Ad Widget .

ಉಡುಪಿ: ಸುಳ್ಯದ ಬಿಜೆಪಿ ನಾಯಕರ ಸಹಿತ ಕೇಂದ್ರ ಸಚಿವೆಯ ವಿರುದ್ದ ಸಂಘಟನಾ ಕಾರ್ಯದರ್ಶಿ ಗರಂ..! ಕಚೇರಿಗೆ ಬೀಗ ಹಾಕಲು ಇವರು ಯಾರು?

ಸಮಗ್ರ ನ್ಯೂಸ್: ಉಡುಪಿಯಲ್ಲಿ ನಡೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಸಂಸದೆ ಹಾಗು ಸುಳ್ಯ ಪಕ್ಷ ಕಚೇರಿಗೆ ಬೀಗ ಜಡಿದ ಪ್ರಕರಣ ಸಂಬಂಧ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ರವರು ತೀವ್ರ ಗರಂ ಆಗಿರುವುದು ಶಾಸಕರಾಧಿಯಾಗಿ ಪಕ್ಷ ನಾಯಕರನ್ನು ದಂಗುಬಡಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Ad Widget . Ad Widget .

ಸುಳ್ಯ ಕಚೇರಿಗೆ ಬೀಗ ಹಾಕಲು ಕೋರ್ ಕಮಿಟಿಯವರು ಯಾರು..? ೧೦ ವರ್ಷಗಳಿಂದ ಕಚೇರಿ ಬಾಡಿಗೆ ಕಟ್ಟಡದಲ್ಲಿದೆ. ಯಾರ ಮನೆಯಿಂದಲೂ ಸಂಗ್ರಹಿಸಿ ಬಾಡಿಗೆ ಕಟ್ಟುತ್ತಿಲ್ಲ. ಪಕ್ಷದ ದೇಣಿಗೆಯಿಂದ ನಿರ್ವಹಿಸಲಾಗುತ್ತಿದೆ. ಪಕ್ಷ, ಅಥವಾ ಶಾಸಕ ಅಭ್ಯರ್ಥಿ ಹುದ್ದೆಗೆ ಏಕೈಕ ಹೆಸರು ಕಳುಹಿಸಿ ನಮ್ಮ ಮೇಲೆ ಹೇರಿಕೆ ಮಾಡುತ್ತಿದ್ದಾರೆ. ಮೊದಲ ಬಾರಿ ನಾಲ್ಕು, ಬಳಿಕ ಏಕೈಕ ಹೆಸರು ಕಳುಹಿಸುವುದು. ಮತ್ತೊಂದು ಬಾರಿಯೂ ಮೂರ್ನಾಲ್ಕು ಅಯ್ಕೆಯ ಹೆಸರು ಕಳುಹಿಸಲು ಯಾಕೆ ಇವರಿಗೆ ಸಾಧ್ಯವಿಲ್ಲ..?ಇಂತಹ ಬ್ಲಾಕ್ಮೆಲ್ ತಂತ್ರಗಾರಿಕೆ ಪಕ್ಷದಲ್ಲಿ ಇನ್ನು ನಡೆಯಲಾರದು ಎಂದು ಗರಂ ಆಗಿದ್ದಾರೆ.

Ad Widget . Ad Widget .

ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ನಾಯಕರಾಗಲಿ ಮುಂದೆ ಬರಲು ಬಿಡಬಾರದು, ತನ್ನದೆ ನಿರ್ಧಾರ ಎನ್ನುವ ಏಕವ್ಯಕ್ತಿ ಅಥವಾ ಗುಂಪುಗಾರಿಕೆ ಪ್ರವೃತ್ತಿ ಯನ್ನು ಖಡಾಖಂಡಿತವಾಗಿ ಇನ್ನು ಸಹಿಸುವುದಿಲ್ಲ. ಪಕ್ಷದ ಹೃದಯ ಸ್ಥಾನ ವೆನಿಸಿದ ಸುಳ್ಯದಲ್ಲೂ ಇಂತಹ ಕೀಳು ನಡವಳಿಕೆ ಪ್ರದರ್ಶಿಸಿದ್ದಾರೆ. ಇದು ನಮ್ಮ ಮೇಲಿನ ನೇರ ಬಲಪ್ರಯೋಗ ಮತ್ತು ಸ‌ಂಘಟನೆಗೆ ಎಸೆದ ಸವಾಲಿದು. ಪಕ್ಷ ತೀರ್ಮಾನ ಮಾಡಿದ ಬಳಿಕ ಅದಕ್ಕೆ ಬದ್ಧವಾಗಿರಬೇಕಿತ್ತು ಎನ್ನುವ ರಾಜೇಶ್ ಅವರ ನೇರ ಮಾತಿಗೆ ಸೇರಿದ್ದವರು ಶಾಕ್ ಗೆ ಒಳಗಾದರೆನ್ನಲಾಗಿದೆ.

ಸಂಸದೆ ಶೋಭಾ ಅವರ ಅನುಪಸ್ಥಿತಿಯ ನಡುವೆಯೂ ಅವರನ್ನು ಬಿಡದೇ ನೇರ ಹೆಸರೆತ್ತಿ ತರಾಟೆಗೆತ್ತಿಕೊಂಡ ರಾಜೇಶ್, ” ನಿಮ್ಮ ದುರಾದೃಷ್ಟವೊ ಏನೋ ಗೊತ್ತಿಲ್ಲ.. ಬೇಕಾದರೆ ಅವರೇ ಮತ್ತೊಮ್ಮೆ ಅಭ್ಯರ್ಥಿಯಾಗಲಿ, ನನಗೊತ್ತಿಲ್ಲ ಯಾರು ಆದೀತೆಂಬುದು ಬೇಕಿದ್ದರೆ ಹಾಗೆ ಅವರಿಗೆ ತಿಳಿಸಿಬಿಡಿ. ನನಗೆ ಯಾರ ಭಯವಿಲ್ಲ. ಇನ್ನೆರಡು ತಿಂಗಳಲ್ಲಿ ಕ್ಷೇತ್ರಕ್ಕೆ ಐದು ಸುತ್ತಿನ ಪ್ರವಾಸ ಕೈಗೊಳ್ಳಲಿ. ಅದು ಸಾಧ್ಯ ವಾಗಿಲ್ಲ ಎಂದಾದರೆ ಅಭ್ಯರ್ಥಿ ಬದಲಾವಣೆ ತೀರ್ಮಾನ ಮಾಡಿ ಹೆಸರು ನೀಡಿ. ಅವರ ಕಟೌಟ್, ಬ್ಯಾನರ್ ಎಲ್ಲೂ ಹಾಕಬೇಡಿ. ಮೋದಿ ಪೋಟೊ ಹಾಕಿ ಮತ ಕೇಳಲಿ. ಇವರಂತವರಿಗೆ ಮೋದಿ ಅಲೆಯಲ್ಲಿ ಗೆಲ್ಲುವ ಜಾಯಮಾನ ಸಾಮಾನ್ಯವಾಗಿ ಬಿಟ್ಟಿದೆ ಎಂದು ವಾಗ್ದಾಳಿ ಮಾಡಿದರೆಂದು ಮೂಲಗಳು ಮಾಹಿತಿ ನೀಡಿವೆ.

ಪಕ್ಷ ನಾಯಕರು ಮತ್ತು ಶಾಸಕರಿಗೆ
ಕಾರ್ಯಕರ್ತರ ಸಂಪರ್ಕವಿಲ್ಲ. ಗುಂಪುಗಾರಿಕೆ, ಹೊಸಬರನ್ನು ಬೆಳೆಸುವ ಮನಸ್ಸೂ ಕೂಡಾ ಇಲ್ಲ ಎನ್ನುವಂತಹ ಖಡಕ್ ಶೈಲಿಯಿಂದ ಬಿಸಿಮುಟ್ಟಿಸುವ ಮುಖೇನ ಬಗ್ಗುವ, ಹೊಂದಾಣಿಕೆಯ ಜಾಯಮಾನ ಇಲ್ಲ ಎಂದು ಸಂದೇಶ ಸಾರಿದ್ದಾಗಿ ಮಾಹಿತಿ ದೊರೆತಿದೆ. ಕಾರ್ಯಕರ್ತರ ಸೃಷ್ಟಿಗೆ ವಾಜಪೇಯಿ -ಅಡ್ವಾಣಿ ಜೋಡಿ ನಾಯಕರು ಕಾರಣ. ಪ್ರಸ್ತುತ ತದ್ವಿರುದ್ದ ಬೆಳವಣಿಗೆಯಲ್ಲಿ ಮೂಲ ಬಿಜೆಪಿಗರು ಪಕ್ಷ ಬಿಟ್ಟು ಹೋಗಲು ಸಂಸದರು, ಶಾಸಕರು ಹಾಗು ಸ್ಥಳೀಯ ನಾಯಕತ್ವ ವೇ ಕಾರಣ. ಅವರ ನೋವು ಆಲಿಸುವವರಿಲ್ಲ. ನೊಂದವರು ಇವರಿಗೆ ಸೋಲಿನ ಪಾಠ ಕಲಿಸಲು ಹಾತೊರೆಯುತ್ತಿದ್ದಾರೆ. ಯುವ ಕಾರ್ಯಕರ್ತರೆ ಈ ಸಾಲಿನಲ್ಲಿ ಹೆಚ್ಚು ಅಂತಾ ಸಭೆಯಲ್ಲಿ ಹೇಳಿರುವುದಾಗಿ ಮಾಹಿತಿ ದೊರೆತಿದೆ.

ಸುಳ್ಯ ಸಂಘಟನೆ ಮತ್ತು ಅತೀ ಕಡಿಮೆ ಖರ್ಚಿನಲ್ಲಿ ಚುನಾವಣೆ ಎದುರಿಸುವಂತ ಸಂಗತಿಗಳಂತಹ ನೇರ ಪ್ರಯೋಗಗಳಿಗೆ ಬದ್ಧತೆಯ ನೆಲ. ಅಂತಹ ಮಾದರಿ ಕ್ಷೇತ್ರದಲ್ಲಿ ಇಂತಹ ಕ್ಷುಲ್ಲಕ ಸಂಗತಿಗಳೇಕೆ ಹುಟ್ಟಿದವು ಎಂದು ಪ್ರಶ್ನಿಸಿದ ಅವರು ಪಕ್ಷ ದಿಂದ ಹೊರಹೋಗುವವರು ಹೋಗಲಿ, ಎಷ್ಟು ಯುವಕರನ್ನು ಬೆಳೆಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಎಂದು ಪಕ್ಷ ಮೂಲಗಳು ಮಾಹಿತಿ ನೀಡಿವೆ.

Leave a Comment

Your email address will not be published. Required fields are marked *