ಸುಳ್ಯ: ಪಾದಾಚಾರಿ‌ ಮಹಿಳೆ ಮೇಲೆ ಹರಿದ ಲಾರಿ| ಗಾಯಾಳು ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಪಾದಚಾರಿ ಮಹಿಳೆಯೊಬ್ಬರಿಗೆ ಯಮಸ್ವರೂಪಿ ಲಾರಿ ಗುದ್ದಿದ್ದು ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಸುಳ್ಯ ನಗರದ ಬಸ್ ನಿಲ್ದಾಣ ಬಳಿ ಮಂಗಳವಾರ ತಡರಾತ್ರಿ ನಡೆದಿದೆ.

Ad Widget ... ..

ಮಾಣಿ‌-ಮೈಸೂರು ರಾ. ಹೆದ್ದಾರಿಯಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ ತಮಿಳು ನಾಡು ನೋಂದಣಿ ಲಾರಿಯೊಂದು ಮಹಿಳೆಗೆ ಗುದ್ದಿದ್ದು, ಗಂಭೀರ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Ad Widget

ಸುಮಾರು 40 ವರ್ಷ ಪ್ರಾಯವಿರಬಹುದೆಂದು ಅಂದಾಜಿಸಲಾಗಿದೆ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಪತ್ತೆಯಾಗಿರುವುದಿಲ್ಲ. ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *