Ad Widget .

ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿದ ನಿರ್ಮಲಾ ಸೀತಾರಾಮನ್| ಬ್ಲ್ಯಾಕ್ ಪೇಪರ್ ಮಂಡಿಸಲು ಮುಂದಾದ ಕಾಂಗ್ರೆಸ್| ಆಡಳಿತ ವಿಪಕ್ಷಗಳ ನಡುವೆ ಪೇಪರ್ ಫೈಟ್

ಸಮಗ್ರ ನ್ಯೂಸ್: ಲೋಕಸಭೆಯಲ್ಲಿ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ವೇತ ಪತ್ರ ಮಂಡಿಸಿದ್ದಾರೆ. 2004ರಿಂದ 2014ರವರೆಗೆ 10 ವರ್ಷ ಯುಪಿಎ ಅಧಿಕಾರದಲ್ಲಿತ್ತು. ಇದಾದ ನಂತರ 2014ರಿಂದ 2024, ಇಲ್ಲಿವರೆಗೆ 10 ವರ್ಷ ಎನ್​ಡಿಎ ಆಡಳಿತ ಇದೆ. ಈ ಎರಡೂ ಆಡಳಿತದಲ್ಲಿ ಆರ್ಥಿಕ ನಿರ್ವಹಣೆ ಹೇಗಿತ್ತು, ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂದು ವಿವರಿಸಿ ಸರ್ಕಾರ ಶ್ವೇತಪತ್ರ ಹೊರಡಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇನ್ನು ಕಾಂಗ್ರೆಸ್‌ ಅಧಿಕಾರಾವಧಿಯ 10 ವರ್ಷಗಳಲ್ಲಿನ ಆರ್ಥಿಕ ಸ್ಥಿತಿಗತಿ ಕುರಿತು ಕೇಂದ್ರದ ಬಿಜೆಪಿ ಸರ್ಕಾರ ಶ್ವೇತ ಪತ್ರ ಹೊರಡಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೆ, ಇದಕ್ಕೆ ಕೌಂಟರ್‌ ಕೊಡುವ ರೀತಿಯಲ್ಲಿ ಕಾಂಗ್ರೆಸ್‌ ಪಕ್ಷವು ಸಹ ಕೇಂದ್ರ ಸರ್ಕಾರದ ವಿರುದ್ಧ ಬ್ಯ್ಲಾಕ್‌ ಪೇಪರ್(‌ ಕಪ್ಪು ಕಾಗದ) ಹೊರಡಿಸಲು ಮುಂದಾಗಿದೆ.

Ad Widget . Ad Widget . Ad Widget .

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಕಪ್ಪು ಕಾಗದ’ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ 10 ವರ್ಷಗಳ ಆರ್ಥಿಕ ಸಾಧನೆಯನ್ನು ಬಿಜೆಪಿ ನೇತೃತ್ವದ 10 ವರ್ಷಗಳ ಆರ್ಥಿಕ ಸಾಧನೆಯೊಂದಿಗೆ ಹೋಲಿಸಿ ‘ಶ್ವೇತಪತ್ರ’ ಹೊರತರುವುದಾಗಿ ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಈ ಹಿಂದೆ ಘೋಷಿಸಿತ್ತು.

2024-25ರ ಮಧ್ಯಂತರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2014 ರಲ್ಲಿ ಅಧಿಕಾರ ವಹಿಸಿಕೊಂಡ ಮೋದಿ ಸರ್ಕಾರವು ಆ ವರ್ಷಗಳ ಬಿಕ್ಕಟ್ಟನ್ನು ನಿವಾರಿಸಿದೆ ಮತ್ತು ಆರ್ಥಿಕತೆಯನ್ನು ಉನ್ನತ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೃಢವಾಗಿ ಇರಿಸಲಾಗಿದೆ ಎಂದು ಹೇಳಿದರು.

‘ಯುಪಿಎ ಆಡಳಿತದ ಬಹಳಷ್ಟು ವೈಫಲ್ಯಗಳನ್ನು ಸವಾಲಾಗಿ ಸ್ವೀಕರಿಸಿದ ನಂತರ ಕೈಗೊಂಡ ಕಠಿಣ ನಿರ್ಧಾರಗಳಿಂದಾಗಿ ಕಳೆದ ಒಂದು ದಶಕದಲ್ಲಿ ದೇಶವನ್ನು ಎನ್‌ಡಿಎ ಸಾಧನೆಯ ಹಾದಿಯಲ್ಲಿ ಕೊಂಡೊಯ್ಯುತ್ತಿದೆ’ ಎಂದು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆಗೊಳಿಸಿದ ಶ್ವೇತಪತ್ರದಲ್ಲಿ ಹೇಳಲಾಗಿದೆ.

ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ ನಡೆಯುವ ಕೊನೆಯ ಸಂಸತ್ ಅಧಿವೇಶನವಾಗಿರುವ ಬಜೆಟ್ ಅಧಿವೇಶನವು ಫೆಬ್ರವರಿ 9 ರಂದು ಮುಕ್ತಾಯಗೊಳ್ಳಲಿದೆ.

Leave a Comment

Your email address will not be published. Required fields are marked *