ಸಮಗ್ರ ನ್ಯೂಸ್: 2018ರ ಪ್ರಕೃತಿ ವಿಕೋಪದಲ್ಲಿ ಕೊಡಗು ಜಿಲ್ಲೆಯ ಹಲವು ಭಾಗದಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದ ವತಿಯಿಂದ ಪುನರ್ ವಸತಿ ಕಲ್ಪಿಸಲಾಗಿತ್ತು. ಆಗಿನ ಜಿಲ್ಲಾಧಿಕಾರಿಯಾಗಿದ್ದ ವಿದ್ಯಾ ಹಾಗೂ ಉಪ ವಿಭಾಗಾಧಿಕಾರಿ ಜವರೇಗೌಡ ಅವರು ಮಡಿಕೇರಿ ನಗರದ ಇಂದಿರಾ ನಗರ, ಚಾಮುಂಡೇಶ್ವರಿ ನಗರ ಹಾಗೂ ತ್ಯಾಗರಾಜ ಕಾಲೋನಿ ಹಾಗೂ ಮಡಿಕೇರಿ ನಗರಕ್ಕೆ ಸಂಬಂಧಪಟ್ಟ ಹಲವು ನಗರಗಳಲ್ಲಿ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರು ಹಾಗೂ ಹಾನಿಯಾದವರಿಗೆ ಮನೆಗಳನ್ನು ನೀಡುವ ಸಂದರ್ಭದಲ್ಲಿ ತಮ್ಮ ವಾಸದ ಮನೆಯ ಬದಲಿಗೆ ಪುನರ್ವಸತಿ ನೀಡುವ ಸಂದರ್ಭದಲ್ಲಿ ತಮ್ಮ ಹಳೆಯ ವಾಸದ ಮನೆಯನ್ನು ಹೊಡೆದು ತೆರವು ಮಾಡುವ ಫೋಟೋಗಳು ಹಾಗೂ ನಗರ ಸಭೆಗೆ ಪಾವತಿಸಬೇಕಾದ ತೆರಿಗೆಗಳನ್ನೆಲ್ಲ ಪಾವತಿಸಿದ ದಾಖಲೆಗಳನ್ನು ನೀಡುವಂತೆ ಆದೇಶ ಮಾಡಲಾಗಿತ್ತು.
ಅದಕ್ಕೆ ಅನುಸಾರವಾಗಿ ಮಾದಾಪುರದ ಜಂಬೂರು, ಗಾಳಿಬೀಡು, ಕೆನಿಡುಗಣೆ, ಕರ್ಣಂಗೇರಿ, ಹಾಕತ್ತೂರು ಬಿಳಿಗೇರಿ, ಗೋಳಿಕಟ್ಟೆ ಭಾಗದಲ್ಲಿ ಮನೆಗಳನ್ನು ಪಡೆದುಕೊಂಡಂತಹ ಹಲವು ಫಲಾನುಭವಿಗಳು ತಮ್ಮ ಹಳೆಯ ಮನೆಯನ್ನು ಹೊಡೆದು ತೆರೆವು ಮಾಡುವ ಫೋಟೋಗಳು ಹಾಗೂ ಸ್ಥಳೀಯ ಸಂಸ್ಥೆಗೆ ಕಟ್ಟಬೇಕಾದ ತೆರಿಗೆಯನ್ನು ಕಟ್ಟಿ ಸರಕಾರದಿಂದ ನೀಡಿರುವ ಹೊಸ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಆದರೆ ಸರಕಾರದ ಆದೇಶದಂತೆ ಅ ಜಾಗ ಅಪಾಯಕಾರಿ ಹಾಗೂ ಹಳೆಯ ಮನೆಗಳು ವಾಸ ಮಾಡಲು ಯೋಗ್ಯವಿಲ್ಲದೆ ಇರುವುದರಿಂದ ಅ ಜಾಗವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡು ಅಲ್ಲಿ ಗಿಡಗಳನ್ನು ನೆಡುವುದಾಗಿ ಹೇಳಲಾಗಿತ್ತು. ಆದರೆ ಕಾಲಕ್ರಮೇಣ ಆ ಜಾಗಗಳನ್ನು ಕೆಲವರು ಒತ್ತುವರಿ ಮಾಡಿ ಕೊಳ್ಳುತ್ತಿದು ಅದೇ ರೀತಿಯಲ್ಲಿ ಕೆಲವರು ಜಿಲ್ಲಾಡಳಿತದಿಂದ ನೀಡಿರುವ ಪುನರ್ವಸತಿ ಮನೆಯಲ್ಲೂ ಹಾಗೂ ಪ್ರಕೃತಿ ವಿಕೋಪದಲ್ಲಿ ಹಾನಿಯಾದ ಹಳೆಯ ಮನೆಯಲ್ಲೂ ವಾಸ ಮಾಡುತ್ತಿದ್ದು. ಕೆಲವರು ಈ ಹಳೆಯ ಮನೆಗೆಗಳನ್ನು ಬಾಡಿಗೆಗೆ ನೀಡುತ್ತಿರುವುದು ಕಂಡು ಬರುತ್ತಿದೆ ಸರಕಾರದ ಆದೇಶವನ್ನು ಧಿಕ್ಕರಿಸಿ ಕೆಲವರು ಸರಕಾರದ ಕಣ್ಣಿಗೆ ಮಣ್ಣೆರಚ್ಚುವ ಕೆಲಸ ಮಾಡುತ್ತಿದ್ದಾರೆ.
ಇದರ ಬಗ್ಗೆ ಸಾರ್ವಜನಿಕರು ಸ್ಥಳೀಯ ನಗರಸಭೆಯ ಗಮನಕ್ಕೆ ತಂದರು ಕೂಡ ನಗರಸಭೆ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ನೋಡಿದರೆ ನಗರಸಭಾ ಸಿಬ್ಬಂದಿಗಳು ಹಾಗೂ ಕೆಲವು ನಗರಸಭಾ ಸದಸ್ಯರು ಇವರುಗಳಿಗೆ ಬೆಂಬಲ ನೀಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ಮಾಡಿ ಕೂಡಲೇ ನಗರಸಭಾ ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಂಡು ಇದೇ ರೀತಿಯಲ್ಲಿ ಹಳೆಯ ಮನೆಯಲ್ಲಿ ಹಾಗೂ ಜಿಲ್ಲಾಡಳಿತದಿಂದ ನೀಡಿರುವ ಪುನರ್ವಸತಿ ಮನೆಯಲ್ಲಿ ಎರಡರಲ್ಲೂ ವಾಸ ಮಾಡುತ್ತಿರುವವರ ಮೇಲೆ ಕ್ರಮ ತೆಗೆದುಕೊಂಡು ಅವರಿಗೆ ನೀಡಿರುವ ಪುನರ್ವಸತಿ ಮನೆಯನ್ನು ಸರಕಾರ ಸುಪರ್ದಿಗೆ ತೆಗೆದುಕೊಳ್ಳಬೇಕಾಗಿ ವಿನಂತಿ ಮಾಡಿದರು. ಇಲ್ಲದಿದ್ದ ಪಕ್ಷದಲ್ಲಿ ಮಡಿಕೇರಿ ನಗರದಲ್ಲಿ ಪ್ರಕೃತಿ ವಿಕೋಪದಡಿ ಮನೆಗಳುನು ನೀಡಿದಂತಹ ಎಲ್ಲಾ ಫಲಾನುಭವಿಗಳ ಹಳೆಯ ಜಾಗ ಹಾಗೂ ಹಳೆಯ ಮನೆಯನ್ನು ಈಗ ಕೆಲವರು 2 ರಲ್ಲು ವಾಸ ಮಾಡುತ್ತಿರುವಂತೆ ಎಲ್ಲರಿಗೂ ವಾಸ ಮಾಡಲು ಅವಕಾಶ ಮಾಡಿಕೊಡಬೇಕು. ಹಳೆಯ ಮನೆಯಲ್ಲೂ ಹಾಗೂ ಪುನರ್ವಸತಿ ಕಲ್ಪಿಸಿದ ಮನೆ ಎರಡರಲ್ಲೂ ವಾಸ ಮಾಡುತ್ತಿರುವವರನ್ನು ತೆರೆವು ಮಾಡಿ ಒಂದರಲ್ಲೇ ವಾಸ ಮಾಡುವಂತೆ ಆದೇಶ ಮಾಡಬೇಕು. ಅವರುಗಳು ತೆರವು ಮಾಡದಿದ್ದ ಪಕ್ಷದಲ್ಲಿ ಎಲ್ಲಾ ಪ್ರಕೃತಿ ವಿಕೋಪ ದಡಿ ಪುನರ್ವಸತಿ ಪಡೆದಂತಹ ಫಲಾನುಭವಿಗಳು ಹಾಗೂ ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸಂಘ ಸಂಸ್ಥೆಗಳ ನೊಳಗೂಡಿ ಮುಂದಿನ ದಿನಗಳಲ್ಲಿ ಮಡಿಕೇರಿ ನಗರದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಆದುದ್ದರಿಂದ ತಾವುಗಳು ದಯಮಾಡಿ ಇದರ ಬಗ್ಗೆ ಕೂಲಂಕುಶವಾಗಿ ತನಿಖೆ ನಡೆಸಿ ಎರಡು ಕಡೆ ವಾಸ ಮಾಡುತ್ತಿರುವವರನು ತೆರವು ಮಾಡಿ ಇದಕ್ಕೆ ಬೆಂಬಲ ನೀಡುತ್ತಿರುವ ಜಿಲ್ಲಾಡಳಿತದ ಹಾಗೂ ನಗರಸಭೆಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮನವಿ ನೀಡಲಾಯಿತು.