Ad Widget .

ಕೋಲಾರದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿಸಲು ನೂಕುನುಗ್ಗಲು

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್‌‌ ಅಕ್ಕಿಗೆ ನಿನ್ನೆಯಿಂದ ಚಾಲನೆ ದೊರಕಿದೆ. ಕೆಜಿ ಭಾರತ್ ಬ್ರ್ಯಾಂಡ್​ ಅಕ್ಕಿಗೆ 29 ರೂ.ದರ ನಿಗದಿ ಮಾಡಲಾಗಿದು, 5, 10 ಕೆಜಿ ಬ್ಯಾಗ್ ಗಳಲ್ಲಿ ಭಾರತ್ ಅಕ್ಕಿ ಲಭ್ಯವಾಗುತ್ತಿದೆ.

Ad Widget . Ad Widget .

ನಿನ್ನೆ ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಅಕ್ಕಿ ಯೋಜನೆಗೆ ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಚಾಲನೆ‌ ನೀಡಿದರು. ಅದರಂತ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ಭಾರತ್ ಅಕ್ಕಿ ವಿತರಣೆ ಮಾಡಲಾಗಿದ್ದು, ಪ್ರತಿ ಕೆಜಿಗೆ 29ರೂ ನಂತೆ ಹತ್ತು ಕೆಜಿ ಅಕ್ಕಿಯ ಬ್ಯಾಗ್ ವಿತರಿಸಲಾಗಿದೆ. ಈ ವೇಳೆ ಅಕ್ಕಿ ಪಡೆಯಲು ಜನರ ನೂಕು ನುಗ್ಗಲು ನಿರ್ಮಾಣವಾಗಿದ್ದು, ಕೆಲವೇ ಕ್ಷಣಗಳಲ್ಲಿ ಒಂದು ಲಾರಿ ಲೋಡ್ ಅಕ್ಕಿ ಖಾಲಿಯಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *