ಸಮಗ್ರ ನ್ಯೂಸ್: 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಫೈನಲ್‍ಗೆ ಲಗ್ಗೆ ಇಟ್ಟಿದ್ದು, ಐದು ಬಾರಿಯ ಚಾಂಪಿಯನ್ ಭಾರತ ತಂಡ ಫೈನಲ್‍ನಲ್ಲಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಬೆನೋನಿಯ ವಿಲೋಮೂರ್ ಪಾಕ್ರ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ 7 ವಿಕೆಟ್‍ಗೆ 244 ರನ್‍ಗಳಿಗೆ ಉತ್ತರವಾಗಿ ಭಾರತ ತಂಡ 48.5 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 248 ರನ್ ಬಾರಿಸುವ ಮೂಲಕ ಸತತ ಐದನೇ ಬಾರಿಗೆ 19 ವಯೋಮಿತಿ ವಿಶ್ವಕಪ್ ಟೂರ್ನಿಯ ಫೈನಲ್‍ಗೆ ಲಗ್ಗೆ ಇಟ್ಟಿತು.
ಕೇವಲ 32 ರನ್ ಬಾರಿಸುವಾಗಲೇ 4 ವಿಕೆಟ್‍ಗಳನ್ನು ಕಳೆದುಕೊಂಡಿದ್ದ ಭಾರತ ತಂಡ ಸೋಲಿನ ಭೀತಿಯಲ್ಲಿ ಇತ್ತು. ಈ ವೇಳೆ ನಾಯಕ ಉದಯ್ ಶರಣ್ ಜೊತೆಯಾದ 6ನೇ ಕ್ರಮಾಂಕದ ಬ್ಯಾಟ್ಸ್‍ಮನ್ ಸಚಿನ್ ಧಾಸ್ ಅಮೂಲ್ಯ ಜೊತೆಯಾಟ ನಿಭಾಯಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. 5ನೇ ವಿಕೆಟ್‍ಗೆ ಈ ಜೋಡಿ ಅಮೂಲ್ಯ 171 ರನ್ ಜೊತೆಯಾಟವಾಡಿತು. ಗೆಲುವಿನಿಂದ ಕೇವಲ 4 ರನ್ ದೂರವಿದ್ದಾಗ 124 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 81 ರನ್ ಬಾರಿಸಿದ್ದ ಉದಯ್ ಶರಣ್ ರನ್‍ಔಟ್ ಆಗಿ ನಿರ್ಗಮಿಸಿದರೂ ಮರು ಎಸೆತದಲ್ಲಿ ರಾಜ್ ಲಿಂಬಾಣಿ ಬೌಂಡರಿ ಸಿಡಿಸಿ ತಂಡವನ್ನು ಫೈನಲ್‍ಗೇರಿಸಿದರು.