸುಖಾಂತ್ಯ’ವಾಗುತ್ತದೆ.

ಅಯ್ಯಪ್ಪ ಕೆ.ಎಂ ಎನ್ನುವರ ಕಲ್ಪನೆಯಲ್ಲಿ ಈ ಜಾಹೀರಾತು ಮೂಡಿ ಬಂದಿದ್ದು, ತನ್ಮಯ್ ಭಟ್, ದೇವಯ್ಯ ಭೂಪಣ್ಣ ಎನ್ನುವರು ಸ್ಕ್ರಿಪ್ಟ್ ಬರೆದಿದ್ದಾರೆ.

Leave a Comment

Your email address will not be published. Required fields are marked *