Ad Widget .

ಮತ್ತೆ ಮೂವರು ಸಾಧಕರಿಗೆ ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರ

ಸಮಗ್ರ ನ್ಯೂಸ್: ಭಾರತದ ಮಾಜಿ ಪ್ರಧಾನಿಗಳಾದ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಮತ್ತು ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್ ಮತ್ತು ಬಿಜೆಪಿ ಧುರೀಣ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಮೊನ್ನೆ ಕೇಂದ್ರವು ಭಾರತ ರತ್ನ ಘೋಷಿಸಿದ ನಂತರ ಈ ಘೋಷಣೆ ಮಾಡಲಾಗಿದೆ. ಈಗ 5 ಭಾರತ ರತ್ನ ಪ್ರಶಸ್ತಿಗಳನ್ನು ಘೋಷಿಸಿದೆ.

Ad Widget . Ad Widget .

ಪಾಮುಲಪರ್ತಿ ವೆಂಕಟ ನರಸಿಂಹ ರಾವ್ ಅವರು 1991 ರಿಂದ 1996 ರವರೆಗೆ ಭಾರತದ ಒಂಬತ್ತನೇ ಪ್ರಧಾನ ಮಂತ್ರಿಯಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಉದಾರೀಕರಣ ಮತ್ತು ಜಾಗತೀಕರಣ ಕ್ರಮಗಳನ್ನು ಒಳಗೊಂಡಂತೆ ಗಮನಾರ್ಹ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದರು. ರಾಜಕೀಯ ಸವಾಲುಗಳ ಹೊರತಾಗಿಯೂ ಕೆಲಸಗಳನ್ನು ಮಾಡಿದ್ದಾರೆ. ಮತ್ತು ನೆರೆಯ ದೇಶಗಳೊಂದಿಗೆ ರಾಜತಾಂತ್ರಿಕ ಪ್ರಸ್ತಾಪಗಳನ್ನು ಪ್ರಾರಂಭಿಸಿದ ಗೌರವ ಇವರಿಗೆ ಸಲ್ಲುತ್ತದೆ. ಭಾರತದ ಆರ್ಥಿಕ ಪರಿವರ್ತನೆ ಮತ್ತು ರಾಜಕೀಯ ಬದಲಾವಣೆಗೆ ರಾವ್ ಅವರ ಕೊಡುಗೆ ಅಪಾರ ಒಬ್ಬ ಸುಧಾರಕ ರಾಜಕಾರಣಿಯಾಗಿ ಸೇವೆ ಸಲ್ಲಿಸಿದ್ದಾರೆ.

Ad Widget . Ad Widget .

ಚರಣ್ ಸಿಂಗ್ ದೇಶದ ಐದನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು ಹಾಗೂ ಒಬ್ಬ ಗಮನಾರ್ಹ ಭಾರತೀಯ ರಾಜಕೀಯ ನಾಯಕರಾಗಿದ್ದರು. ಉತ್ತರ ಪ್ರದೇಶದಿಂದ ಬಂದ ಅವರು ಕೃಷಿ ಸುಧಾರಣೆ ಕಾರ್ಯಗಳನ್ನು ಆರಂಭಿಸಿದರು ಮತ್ತು ರೈತರ ಹಕ್ಕುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ವೃತ್ತಿಜೀವನದ ಉದ್ದಕ್ಕೂ ದೇಶ ಸೇವೆಗೆ ಹೆಚ್ಚು ಪ್ರಮುಖ್ಯತೆ ನೀಡಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಒತ್ತು ನೀಡಿದರು.

ಎಂಎಸ್ ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು. ಇವರು ಒಬ್ಬ ಪ್ರಸಿದ್ಧ ಭಾರತೀಯ ಕೃಷಿ ವಿಜ್ಞಾನಿ. ಹೆಚ್ಚು ಇಳುವರಿ ನೀಡುವ ಗೋಧಿ ತಳಿಗಳ ಕುರಿತು ಅವರ ಅದ್ಭುತ ಸಂಶೋಧನೆಯನ್ನು ನಡೆಸಿದರು. ಈ ಸಂಶೋಧನೆ 1960 ಮತ್ತು 1970 ರ ದಶಕದಲ್ಲಿ ಭಾರತದಲ್ಲಿ ಕೃಷಿ ಉತ್ಪಾದಕತೆಯನ್ನು ಪರಿವರ್ತಿಸಿತು, ಇದರಿಂದ ದೇಶದ ಆಹಾರದ ಕೊರತೆಯನ್ನು ನಿವಾರಿಸಿತು. ಸುಸ್ಥಿರ ಕೃಷಿ ಪದ್ಧತಿಗಾಗಿ ಸ್ವಾಮಿನಾಥನ್ ಅವರಿಗೆ ವಿಶ್ವ ಆಹಾರ ಪ್ರಶಸ್ತಿ ಮತ್ತು ಪದ್ಮವಿಭೂಷಣದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದರು. ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸುವಲ್ಲಿ ವಿಶ್ವಾದ್ಯಂತ ವಿಜ್ಞಾನಿಗಳು ಮತ್ತು ನೀತಿ ನಿರೂಪಕರಿಗೆ ಅವರ ಕೆಲಸವು ಸ್ಫೂರ್ತಿಯಾಗಿತ್ತು

Leave a Comment

Your email address will not be published. Required fields are marked *