Ad Widget .

ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಲವ್ವಿಡವ್ವಿ|ಮನನೊಂದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಇರುವುದನ್ನು ಕಣ್ಣಾರೆ ನೋಡಿದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಮೃತನ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಗನ ಅತ್ಮಹತ್ಯೆಗೆ ಯುವತಿಯೇ ಪ್ರಚೋದನೆ ನೀಡಿದ್ದಾಳೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.

Ad Widget . Ad Widget .

ದಿವ್ಯಾ ಎಂಬಾಕೆಗೆ ಈ ಹಿಂದೆ ಬೇರೊಬ್ಬ ಯುವಕನೊಂದಿಗೆ ಮದುವೆಯಾಗಿತ್ತು. ಬಳಿಕ ಆಕೆ ವಿಚ್ಚೇದನ ಪಡೆದಿದ್ದಳು. ವಿಚ್ಚೇದನ ಪಡೆದ ಸ್ವಲ್ಪ ದಿನದಲ್ಲೇ ಅನ್ಬರಾಸನ್ ಎಂಬ ಯುವಕನನ್ನು ಪ್ರೀತಿಸಲು ಆರಂಭಿಸಿದ್ದಳು. ಗಂಡ ಹೆಂಡತಿ ಎಂದು ಹೇಳಿ ಚಿಕ್ಕನಾಗಮಂಗಲದ ಬಾಡಿಗೆ ಮನೆ ಪಡೆದು ಕಳೆದ ಆರು ತಿಂಗಳಿನಿಂದ ಲೀವ್​ ಇನ್ ರಿಲೇಷನ್​ನಲ್ಲಿದ್ದರು. ವಿದ್ಯಾ ಐಟಿ ಕಂಪನಿ ಉದ್ಯೋಗಿಯಾಗಿದ್ದರೆ, ಅನ್ಬರಾಸನ್ ಫ್ಲಿಪ್ ಕಾರ್ಟ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಅನ್ಬರಾಸನ್ ಜೊತೆ ಪ್ರೀತಿಯಲ್ಲಿ ಇರುವಾಗಲೇ ವಿದ್ಯಾಗೆ ಸಂತೋಷ್ ಎಂಬ ಯುವಕನ ಜೊತೆ ಲವ್ವಿಡವ್ವಿ ಶುರು ಮಾಡಿದ್ದಾಳೆ. ಈ ವಿಚಾರ ಅನ್ವರಸನ್​ಗೆ ತಿಳಿದಿದೆ. ಅಲ್ಲದೆ, ಮನೆಯಲ್ಲಿ ಸಂತೋಷ್ ಹಾಗೂ ವಿದ್ಯಾ ಜೊತೆಯಲ್ಲಿದ್ದಾಗ ಅನ್ಬರಾಸನ್ ಕಣ್ಣಾರೆ ಕಂಡಿದ್ದನು.

Ad Widget . Ad Widget .

ಈ ವಿಚಾರವಾಗಿ ವಿದ್ಯಾಗೆ ಬುದ್ಧಿ ಹೇಳಿದರೂ ಆಕೆ ಕೇಳಿರಲಿಲ್ಲ. ಇದರಿಂದ ಮನನೊಂದು ಅನ್ಬರಾಸನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ನಂತರ ಸ್ನೇಹಿತನ ಜೊತೆ ಅನ್ಬರಸನ್ ಹಾಗೂ ವಿದ್ಯಾ ಮಾತನಾಡಿರುವ ಕಾಲ್ ರೇಕಾರ್ಡ್ ಲಭ್ಯವಾಗಿದೆ. ಅದರ ಅಧಾರದ ಮೇಲೆ ಅತ್ಮಹತ್ಯೆಗೆ ಪ್ರಚೋದನೆ ಎಂದು ಪೋಷಕರು ಪ್ರಕರಣ ದಾಖಲಿಸಿದ್ದಾರೆ. ಅದರಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಂತೋಷ್ ಹಾಗೂ ವಿದ್ಯಾ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *