Ad Widget .

ಕಡಬ: ಬೀದಿನಾಯಿಗಳ ಅಟ್ಟಹಾಸಕ್ಕೆ ಬಡಪಾಯಿ ಆಡು ಬಲಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಯ ಕಡಬದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಕಡಬ ಪೇಟೆಯಲ್ಲಿ ಅಲೆದಾಡುತ್ತಿದ್ದ ಆಡನ್ನು ಬೆನ್ನಟ್ಟಿದ್ದ ಬೀದಿನಾಯಿಗಳು ಅದರ ಹಿಂಬದಿ ಕಚ್ಚಿ ಎಳೆದಾಡಿ ಸಿಗಿದು ಹಾಕಿದ ಘಟನೆ ನಡೆದಿದೆ.

Ad Widget . Ad Widget .

ಬಡಪಾಯಿ ಆಡಿನ ಕಾಲು ಸಹಿತ ಹಿಂಭಾಗದ ಮಾಂಸವನ್ನು ಬೀದಿನಾಯಿಗಳು ಕಚ್ಚಿ ತಿಂದಿದ್ದು ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡಿದ ಆಡು ಪ್ರಾಣ ಕಳೆದುಕೊಂಡಿದೆ. ಬೀದಿ ನಾಯಿಗಳ ದಾಳಿಯಿಂದ ಆಡನ್ನು ರಕ್ಷಿಸಲು ಸ್ಥಳೀಯ ವರ್ತಕರು ಮುಂದಾಗಿದ್ದರೂ ನಾಯಿಗಳ ಗುಂಪು ದಾಳಿಯಿಂದ ಸಾಧ್ಯವಾಗಿಲ್ಲ ಎನ್ನಲಾಗಿದೆ.

Ad Widget . Ad Widget .

ಹಲವು ಬಾರಿ ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡದಂತೆ ಸೂಚನೆ ನೀಡಿದ್ದರೂ ಮಾಲಿಕರು ಕ್ಯಾರೇ ಎನ್ನದೆ ರಸ್ತೆಗೆ ಬಿಡುತಿದ್ದು ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ.

Leave a Comment

Your email address will not be published. Required fields are marked *