Ad Widget .

ಸುಳ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ| ವೆಂಕಟ್ ವಳಲಂಬೆ ನೇಮಕಕ್ಕೆ ವಿರೋಧ| ಪಕ್ಷದ ಚಟುವಟಿಕೆ ಸ್ಥಗಿತಕ್ಕೆ ನಿರ್ಧಾರ

ಸಮಗ್ರ ನ್ಯೂಸ್: ಬಿಜೆಪಿಯ ಸುಳ್ಯ ಮಂಡಲ ಅಧ್ಯಕ್ಷರನ್ನಾಗಿ ವೆಂಕಟ್ ವಳಲಂಬೆಯವರನ್ನು ನೇಮಕ ಮಾಡಿದ ರೀತಿಯನ್ನು ವಿರೋಧಿಸಿರುವ ಸುಳ್ಯ ಮಂಡಲ ಬಿಜೆಪಿಯ ಈ ವ್ಯವಸ್ಥೆಯನ್ನು ಜಿಲ್ಲಾ ಸಮಿತಿಯವರು ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ.

Ad Widget . Ad Widget .

ಸುಳ್ಯ ಮಂಡಲ ಸಮಿತಿಯು ವಿನಯಕುಮಾರ್ ಮುಳುಗಾಡು ಅವರ ಹೆಸರನ್ನು ಮಂಡಲ ಅಧ್ಯಕ್ಷತೆಗೆ ಸೂಚಿಸಿ ಜಿಲ್ಲಾ ಕಮಿಟಿಗೆ ಶಿಫಾರಸ್ಸು ಕಳುಹಿಸಿತ್ತು. ಈ ಶಿಫಾರಸ್ಸನ್ನು ಹೊರತುಪಡಿಸಿ ಬೇರೆಯವರನ್ನು ನೇಮಕ ಮಾಡುವಾಗ ಮಂಡಲ ಸಮಿತಿಯನ್ನು ಸಂಪರ್ಕಿಸದೆ ತಮ್ಮ ಇಚ್ಛೆಯಂತೆ ನೇಮಕ ಮಾಡಿರುವುದು ಸರಿಯಲ್ಲ. ಈ ರೀತಿ ಹೇರಿಕೆಯ ಕ್ರಮವನ್ನು ನಾವು ವಿರೋಧಿಸಬೇಕು ಎಂದು ಪಕ್ಷದ‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೇರಿದ್ದ 2೦೦ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರೆಂದು ತಿಳಿದು ಬಂದಿದೆ.

Ad Widget . Ad Widget .

ಈ ಹಿನ್ನಲೆಯಲ್ಲಿ ಜಿಲ್ಲಾ ಸಮಿತಿಯವರು ಈಗ ಆಗಿರುವ ಪ್ರಮಾದವನ್ನು ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಬಳಿಕ ಬಿಜೆಪಿ ಕಚೇರಿಗೆ ಬೀಗ ಜಡಿಯಲಾಯಿತು. ಸದ್ಯ‌ ವೆಂಕಟ್ ವಳಲಂಬೆ ನೇಮಕ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದ್ದು, ಜಿಲ್ಲಾ ಸಮಿತಿಯ ನಿರ್ಧಾರ ಏನೆಂಬುದನ್ನು ಕಾದುನೋಡಬೇಕಿದೆ.

Leave a Comment

Your email address will not be published. Required fields are marked *