ಸುಳ್ಯ:ಎಸ್‌ಡಿಪಿಐ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಕೊಟ್ಯಾಡಿ ಯಲ್ಲಿ ಸ್ನೇಹ ಸಮ್ಮಿಲನ ಹಾಗೂ ಕ್ರೀಡಾಕೂಟ ಕಾರ್ಯಕ್ರಮ|ಸಮಾರಂಭದಲ್ಲಿ ಪಕ್ಷದ ಟೀ ಶರ್ಟ್ ಬಿಡುಗಡೆ

ಸಮಗ್ರ ನ್ಯೂಸ್:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ಸ್ನೇಹ ಸಮ್ಮಿಲನ ಮತ್ತು ಕ್ರೀಡಾಕೂಟ ಕಾರ್ಯಕ್ರಮವು ಫೆ. 5ರಂದು ಕೊಟ್ಯಾಡಿಯಲ್ಲಿ ನಡೆಯಿತು.

Ad Widget ... ..

ಎಸ್‌ಡಿಪಿಐ ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಆಗಮಿಸಿ ಸಂದೇಶ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಆಟೋಟಪಗಳನ್ನು ನಡೆಸಲಾಯಿತು. ಕ್ರೀಡಾಕೂಟವನ್ನು ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕೆನರಾ ಉದ್ಘಾಟಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸ್ಫರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು

Ad Widget

ಇದೇ ವೇಳೆ ಎಸ್‌ಡಿಪಿಐ ಸುಳ್ಯ ಬ್ಲಾಕ್ ನ ಟೀ ಶರ್ಟ್ ನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಅಬ್ದುಲ್ ಕಲಾಂ ಸುಳ್ಯ ಬಿಡುಗಡೆಗೊಳಿಸಿದರು‌.

ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಶರೀಫ್ ನಿಂತಿಕಲ್, ಪಕ್ಷ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಸವಣೂರು, ಗ್ರಾಮ ಸಮಿತಿ ಬ್ಲಾಕ್ ಸಮಿತಿ ಹಾಗೂ ವಿಧಾನಸಭಾ ಸಮಿತಿ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *