Ad Widget .

29 ರೂಪಾಯಿಗೆ ಕೇಂದ್ರದ ಭಾರತ್ ಅಕ್ಕಿ ಲಭ್ಯ|ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಕ್ರಮ

ಸಮಗ್ರ ನ್ಯೂಸ್: ಇನ್ನೇನು ಲೋಕ ಸಭಾ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಪಕ್ಷಗಳು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಿವೆ. ಈಗ ಕೇಂದ್ರ ಸರ್ಕಾರ ಭಾರತ್ ಬ್ರ್ಯಾಂಡ್‌‌ ಅಕ್ಕಿ ಇಂದಿನಿಂದ ಗ್ರಾಹಕರ ಕೈಗೆ ಸಿಗಲಿದೆ. ಕೆಜಿ ಭಾರತ್ ಬ್ರ್ಯಾಂಡ್​ ಅಕ್ಕಿಗೆ 29 ರೂ.ದರ ನಿಗದಿ ಮಾಡಲಾಗಿದು, 5, 10 ಕೆಜಿ ಬ್ಯಾಗ್ ಗಳಲ್ಲಿ ಭಾರತ್ ಅಕ್ಕಿ ಲಭ್ಯವಾಗಲಿದೆ.

Ad Widget . Ad Widget .

ಭಾರತ್ ಅಕ್ಕಿ ಯೋಜನೆಯಡಿ ಕೆಜಿ ಭಾರತ್ ಅಕ್ಕಿ 29 ರೂ.ಗೆ ಲಭ್ಯವಾಗಲಿದೆ. 5 ಕೆಜಿ, 10 ಕೆಜಿ ಬ್ಯಾಗ್​ಗಳಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಲಭ್ಯವಾಗಲಿದೆ. ಸಂಜೆ 4 ಗಂಟೆಯಿಂದ ಬೆಂಗಳೂರಿನಲ್ಲಿ ಭಾರತ್​ ಅಕ್ಕಿ ಮಾರಾಟ ಆರಂಭವಾಗುತ್ತೆ. ನಾಳೆ ಮಂಡ್ಯ, ಇನ್ನೊಂದು ವಾರದಲ್ಲಿ ಇತರೆ ಜಿಲ್ಲೆಗಳಲ್ಲೂ ಲಭ್ಯವಾಗಲಿದೆ.

Ad Widget . Ad Widget .

ಇನ್ನು ರಿಲಯನ್ಸ್​​, ಫ್ಲಿಪ್​​ಕಾರ್ಟ್​, ಬಿಗ್​ ಬಾಸ್ಕೆಟ್​ ಅಷ್ಟೇ ಅಲ್ಲದೆ ಆನ್​ಲೈನ್​ನಲ್ಲೂ ಭಾರತ್ ಬ್ರ್ಯಾಂಡ್ ಅಕ್ಕಿ ಖರೀದಿ ಮಾಡಬಹುದು. ಇನ್ನೊಂದು ವಾರದಲ್ಲಿ ಇತರೆ ಸ್ಟೋರ್​ಗಳಲ್ಲೂ ಭಾರತ್ ಅಕ್ಕಿ ಲಭ್ಯವಾಗಲಿದೆ. ಎನ್‌ಸಿಸಿಎಫ್‌ನ ಮುಖ್ಯ ಗೋಡಾನ್ ಯಶವಂತಪುರದಲ್ಲಿದ್ದು ಬೆಂಗಳೂರಿನ 50 ಏರಿಯಾಗಳಿಗೆ ಮೊಬೈಲ್ ವ್ಯಾನ್ ಮೂಲಕ ಮನೆ ಮನೆಗೆ ಅಕ್ಕಿ ತಲುಪಿಸಲು ಸಿದ್ಧತೆ ನಡೆದಿದೆ.

Leave a Comment

Your email address will not be published. Required fields are marked *