ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಮುತ್ತಿಗೆ ನಡೆಸಿ ಛೀಮಾರಿ ಹಾಕಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆದಿದೆ.
ಏನಿದು ಪ್ರಕರಣ?
ಕಳೆದ ಕೆಲ ತಿಂಗಳ ಹಿಂದೆ ಐವರ್ನಾಡಿನಲ್ಲಿ ಕುಂದಾಪುರ ಮೂಲದ ಯೂಟ್ಯೂಬ್ ಚಾನೆಲ್ ಒಂದು ಸಂದರ್ಶನ ನಡೆಸಿ ಕಾರ್ಯಕ್ರಮ ಬಿತ್ತರಿಸಿತ್ತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳ ಕುರಿತಂತೆ ವರದಿ ಮಾಡಲಾಗಿದ್ದು, ಐವರ್ನಾಡಿನಲ್ಲಿ ನಡೆಸಿದ ಸಂದರ್ಶನದ ತುಣುಕಿನಲ್ಲಿ ಜಾತಿನಿಂದನೆ ಕುರಿತಂತೆ ಹೇಳಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಆ ಯೂಟ್ಯೂಬ್ ಚಾನಲ್ ನ ಮೇಲೆ ಪ್ರಕರಣ ದಾಖಲಾಗಿದ್ದು, ಈ ಕುರಿತು ಮಹಜರು ನಡೆಸಲು ಪೊಲೀಸರೊಂದಿಗೆ ಯೂಟ್ಯೂಬ್ ತಂಡ ಇಂದು (ಫೆ.8) ಐವರ್ನಾಡಿಗೆ ಬಂದಿತ್ತು. ಇದೇ ವೇಳೆ ಸ್ಥಳಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಅಧಿಕಾರಿಗಳೂ ಆಗಮಿಸಿದ್ದು, ಪ್ರಕರಣವನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದಾರೆ. ಈ ಕುರಿತು ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣ ಬೇರೆ ತಿರುವು ಪಡೆದುಕೊಳ್ಳುತ್ತಿದೆ.