Ad Widget .

ರಾಜ್ಯದಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಅಧಿಕಾರಿಗಳ ಕಾರ್ಯಚರಣೆಯಿಂದ 109 ನಕಲಿ ವೈದ್ಯರು ಪತ್ತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. MBBS ಮಾಡಿಲ್ಲ ಅಂದ್ರೂ ಕ್ಲಿನಿಕ್ ಇಟ್ಕೊಂಡು ಚಿಕಿತ್ಸೆ ನೀಡಿ ಅಮಾಯಕರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ನಕಲಿ ವೈದ್ಯರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಸದ್ಯ ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ನಕಲಿ ವೈದ್ಯರ ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದ್ದು 109 ನಕಲಿ ವೈದ್ಯರು ಪತ್ತೆಯಾಗಿದ್ದಾರೆ.

Ad Widget . Ad Widget .

ಕಲಬುರಗಿ ಜಿಲ್ಲೆಯ ಹಳ್ಳಿಗಳಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. KPME ಅನುಮತಿ ಪಡೆಯದೆ ಜನರಿಗೆ ಚಿಕಿತ್ಸೆ ನೀಡಿ ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಟೀಂ ರಚಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. 43 ಕ್ಲಿನಿಕ್​ಗಳನ್ನ ಬಂದ್ ಮಾಡಿಸಿ ನೋಟಿಸ್ ನೀಡಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *