Ad Widget .

ದ್ವಾದಶ ರಾಶಿಗಳ ವಾರಭವಿಷ್ಯ| ಫೆ.4ರಿಂದ ರಿಂದ 10ರವರೆಗೆ

ಸಮಗ್ರ ನ್ಯೂಸ್: ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಆದ್ದರಿಂದ ಈ ವಾರದಲ್ಲಿ ಯಾವ ರಾಶಿಯವರಿಗೆ ಏನು ಫಲ? ಯಾರಿಗೆ ಲಾಭ, ಯಾರಿಗೆ ನಷ್ಟ? ಎಂಬುದನ್ನು ಇಲ್ಲಿ ನೀಡಲಾಗಿದೆ. ದ್ವಾದಶ ರಾಶಿಗಳ ಗೋಚಾರಫಲ ಏನು ಎಂಬುದನ್ನು ತಿಳಿಯೋಣ ಬನ್ನಿ…

Ad Widget . Ad Widget .

ಮೇಷ:
ಅನಿರೀಕ್ಷಿತವಾಗಿ ಎದುರಾಗುವ ಖರ್ಚು ವೆಚ್ಚಗಳ ಕಾರಣ ಗಲಿಬಿಲಿಗೆ ಒಳಗಾಗುವಿರಿ. ಆದರೆ ಕುಟುಂಬದ ಸದಸ್ಯರ ಸಹಾಯ ದೊರೆಯುವ ಕಾರಣ ತೊಂದರೆ ಇರದು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ. ಅನಿರೀಕ್ಷಿತವಾಗಿ ದೊರೆಯುವ ಶುಭಫಲಗಳು ನೆಮ್ಮದಿಗೆ ಕಾರಣವಾಗುತ್ತದೆ. ಭೂ ಸಂಬಂಧಿತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಅಪರೂಪಕ್ಕೆ ದೊರೆಯುವ ಅವಕಾಶಗಳನ್ನು ಕಳೆದುಕೊಳ್ಳದಿರಿ. ಕೆಲವು ಹಣಕಾಸಿನ ಯೋಜನೆಯಲ್ಲಿ ಬಂಡವಾಳ ಹೂಡುವಿರಿ. ವಿದ್ಯಾರ್ಥಿಗಳಿಗೆ ಉನ್ನತ ಯಶಸ್ಸು ದೊರೆಯುತ್ತದೆ. ಹಿರಿಯರ ಮಾರ್ಗದರ್ಶನವನ್ನು ಪಾಲಿಸಿದರೆ ಯಾವುದೇ ದೋಷ ಉಂಟಾಗುವುದಿಲ್ಲ. ಸಮಾಜ ಸೇವೆಯಲ್ಲಿ ಅಥವಾ ರಾಜಕೀಯದಲ್ಲಿ ಇರುವವರಿಗೆ ವಿಶೇಷ ಗೌರವ ಲಭಿಸುತ್ತದೆ.

Ad Widget . Ad Widget .

ವೃಷಭ:
ಅನಾರೋಗ್ಯದ ಕಾರಣ ಉದ್ಯೋಗದಲ್ಲಿನ ಅವಕಾಶವೊಂದು ಕೈ ತಪ್ಪುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ. ಧೈರ್ಯ ಮತ್ತು ನಿಷ್ಟುರದಿಂದ ಹಣಕಾಸಿನ ವಿವಾದದಲ್ಲಿ ಗೆಲುವು ಸಾಧಿಸುವಿರಿ. ಹಣಕಾಸಿನ ವ್ಯವಹಾರ ಮಾಡುವ ವೇಳೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಅನುಕೂಲತೆಗಳು ದೊರೆಯಲಿವೆ. ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡುವಿರಿ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ವೆಚ್ಚಗಳು ಎದುರಾಗಲಿವೆ. ಮನಸ್ಸಿಲ್ಲದೆ ಹೋದರು ವೃತ್ತಿಯನ್ನು ಬದಲಾಯಿಸುವ ನಿರ್ಧಾರಕ್ಕೆ ಬರುವಿರಿ. ಕುಟುಂಬದ ಸದಸ್ಯರ ಜೊತೆಯಲ್ಲಿ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ.

ಮಿಥುನ:
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರು ಮನದಲ್ಲಿ ಭಯವಿರುತ್ತದೆ. ಕುಟುಂಬದಲ್ಲಿ ಅನವಶ್ಯಕವಾದ ವಿವಾದಗಳು ಎದುರಾಗಲಿವೆ. ಆದರೆ ಕುಟುಂಬದ ಹಿರಿಯರ ಮಧ್ಯಸ್ಥಿಕೆಯಿಂದ ನೆಮ್ಮದಿ ನೆಲೆಸುತ್ತದೆ. ಹಣಕಾಸಿನ ಕೊರತೆ ದೂರವಾಗುತ್ತದೆ. ಸಂಗಾತಿಯು ಸಂಧಿಗ್ದ ಪರಿಸ್ಥಿತಿಯೊಂದರಲ್ಲಿ ಸಿಲುಕಬಹುದು. ಸತತ ಪ್ರಯತ್ನದಿಂದ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಅನುಭವಸ್ಥರ ಸಹಾಯದಿಂದ ಉದ್ಯೋಗದಲ್ಲಿನ ಸಮಸ್ಯೆಯೊಂದು ಬಗೆಹರಿಯುವುದು. ವಿದ್ಯಾರ್ಥಿಗಳು ಯಾವುದೇ ಕಷ್ಟವಿಲ್ಲದೆ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ. ಮೊದಲೇ ನಿಯೋಜಿಸಿದ ಪ್ರವಾಸ ಒಂದು ಮೊಟಕುಗೊಳ್ಳಲಿದೆ. ಪ್ರವಾಸದಿಂದ ನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯೊಂದು ಕಂಡು ಬರುತ್ತದೆ.

ಕಟಕ:
ಸಮಯ ವ್ಯರ್ಥ ಮಾಡದೆ ಯಾವುದಾದರೊಂದು ಕೆಲಸದಲ್ಲಿ ನಿರತರಾಗುವಿರಿ. ಉದ್ಯೋಗದ ವಿಚಾರದಲ್ಲಿ ಗಾಳಿ ವರ್ತಮಾನವೊಂದು ಮನಕೆಡಿಸುತ್ತದೆ. ವಿಶ್ವಾಸದಿಂದ ಎಲ್ಲರೊಡನೆ ಬೆರೆತರೆ ಎದುರಾಗುವ ತೊಂದರೆಗಳು ದೂರವಾಗುತ್ತದೆ. ನಿಮ್ಮಲ್ಲಿರುವ ನಯ ವಿನಯದ ವ್ಯಕ್ತಿತ್ವ ಎಲ್ಲರ ಪ್ರೀತಿಯನ್ನು ಗಳಿಸುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಬುದ್ಧಿವಂತಿಕೆಯನ್ನು ಪಕ್ಕಕ್ಕಿಟ್ಟು ಬೇರೆಯವರ ಮಾತನ್ನು ಆಲಿಸಿರಿ. ಜೀವನದ ಅತಿ ಸಂತೋಷದ ಘಳಿಗೆಯೊಂದು ಎದುರಾಗಲಿದೆ. ತಂದೆ ಅಥವಾ ತಾಯಿಯ ಜೊತೆಯಲ್ಲಿ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಬಹುದು. ಆದರೆ ಆತ್ಮೀಯರ ಮಧ್ಯಸ್ಥಿಕೆಯಿಂದ ಪರಿಸ್ಥಿತಿಯು ತಿಳಿಕೊಳ್ಳುತ್ತದೆ.

ಸಿಂಹ:
ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಆಹಾರ ಕ್ರಮದಲ್ಲಿ ಬದಲಾವಣೆ ತಂದುಕೊಂಡರೆ ಅನಾರೋಗ್ಯದ ತೊಂದರೆ ಇರುವುದಿಲ್ಲ. ನಿರೀಕ್ಷೆಗೆ ಮೀರಿದ ಶುಭಫಲಗಳು ದೊರೆಯಲಿವೆ. ಮಕ್ಕಳ ಸಹಾಯದಿಂದ ಕುಟುಂಬದಲ್ಲಿನ ಅವ್ಯವಸ್ಥೆ ಕೊನೆಯಾಗುತ್ತದೆ. ಕುಟುಂಬದ ಸದಸ್ಯರ ಜೊತೆಗೂಡಿ ಹೊಸ ಹಣಕಾಸಿನ ಯೋಜನೆಗಳನ್ನು ರೂಪಿಸುವಿರಿ. ಆದಾಯವು ಏರುಮಟ್ಟದಲ್ಲಿ ಮುಂದುವರೆಯುತ್ತದೆ. ಕಷ್ಟದಲ್ಲಿ ಇದ್ದವರಿಗೆ ನೆರವಾಗಲೆಂದು ಹಣಕಾಸಿನ ಸಂಸ್ಥೆಯನ್ನು ಆರಂಭಿಸುವಿರಿ. ರಾಜಕೀಯ ಪ್ರವೇಶಿಸುವ ಆಸಕ್ತಿ ಇದ್ದರೆ ಈಗ ಸಾಧ್ಯವಾಗುತ್ತದೆ. ಅನಾವಶ್ಯಕವಾದ ಓಡಾಟ ಬೇಸರ ತರಿಸುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತಾರೆ.

ಕನ್ಯಾ:
ಈ ವಾರದಲ್ಲಿನ ಕೆಲಸ ಕಾರ್ಯಗಳಲ್ಲಿ ಉತ್ತಮ ಅನುಕೂಲತೆ ಕಂಡು ಬರುತ್ತದೆ. ಸಮಯಕ್ಕೆ ತಕ್ಕಂತೆ ಅನುಕೂಲವಾಗುವಂತಹ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಪ್ರತಿಯೊಂದು ವಿಚಾರದಲ್ಲಿಯೂ ಎಲ್ಲರನ್ನೂ ಟೀಕಿಸುವಿರಿ. ಆಡುವ ಮಾತಿನ ಮೇಲೆ ನಿಯಂತ್ರಣವಿದ್ದರೆ ಯಾವುದೇ ತೊಂದರೆ ಕಾಣುವುದಿಲ್ಲ. ಅನಿರೀಕ್ಷಿತ ಧನ ಲಾಭ ಇರುತ್ತದೆ. ಮೊದಲ ಪ್ರಾಶಸ್ತ್ಯ ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತವ್ರಿಕೆ ಕಂಡುಬರುತ್ತದೆ. ಪಾರುಗಾರಿಕೆಯ ವ್ಯಾಪಾರವನ್ನು ಆರಂಭಿಸಲು ನಿರ್ಧರಿಸುವಿರಿ. ವಿದ್ಯಾರ್ಥಿಗಳು ಹಿರಿಯರ ಸಲಹೆಯನ್ನು ಸ್ವೀಕರಿಸಿ ಮುಂದುವರೆಯುವುದು ಒಳ್ಳೆಯದು. ವಾಸ ಸ್ಥಳ ಬದಲಾಗುವ ಸಾಧ್ಯತೆಗಳಿವೆ. ಹೊಸ ಜಮೀನು ಅಥವಾ ಮನೆಯನ್ನು ಕೊಳ್ಳಲು ಸಾಧ್ಯವಾಗಲಿದೆ. ಹಣಕಾಸಿನ ವಿಚಾರದಲ್ಲಿ ದೂರವಾಗಿದ್ದ ಸಹೋದರರ ನಡುವೆ ಉತ್ತಮ ಬಾಂಧವ್ಯ ಉಂಟಾಗುತ್ತದೆ.

ತುಲಾ:
ಎಲ್ಲಾ ರೀತಿಯ ಅನುಕೂಲತೆಗಳು ಇದ್ದರು ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಉದ್ಯೋಗದಲ್ಲಿ ಬೇರೆಯವರ ಜವಾಬ್ದಾರಿಯು ನಿಮ್ಮದಾಗುತ್ತದೆ. ಅತಿಯಾದ ಕೆಲಸ ಕಾರ್ಯಗಳಿಂದಾಗಿ ಆರೋಗ್ಯದಲ್ಲಿ ಏರಿಳಿತ ಕಂಡು ಬರಬಹುದು. ಆತ್ಮೀಯ ಸ್ನೇಹಿತರ ಸಲಹೆ ಸೂಚನೆ ಪರಿಸ್ಥಿತಿಗೆ ಅನುಗುಣವಾಗಿ ದೊರೆಯಲಿದೆ. ಹಣದ ತೊಂದರೆ ಇರುವುದಿಲ್ಲ. ಅನಿವಾರ್ಯವಾಗಿ ಬೇರೆಯವರಿಗೆ ಹಣ ಸಹಾಯ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ಗುರುಗಳ ಸಹಾಯದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಮನದ ದುಗುಡದಿಂದ ದೂರವಾಗಲು ಕುಟುಂಬದ ಜನರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ಕುಟುಂಬದಲ್ಲಿ ಅನಿರೀಕ್ಷಿತವಾಗಿ ಮಂಗಳಕಾರ್ಯವನ್ನು ನೆರವೇರುವುದು.

ವೃಶ್ಚಿಕ:
ಗೆಲ್ಲಲು ಅಸಾಧ್ಯ ಎನಿಸುವ ಸವಾಲನ್ನು ಅನಿವಾರ್ಯವಾಗಿ ಒಪ್ಪುವಿರಿ. ಹರವು ಬಾರಿ ಒಂಟಿತನ ನಿಮ್ಮನ್ನು ಬಹುವಾಗಿ ಕಾಡುತ್ತದೆ. ದುಡುಕಿ ಮಾತನಾಡುವ ಕಾರಣ ಆತ್ಮೀಯರೊಂದಿಗೆ ವೈರತ್ವ ಉಂಟಾಗಬಹುದು. ವಿದ್ಯಾರ್ಥಿಗಳು ಕೇವಲ ಹೆಚ್ಚಿನ ಪ್ರಯತ್ನದಿಂದ ಮಾತ್ರ ಗುರಿ ತಲುಪಬಹುದು. ಅರಿವಿಲ್ಲದೆ ಮಾಡುವ ತಪ್ಪಿಗೆ ಪಶ್ಚಾತಾಪ ಪಡುವಿರಿ. ಭೂ ವಿವಾದದರಲ್ಲಿ ಕಾನೂನಿನ ಮುಖಾಂತರ ಜಯ ಗಳಿಸುವಿರಿ. ಕೃಷಿ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಪ್ರವಾಸ ಮಾಡುವ ಮುನ್ನ ಯೋಚಿಸಿ ನೋಡಿರಿ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆವಹಿಸಿ.

ಧನಸ್ಸು:
ಅದೃಷ್ಟದಿಂದ ಕೈ ಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಮನಸ್ಸಿಗೆ ಬೇಸರ ಉಂಟಾದಲ್ಲಿ ಧ್ಯಾನದಲ್ಲಿ ಮುಳುಗುವಿರಿ. ಯಾವುದೇ ಕೆಲಸ ಕಾರ್ಯವಾದರೂ ಅರೆ ಮನಸ್ಸಿನಿಂದ ಮಾಡುವಿರಿ. ಅವಿವಾಹಿತರಿಗೆ ವಿವಾಹದ ಮಾತುಕತೆ ನಡೆಯುತ್ತದೆ. ವಿದ್ಯಾರ್ಥಿಗಳು ವಿದೇಶದಲ್ಲಿ ಉದ್ಯೋಗವನ್ನು ಗಳಿಸಲಿದ್ದಾರೆ. ವಂಶದ ಆಸ್ತಿಯಲ್ಲಿ ಸಿಂಹ ಪಾಲು ನಿಮ್ಮದಾಗುತ್ತದೆ. ಬಹುದಿನದಿಂದ ಇದ್ದ ಧಾರ್ಮಿಕ ಮಂದಿರವನ್ನು ಕಟ್ಟಿಸುವ ಆಸೆ ನೆರವೇರಲಿದೆ. ಮನೆಯಲ್ಲಿ ಮನರಂಜನ ಕೂಟಕ್ಕೆ ಹೆಚ್ಚಿನ ಹಣವನ್ನು ವಿನಿಯೋಗಿಸುವಿರಿ. ಸೋದರ ಅಥವಾ ಸೋದರಿಯ ದಾಂಪತ್ಯ ಜೀವನದ ಸಮಸ್ಯೆಯನ್ನು ಬಗೆಹರಿಸುವಿರಿ. ಸಾಲದ ಸಮಸ್ಯೆ ಎದುರಾಗಬಹುದು.

ಮಕರ:
ಗೆಲ್ಲಬಲ್ಲ ಕೆಲಸ ಕಾರ್ಯಗಳನ್ನು ಮಾತ್ರ ಆಯ್ಕೆ ಮಾಡುವಿರಿ. ನಿಮ್ಮ ಅಂತರಂಗವನ್ನು ಅರಿಯುವುದು ಯಾರಿಂದಲೂ ಸಾಧ್ಯವಿಲ್ಲ. ಬೇರೆಯವರ ಸಹಾಯ ಮತ್ತು ಪ್ರೋತ್ಸಾಹದಿಂದ ಕೆಲಸ ಸಾಧಿಸುವುದು ಸಾಧ್ಯವಾಗುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇದ್ದರೂ ಮಾತಿನಲ್ಲಿ ಕಟುತನ ಇರುತ್ತದೆ. ತಂದೆಯವರ ಆರೋಗ್ಯದಲ್ಲಿ ಬಹು ದಿನಗಳ ನಂತರ ಚೇತರಿಕೆ ಉಂಟಾಗಲಿದೆ. ತಾಯಿಯವರ ದುಡುಕಿನ ಮಾತು ಜೀವನದ ಕುಟುಂಬದ ಒಗ್ಗಟ್ಟಿಗೆ ಮಾರಕವಾಗುತ್ತದೆ. ಕಷ್ಟ ಎನಿಸಿದರು ಅವಶ್ಯಕತೆ ತಕ್ಕಷ್ಟು ಹಣ ದೊರೆಯುತ್ತದೆ. ಸಂಗಾತಿಯ ಸಹಾಯದಿಂದ ಜೀವನದಲ್ಲಿ ಮುಂದುವರೆಯುವಿರಿ. ಆತ್ಮೀಯರಿಂದ ಹಣದ ಸಹಾಯ ಪಡೆಯುವಿರಿ.

ಕುಂಭ:
ಆರೋಗ್ಯದಲ್ಲಿ ತೊಂದರೆ ಕಾಣಬಹುದು. ಆಡುವ ಮಾತಿನಿಂದ ವಿವಾಹಕ್ಕೆ ಈಡಾಗಬೇಕಾಗುತ್ತದೆ. ಸವಾನಿಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡುವಿರಿ. ಬಾಯಿ ಅಥವಾ ಅನ್ನನಾಳದಲ್ಲಿ ಹುಣ್ಣಾಗಬಹುದು. ಅತಿಯಾದ ಆತ್ಮವಿಶ್ವಾಸ ಆತ್ಮೀಯ ಬಂಧುಗಳಲ್ಲೂ ಬೇಸರ ಮೂಡಿಸುತ್ತದೆ. ಯಾವುದೇ ಲೋಪದೋಷಗಳಿದ್ದರೂ ಸರಿಪಡಿಸಿಕೊಂಡು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ನೋವನ್ನೆಲ್ಲ ಮರೆತು ಎಲ್ಲರೊಡನೆ ಸಂತಸದಿಂದ ಬಾಳುವಿರಿ. ದೂರದ ಸಂಬಂಧಿಕರ ಜೊತೆಯಲ್ಲಿ ಪಾಲುಗಾರಿಕೆಯ ವ್ಯಾಪಾರ ಆರಂಭಿಸುವಿರಿ. ಈ ವಾರದಲ್ಲಿ ಹೋರಾಟದ ಮನೋಭಾವನೆಯನ್ನು ತೋರುವಿರಿ. ಬುದ್ಧಿವಂತಿಕೆಯ ಮಾತಿನಿಂದಲೇ ಹಣಗಳಿಸುವಿರಿ. ಸಾಕು ಪ್ರಾಣಿಗಳಿಂದ ತೊಂದರೆ ಉಂಟಾಗಬಹುದು ಎಚ್ಚರಿಕೆ ಇರಲಿ.

ಮೀನ:
ಉತ್ತಮ ಜೀವನವಿದ್ದರೂ ಮನಸ್ಸಿನಲ್ಲಿ ಅಧೀರತೆ ಮನೆ ಮಾಡಿರುತ್ತದೆ. ಹಣಕಾಸಿನ ಕೊರತೆ ಕಾಣುವುದಿಲ್ಲ. ಉದ್ಯೋಗದ ವಿಚಾರದಲ್ಲಿ ಆತ್ಮೀಯರ ಸಲಹೆಯನ್ನು ಪಾಲಿಸಬೇಕು. ಉದ್ಯೋಗ ಬದಲಾಯಿಸುವ ಸೂಚನೆಗಳಿವೆ. ಭವಿಷ್ಯದ ಜೀವನಕ್ಕಾಗಿ ಹಣಕಾಸಿನ ಯೋಜನೆಗಳಲ್ಲಿ ಹಣ ಹೂಡುವಿರಿ. ಸ್ನೇಹಿತರೊಂದಿಗೆ ಪರಸ್ಥಳಕ್ಕೆ ಪ್ರವಾಸಕ್ಕೆ ತೆರಳುವಿರಿ. ಮನಸ್ಸಿಗೆ ಒಪ್ಪದ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಹಣಕಾಸಿನ ತೊಂದರೆ ಇರುವವರಿಗೆ ಸಹಾಯ ಮಾಡುವಿರಿ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸುವಿರಿ. ಜೀವನ ಶೈಲಿಯಲ್ಲಿ ಹಲವು ಹಿತಕರ ಬದಲಾವಣೆಗಳು ಕಂಡುಬರುತ್ತವೆ.

Leave a Comment

Your email address will not be published. Required fields are marked *