Ad Widget .

ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ದೂರು|ಮಾಜಿ ಸಿಎಂ ಹೆಸರು ಹೇಳಿಕೊಂಡು ಹಣ ಪಡೆದು ಮೋಸ

ಸಮಗ್ರ ನ್ಯೂಸ್:ಬಿಗ್ ಬಾಸ್ ಕನ್ನಡ ಸೀಸನ್ 10ರ ರನ್ನರ್ ಅಪ್ ಆಗಿರುವ ಡ್ರೋನ್ ಪ್ರತಾಪ್ ಬಿಗ್​ಬಾಸ್​ಗೆ ಹೋಗುವ ಮುನ್ನವೇ ವಿವಾದಕ್ಕೆ ಸಿಲುಕಿದವರು, ಈಗ ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೆ ಪ್ರತಾಪ್ ವಿರುದ್ಧ ಸರಣಿ ದೂರುಗಳು ದಾಖಲಾಗುತ್ತಿವೆ. ಒಬ್ಬರಾದ ಮೇಲೆ ಒಬ್ಬರು ಪ್ರತಾಪ್ ವಿರುದ್ಧ ವಂಚನೆಯ ಆರೋಪಗಳನ್ನು ಮಾಡುತ್ತಿದ್ದಾರೆ. ಇದೀಗ ಹೊಸದೊಂದು ಆರೋಪ ಪ್ರತಾಪ್ ವಿರುದ್ಧ ಕೇಳಿ ಬಂದಿದ್ದು, ಮಾಜಿ ಸಿಎಂ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಂದ ಲಕ್ಷಾಂತರ ಹಣ ಪಡೆದು ಮೋಸ ಮಾಡಿದ್ದಾರೆ ಎನ್ನಲಾಗುತ್ತಿದೆ.

Ad Widget . Ad Widget .

ಪ್ರತಾಪ್ ಜಿಲ್ಲಾ ಪಂಚಾಯಿತಿ ಚುನಾವಣೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಂದನ್ ಗೌಡ ಎಂಬುವರು ಡ್ರೋನ್ ಪ್ರತಾಪ್ ವಿರುದ್ಧ ದೂರು ನೀಡಿದ್ದಾರೆ. ‘ನನಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪರಿಚಯ ಚೆನ್ನಾಗಿದೆ. ಅವರ ಫಾರಂ ಹೌಸ್​ಗೆ ನಾನು ಆಗಾಗ್ಗೆ ಭೇಟಿ ನೀಡುತ್ತಿರುತ್ತೇನೆ. ಕುಮಾರಸ್ವಾಮಿ ನನಗೆ ಬಹಳ ಹತ್ತಿರ ಹಲವು ಭಾರಿ ಅವರನ್ನು ಭೇಟಿ ಆಗಿದ್ದೀನಿ, ಆದರೆ ಅದರ ಚಿತ್ರಗಳನ್ನು ನಾನು ಹಂಚಿಕೊಳ್ಳುವುದಿಲ್ಲ. ಕುಮಾರಸ್ವಾಮಿ ಅವರಿಗೆ ಹೇಳಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುತ್ತೇನೆ ಎಂದು ಪ್ರತಾಪ್ ಹೇಳಿದ್ದರು’ ಎಂದು ಚಂದನ್ ದೂರಿನಲ್ಲಿ ಹೇಳಿದ್ದಾರೆ.

Ad Widget . Ad Widget .

ಅಷ್ಟೆ ಅಲ್ಲದೆ ಚಂದನ್ ಜೊತೆಗೆ ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಅನ್ನು ಸಹ ಚಂದನ್ ಗೌಡ ಬಿಡುಗಡೆ ಮಾಡಿದ್ದಾರೆ. ಚಂದನ್ ಜೊತೆಗೆ ಮಾತನಾಡಿದ್ದ ಡ್ರೋನ್ ಪ್ರತಾಪ್ ‘ನನ್ನನ್ನು ಕಾಂಗ್ರೆಸ್ ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆ. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ. ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬನ್ನಿ ಪರಿಚಯ ಮಾಡಿಸುತ್ತೇನೆ, ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ, ಡಿಕೆ ಶಿವಕುಮಾರ್ ಥರ ಪೇಪರ್ ಎಸೆಯೋದು ಎಲ್ಲ ಮಾಡಲ್ಲ, ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ’ ಎಂದಿದ್ದರು ಪ್ರತಾಪ್.

ಬಿಗ್​ಬಾಸ್​ನಿಂದ ಹೊರಬಂದ ಬಳಿಕ, ಚಂದನ್ ಗೌಡ, ಪ್ರತಾಪ್ ಅವರನ್ನು ಸಂಪರ್ಕ ಮಾಡುವ ಪ್ರಯತ್ನ ಮಾಡಿದ್ದಾರಂತೆ ಅವರಿಗೆ ಸತತ ಫೋನ್ ಕರೆಗಳನ್ನು ಮಾಡಿದ್ದಾರೆ. ಆದರೆ ಪ್ರತಾಪ್, ಚಂದನ್​ರ ಫೋನ್ ಕರೆಗಳನ್ನು ಸ್ವೀಕರಿಸಿಲ್ಲವಂತೆ. ಇದೇ ಕಾರಣಕ್ಕೆ ಚಂದನ್ ಗೌಡ, ಇದೀಗ ಪೊಲೀಸ್ ಆಯುಕ್ತ ದಯಾನಂದ್ ಗೆ ದೂರು ನೀಡಿದ್ದಾರೆ.

Leave a Comment

Your email address will not be published. Required fields are marked *