Ad Widget .

ಚಿಕ್ಕಪೇಟೆಗೆ ಬಂತು ಮೋದಿ ಬಟ್ಟೆ| ಫುಲ್ ಡಿಮಾಂಡ್

ಸಮಗ್ರ ನ್ಯೂಸ್: ಮೋದಿ ಕ್ರೇಜ್ ಯಾರಿಗಿಲ್ಲ ಹೇಳಿ ಹೌದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ಮೋದಿಯವರ ಮೇಲೆ ಜನರಿಗೆ ತುಂಬಾ ಅಭಿಮಾನ ಶುರುವಾಗಿದೆ. ಇಷ್ಟು ದಿನ ಮೋದಿಯವರ ಕಟೌಟ್ ಗಳನ್ನ ಹಾಕಿ ಮೋದಿ ಮೇಲಿನ ಪ್ರೀತಿಯನ್ನ ವ್ಯಕ್ತಪಡಿಸುತ್ತಿದ್ದರು ಆದ್ರೆ ಇದೀಗ ಜನರು ಇದೀಗಾ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮೋದಿಯವರ ಫೋಟೋ ಇರುವ ಬಟ್ಟೆ ಹಾಕಲು ಮುಂದಾಗಿದ್ದಾರೆ. ಮೋದಿ ಬಟ್ಟೆಗೆ ಈಗ ಫುಲ್ ಡಿಮ್ಯಾಂಡ್ ಬಂದಿದೆ.‌ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆಗಳು ಎಂಟ್ರಿಕೊಟ್ಟಿವೆ.

Ad Widget . Ad Widget .

ಇದೆಲ್ಲದರೊಂದಿಗೆ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮೋದಿ ಕ್ರೇಜ್ ಜಾಸ್ತಿಯಾಗಿದೆ.‌ ಹೀಗಾಗಿ ನಗರದ ಚಿಕ್ಕಪೇಟೆಗೆ ಮೋದಿ ಫೋಟೋ‌ ಇರುವ ಪಾಲಿಸ್ಟರ್ ಫ್ಯಾಬ್ರಿಕ್ ಬಟ್ಟೆ ಎಂಟ್ರಿಕೊಟ್ಟಿದ್ದು, ಬಟ್ಟೆಯಲ್ಲಿ 3 ಡಿಸೈನ್ ಗಳು ಜನರನ್ನ ಸೆಳೆಯುತ್ತಿವೆ.‌ ಅದ್ರಲ್ಲಿ ಮೋದಿ ಕೈ ಬೀಸುವ, ಕಮಲದ ಮೇಲಿರುವ ಮೋದಿ ಡಿಸೈನ್ ಬಟ್ಟೆಯನ್ನ ವೇಸ್ ಕೋಟ್ ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.‌ ಡಿಜಿಟಲ್ ಪ್ರಿಂಟ್ ಇರುವ ಮೋದಿ ಬಟ್ಟೆಗೂ ಡಿಮ್ಯಾಂಡ್ ಇದ್ದು, ಜುಬ್ಬಾ, ವಾಸ್ ಕೋಟ್​ಗಳಿಗೆ ಜನರು ಬೇಡಿಕೆ ಇಡುತ್ತಿದ್ದಾರೆ.

Ad Widget . Ad Widget .

ಈ ಬಟ್ಟೆಯನ್ನ‌ ಅಹಮದಬಾದ್, ಬಾಂಬೆ ಸೇರಿದಂತೆ ವಿವಿಧ ಭಾಗಗಳಿಂದ ತರಿಸಿಕೊಳ್ಳುತ್ತಿದ್ದಾರೆ.‌ ಇದಲ್ಲದೇ ಎಂಪಿ ಎಲೆಕ್ಷನ್ ಹತ್ರ ಬರುತ್ತಿದ್ದು, ಮುಂದಿನ ದಿನಗಳ‌ಲ್ಲಿ ಮೋದಿ ಹವಾ ಇನ್ನು ಜೋರಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

Leave a Comment

Your email address will not be published. Required fields are marked *