Ad Widget .

ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕರು ಮಹಿಳೆ ಮೇಲೆ ಹಲ್ಲೆ

ಸಮಗ್ರ ನ್ಯೂಸ್: ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ನಾಯಿ ಸಾಕುವ ವಿಚಾರವಾಗಿ ಫ್ಲಾಟ್ ಮಾಲೀಕರು ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ತಡರಾತ್ರಿ ಅಪಾರ್ಟ್​ಮೆಂಟ್​ನ ಫ್ಲಾಟ್​ಗೆ ನುಗ್ಗಿ ಹಲ್ಲೆ ನಡೆಸಲಾಗಿದೆ.

Ad Widget . Ad Widget .

ನಾಯಿ ಸಾಕಬಾರದು ಎಂದು ಫ್ಲಾಟ್ ಮಾಲೀಕ ಸೂಚಿಸಿದ್ದು, ಇದಕ್ಕೆ ಬಾಡಿಗೆದಾರರು ಒಪ್ಪಿಕೊಂಡಿಲ್ಲ. ಈ ವೇಳೆ ಮನೆ ಖಾಲಿ ಮಾಡುವಂತೆ ಮಾಲೀಕರು ಹೇಳಿದಾಗ ಕಿರಿಕ್ ನಡೆದಿದೆ. ಫೆಬ್ರವರಿ 3 ರಂದು ಮಧ್ಯರಾತ್ರಿ ಒಂದು ಗಂಟೆಗೆ ಫ್ಲಾಟ್​ಗೆ ನುಗ್ಗಿದ ನಾಲ್ಕೈದು ಮಂದಿ ಇದ್ದ ಗ್ಯಾಂಗ್, ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.

Ad Widget . Ad Widget .

ಜೀವನ್ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ಪೊಲೀಸರು ಎಫ್​ಐಆರ್ ದಾಖಲಿಸಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ

Leave a Comment

Your email address will not be published. Required fields are marked *