ಸಮಗ್ರ ನ್ಯೂಸ್: ಬಿಜೆಪಿಯಿಂದ ಪುತ್ತಿಲ ಪರಿವಾರಕ್ಕೆ ಷರತ್ತು ಬದ್ಧ ಆಹ್ವಾನ ಸಿಕ್ಕಿರುವ ಹಿನ್ನಲೆಯಲ್ಲಿ ಪುತ್ತಿಲ ಪರಿವಾರ ಬಿಜೆಪಿಗೆ ಮೂರು ದಿನಗಳ ಗಡುವು ನೀಡಿದೆ.
ಪುತ್ತಿಲ ಪರಿವಾರದ ಬೆಂಬಲಿಗರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶ್ರೀಕೃಷ್ಣ ಉಪಾದ್ಯಾಯ, ಬಿಜೆಪಿ ನಾಯಕರಿಗೆ ಗಡುವು ವಿಧಿಸಿದ್ದು, ಮೂರು ದಿನಗಳೊಳಗೆ ಎಲ್ಲವೂ ಸರಿಯಾಗುವಂತೆ ನೋಡಿಕೊಳ್ಳಿ. ಎಲ್ಲವೂ ಸರಿಯಾಗುವ ಶಕ್ತಿಯನ್ನು ಈ ತುಳುವ ಮಣ್ಣು ನೀಡಲಿ. ನೀವು ಸತಾಯಿಸುವುದು ಬೇಡ ನಾಲ್ಕು ಜನರನ್ನು ಸರಿ ಮಾಡಿ ಇಲ್ಲವಾದಲ್ಲಿ ಪುತ್ತಿಲ ಪರಿವಾರ ಸಾಮಾಜಿಕ ಸಂಘಟನೆಯಾಗಿ ಹುಟ್ಟಿದ್ದು ಹೌದಾದರೂ ಮುಂದೆ ರಾಜಕೀಯ ಕ್ಷೇತ್ರಕ್ಕೆ ಧುಮುಕಲು ಟೊಂಕಕಟ್ಟಿ ಕೊಳ್ಳುತ್ತೇವೆ ಎಂದು ಸಂಘಟನಾ ಸಂದೇಶ ರವಾನಿಸಿದ್ದಾರೆ.
ಅರುಣ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ಬಿಜೆಪಿಯ ಸ್ಥಾಪಿತ ಬೆರಳೆಣಿಕೆಯ ಜನರ ವಿರೋಧವಿದೆ.
ನಾವು ಉಲ್ಲೇಖಿಸುವಂತೆ ಹಿಂದುತ್ವ ಆಗಬೇಕಾದರೆ ಎಲ್ಲಾ ಹಿತಾಸಕ್ತಿಗಳನ್ನು ಬದಿಗಿಟ್ಟು, ಅರುಣ್ ಕುಮಾರ್ ಪುತ್ತಿಲ ಅವರನ್ನು ಪಕ್ಷಕ್ಕೆ ಕರೆದುಕೊಳ್ಳದೆ ಬೇರೆ ವಿಧಿ ಇಲ್ಲ ಎಂದು ಶ್ರೀ ಕೃಷ್ಣ ಉಪಾಧ್ಯಾಯ ಹೇಳಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಹಿಂದೆ ಬಹುದೊಡ್ಡ ಪಡೆ ಇದೆ. ಅರುಣಣ್ಣನ ಜೊತೆ ಇರುವ ಟೀಂ ಬೇರೆ ಯಾರಿಗೂ ಸಿಕ್ಕಿಲ್ಲ. ಆ ಕಾರಣದಿಂದಲೇ ಪುತ್ತೂರಿನ ಚುನಾವಣೆ ಹೈಲೈಟ್ ಆಗಿದೆ. ಪುತ್ತಿಲ ಲೀಡರ್‌ಶಿಪ್‌ನಲ್ಲಿ ಸೇರುವಷ್ಟು ಜನ ಸೇರಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಅರುಣ್ ಕುಮಾರ್ ಪುತ್ತಿಲ ಅವರಿಗೆ ಹುದ್ದೆ ಕೊಡಬೇಕೆಂದು ಕೇಳುತ್ತಿದ್ದೇವೆ ಎಂದು ಉಪಾಧ್ಯಾಯ ಹೇಳಿದ್ದಾರೆ.
ಪುತ್ತಿಲ ಪರಿವಾರ ಬಿಜೆಪಿಗೆ ಸೆರ್ಪಡೆಯಾಗಬೇಕೆಂದು ಇಷ್ಟವಿದೆ. ಆದರೆ ಅರುಣ್ ಕುಮಾರ್ ಪುತ್ತಿಲ ಒಳಗೆ ಬಂದ್ರೆ ನಮ್ಮ ಕುರ್ಚಿಗೆ ಪೆಟ್ಟು ಬೀಳುತ್ತೆ ಎಂದು 4 ಜನ ಮಾತ್ರ ಅಡ್ಡಿ ಬಿಟ್ರೆ 32000 ಜನರ ವಿರೋಧವೇ ಇಲ್ಲ ಎಂದರು. ಪುತ್ತೂರು ರಾಜಕೀಯ ಸರಿಯಾಗಲಿಲ್ಲವೆಂದರೆ ಮುಂದೆ ನಾವು ಮುಂದೆ ಅನಿವಾರ್ಯವಾಗಿ ರಾಜಕೀಯ ಕ್ಷೇತ್ರಕ್ಕೆ ನಿಲ್ಲೋದು ಪಕ್ಕ ಎಂದು ಪುತ್ತಿಲ ಪರಿವಾರದ ಮುಖಂಡ ಶ್ರೀ ಕೃಷ್ಣ ಉಪಾಧ್ಯಾಯ ಹೇಳಿಕೆ ನೀಡಿದ್ದಾರೆ.