Ad Widget .

ಹವಾಮಾನ ವರದಿ| ಕಡಿಮೆಯಾದ ಚಳಿ, ಅವಧಿಗೆ ಮುನ್ನವೇ ಶುರುವಾದ ಸೆಕೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಬಿಸಿ ಹೆಚ್ಚಾಗುತ್ತಿದೆ. ಬೆಳಗ್ಗೆ ಸ್ವಲ್ಪ ತಂಪಾದ ವಾತಾವರಣವಿದ್ದರೂ 10 ಗಂಟೆಯ ನಂತರಮೈ ಸುಡುವಂತ ಅನುಭವವಾಗುತ್ತಿದೆ. ಇಂದು (ಫೆ.10) ಕೂಡ ರಾಜ್ಯದ ಕೆಲವು ಕಡೆಗಳಲ್ಲಿ ಉಷ್ಣಾಂಶ ತುಸು ಹೆಚ್ಚಾಗಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿಯ ಒಂದೆರಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಳವಾಗಿದೆ. 3.1 ಡಿಗ್ರಿ ಸೆಲ್ಸಿಯಸ್‌ನಿಂದ 5 ಡಿಗ್ರಿ ಸೆಲ್ಸಿಯಸ್ ವರೆಗೆ ಹೆಚ್ಚಳವಾಗಿದೆ. ಕರಾವಳಿ, ಉತ್ತರ ಒಳನಾಡಿನ ಕೆಲವು ಕಡೆಗಳಲಲ್ಲಿ ಹಾಗೂ ದಕ್ಷಿಣ ಒಳನಾಡಿನ ಒಂದೆರೆಡು ಕಡೆಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ. ಅಂದರೆ 1.6 ಡಿಗ್ರಿ ಸೆಲ್ಸಿಯಸ್‌ನಿಂದ 3 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಡಿಮೆ ಉಷ್ಣಾಂಶ ಮಂಡ್ಯದಲ್ಲಿ 13.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

Ad Widget . Ad Widget . Ad Widget .

ಕರಾವಳಿ ಭಾಗದಲ್ಲಿ ಈ ಸಂದರ್ಭದಲ್ಲಿ ಸಾಮಾನ್ಯವಾಗಿ 30 ಡಿ.ಸೆ. ಗರಿಷ್ಠ ಉಷ್ಣಾಂಶ ಇರುತ್ತದೆ. ಆದರೆ, ಕಳೆದೆರಡು ವಾರಗಳಿಂದ ಮಂಗಳೂರು ಸಹಿತ ಕರಾವಳಿ ಭಾಗದ ಹಲವೆಡೆ 32 ರಿಂದ 33 ಡಿ.ಸೆ. ನಷ್ಟು ಉಷ್ಣಾಂಶ ದಾಖಲಾಗಿದೆ. ಗ್ರಾಮೀಣ ಭಾಗದಲ್ಲಿ ಚಳಿ ಕೇವಲ ಬೆಳಗಿನ ಜಾವಕ್ಕೆ ಸೀಮಿತವಾಗಿದೆ. ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ ಮುಂದಿನ ಕೆಲ ವಾರಗಳ ಕಾಲ ಇದೇ ರೀತಿಯ ಉಷ್ಣಾಂಶ ಮುಂದುವರೆಯುವ ಸಾಧ್ಯತೆ ಇದೆ.
ಕೆಲ ವರ್ಷಗಳಿಂದ ಕರಾವಳಿಯಲ್ಲಿ ಚಳಿಯ ಅವಧಿ ಕಡಿಮೆಯಾಗುತ್ತಿದೆ.

ಉಷ್ಣಾಂಶದಲ್ಲಿ ಇಳಿಕೆಯಾಗಿ ದೀರ್ಘ‌ ಚಳಿಗಾಲ ಇರುತ್ತಿತ್ತು. ಆದರೆ, ಈ ಬಾರಿ ಮಳೆ ಕಡಿಮೆಯಾದ ಕಾರಣ ಚಳಿಯೂ ಕಡಿಮೆಯಾಗಿ ಅವಧಿಗೂ ಮುನ್ನವೇ ಸೆಕೆ ಆರಂಭವಾಗಿದೆ.

Leave a Comment

Your email address will not be published. Required fields are marked *